ಸವೇರಪುರ ಆಂಗ್ಲ ಮಾಧ್ಯಮ ಶಾಲೆಯಲ್ಲಿ 75ನೇ ಸ್ವಾತಂತ್ರ್ಯ ಸಂಭ್ರಮ ಆಜಾದೀ ಕಾ ಅಮೃತಮಹೋತ್ಸವ

0

ಸವೇರಪುರ ಶಾಲೆಯಲ್ಲಿ  ಆ.15 ರಂದು ಸ್ವಾತಂತ್ರ್ಯ ಅಮೃತಮಹೋತ್ಸವ ವನ್ನು ಆಚರಿಸಲಾಯಿತು. ಸಂಪಾಜೆ ಗ್ರಾಮ ಪಂಚಾಯತ್ ಅಧ್ಯಕ್ಷರು ಜಿ. ಕೆ ಹಮೀದ್ ರವರು ಧ್ವಜರೋಹಣ ನೆರವೇರಿಸಿದರು. ಸಮಾರಂಭದಲ್ಲಿ ಶಾಲಾ ಸಂಚಾಲಕರು ವಂದನೀಯ ಫಾ| ಪಾವ್ಲ್ ಕ್ರಾಸ್ತ, ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ವನಿತಾ, ಶಿಕ್ಷಕ – ರಕ್ಷಕ ಸಂಘದ ಉಪಾಧ್ಯಕ್ಷರಾದ ಹರೀಶ್.ಎಂ.ಎಸ್, ಚರ್ಚ್ ಪಾಲನಾ ಸಮಿತಿಯ ಉಪಾಧ್ಯಕ್ಷರಾದ ಶ್ರೀಮತಿ ಫಿಲೋಮಿನ, ಜಗದೀಶ್ ರೈ, ಮತ್ತು ಶ್ರೀಮತಿ ವಿಮಲಾ ಸದಸ್ಯರು ಗ್ರಾಮ ಪಂಚಾಯತ್ ಸಂಪಾಜೆ , ಸಿಸ್ಟರ್ ಸೆಲ್ವಿನ್ ಲತಾ, ಶಿಕ್ಷಕ -ರಕ್ಷಕ ಸಂಘದ ಸದಸ್ಯರು, ಹೆಚ್ಚಿನ ಸಂಖ್ಯೆಯಲ್ಲಿ ಪೋಷಕರು, ವಿದ್ಯಾಭಿಮಾನಿಗಳು ಉಪಸ್ಥಿತರಿದ್ದರು. ಬಳಿಕ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಸ್ಪರ್ಧೆಗಳು ನಡೆದವು .

p>

LEAVE A REPLY

Please enter your comment!
Please enter your name here