ಸುಳ್ಯ ಕೆ.ವಿ.ಜಿ. ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ  : ಜಪಾನಿನ ಆಯುರ್ವೇದ ಸಂಸ್ಥೆಯ ನಿರ್ದೇಶಕರಿಂದ ಉಪನ್ಯಾಸ

0
155

 

ಸುಳ್ಯದ ಕೆ.ವಿ.ಜಿ ಆಯುರ್ವೇದ ಮೆಡಿಕಲ್ ಕಾಲೇಜ್‌ನಲ್ಲಿ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಪ್ರಯುಕ್ತ ಆ. 15 ರಂದು ಜಪಾನಿನ ಪ್ರತಿಷ್ಠಿತ ಆಯುರ್ವೇದ ಸಂಸ್ಥೆಯ ನಿರ್ದೇಶಕರಾದ ಪ್ರೊ.ಡಾ. ಯು. ಕೆ. ಕೃಷ್ಣ ಇವರಿಂದ “ಆಯುರ್ವೇದದಲ್ಲಿ ಅಗ್ನಿಯ ಮಹತ್ವ ಮತ್ತು ಆರೋಗ್ಯ ಕಾಪಾಡುವಲ್ಲಿ ಅದರ ಪರಿಣಾಮ” ಎಂಬ ವಿಷಯದ ಬಗ್ಗೆ ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.

 

ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಡಾ. ಲೀಲಾಧರ್ ಡಿ. ವಿ. ಹಾಗೂ ಸಿಬ್ಬಂದಿಗಳು ಅತಿಥಿ ಉಪನ್ಯಾಸಕರನ್ನು   ಸ್ವಾಗತಿಸಿದರು.
ಕಾಲೇಜಿನ ವಿದ್ಯಾರ್ಥಿಗಳು ಈ ಉಪನ್ಯಾಸ ಕಾರ್ಯಕ್ರಮದಲ್ಲಿ ಭಾಗವಹಿಸಿ ಪ್ರಯೋಜನ ಪಡೆದುಕೊಂಡರು.

 

LEAVE A REPLY

Please enter your comment!
Please enter your name here