SSF ನಿಂತಿಕಲ್ಲು ಶಾಖೆಯ ವತಿಯಿಂದ ಎಣ್ಮೂರು ಶಾಲೆಗೆ ನೀರಿನ ಟ್ಯಾಂಕ್ ಕೊಡುಗೆ

0

ಸುನ್ನೀ ಸ್ಟೂಡೆಂಟ್ ಪೆಡರೇಶನ್ ನಿಂತಿಕಲ್ಲು ಶಾಖೆಯ ವತಿಯಿಂದ ಸ್ವಾತಂತ್ರೋತ್ಸವದ ಅಮ್ರತ ಮಹೋತ್ಸವದ ಅಂಗವಾಗಿ ಎಣ್ಮೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ 1000 ಲೀಟರಿನ ನೀರಿನ ಟ್ಯಾಂಕ್ ನ್ನು ಕೊಡುಗೆಯಾಗಿ ನೀಡಲಾಯಿತು. ಶಾಖೆಯ ಅದ್ಯಕ್ಷ ರಫೀಖ್ ಕುಲಾಯಿತೋಡಿ ಟ್ಯಾಂಕನ್ನು ಶಾಲಾ ಮುಖ್ರೋಪಾದ್ಯಾಯಿನಿ ಶ್ರೀಮತಿ ಭುವನೇಶ್ವರಿಯವರಿಗೆ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಎಸ್ ಡಿಎಂಸಿ ಅದ್ಯಕ್ಷ ಶರೀಪ್ ಗುತ್ತಿಗೆ, ಉಪಾದ್ಯಕ್ಷೆ ಸುನಿತಾ ಕಜೆ , ಅಬ್ದುರಹಿಮಾನ್ ಅಂಗಡಿ ಉಮ್ಮರ್ ಕಜೆ ಝಕರಿಯಾ ಕುಲಾಯಿತೋಡಿ , ಅಬ್ಬಾಸ್ ಕಜೆ, ಸುಲೈಮಾನ್ ಕುಲಾಯಿತೋಡಿ, ಸಲೀತ್ ಮೊದಲಾದವರು ಉಪಸ್ಥಿತರಿದ್ದರು.