ಗೂನಡ್ಕ ತೆಕ್ಕಿಲ್ ಮಾದರಿ ಶಾಲೆಯಲ್ಲಿ ಸಂಪನ್ನಗೊಂಡ ಸ್ವಾತಂತ್ರ್ಯ ಅಮೃತಮಹೋತ್ಸವ

0

 

ಗೂನಡ್ಕ ತೆಕ್ಕಿಲ್ ಮಾದರಿ ಪ್ರಾಥಮಿಕ ಹಾಗೂ ಪ್ರೌಢ ಶಾಲೆಯಲ್ಲಿ ಸಂಭ್ರಮ, ಸಡಗರದಿಂದ ಸ್ವಾತಂತ್ರ್ಯ ಅಮೃತಮಹೋತ್ಸವವನ್ನು ಆಚರಿಸಲಾಯಿತು. ಹಿರಿಯ ಮುಖ್ಯೋಪಾಧ್ಯಾಯರಾದ ದಾಮೋದರ ಮಾಸ್ತರ್ ದ್ವಜಾಹಾರೋಹಣಗೈದರು. ವಿದ್ಯಾರ್ಥಿಗಳ ಕಾಲ್ನಡಿಗೆಯ‌ ಪಥಸಂಚಲನವು ವಿಶೇಷ ಆಕರ್ಷಣೆ ನೀಡಿತು.

ಶಾಲಾ ಎಸ್ ಡಿ ಎಂ ಸಿ ಅಧ್ಯಕ್ಷರಾದ ದಿನಕರ ಸಣ್ಣಮನೆಯವರ ಅಧ್ಯಕ್ಷತೆಯಲ್ಲಿ ನಡೆದ ಸಭಾಕಾರ್ಯಕ್ರಮದಲ್ಲಿ
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ‌  ಉಮ್ಮರ್ ಬೀಜದಕಟ್ಟೆಯವರು‌ ಮಾತನಾಡಿ , ದೇಶಕ್ಕೆ ಸ್ವಾತಂತ್ರ್ಯ ತಂದು ಕೊಟ್ಟ ಮಹನೀಯರನ್ನು ಸ್ಮರಿಸಿ ದೇಶ ಪ್ರೇಮ ಮೈಗೂಡಿಸಿಕೊಂಡು ಪ್ರತಿಯೊಬ್ಬರೂ ದೇಶದ ಪ್ರಗತಿಗೆ ಕೈಜೋಡಿಸಲು ವಿನಂತಿಸಿದರು. ಶಾಲಾ ಆಡಳಿತಾಧಿಕಾರಿ ರಹೀಂ ಬೀಜದಕಟ್ಟೆ, ಪೋಷಕರಾದ  ದಯಾನಂದ‌ ಓಟೆಡ್ಕರವರು ಸ್ವಾತಂತ್ರ್ಯದ ಅಮೃತ ಮಹೋತ್ಸವದ ಬಗ್ಗೆ ಹಾಗೂ ಪ್ರಸ್ತುತ ಅಗತ್ಯಗಳ ತಿಳಿಸಿದರು. ಎಸ್ ಡಿ ಎಂ ಸಿ ಉಪಾಧ್ಯಕ್ಷರಾದ ದೀಪಿಕಾ, ಶಾಲಾ ಮುಖ್ಯೋಪಾಧ್ಯಾಯಿನಿ ವಾಣಿ ಕೆ.ಯವರು ಭಾಗವಹಿಸಿದರು.

ವಿದ್ಯಾರ್ಥಿಗಳಿಂದ ದೇಶಭಕ್ತಿಯನ್ನು ಸಾರುವ ಹಲವಾರು ಸಾಂಸ್ಕೃತಿಕ ಕಾರ್ಯಕ್ರಮಗಳು ಮೂಡಿಬಂದವು. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.
ಈ ಸಂದರ್ಭದಲ್ಲಿ
ಎಸ್ ಡಿ ಎಂ‌ಸಿ ಸದಸ್ಯರುಗಳು‌, ಪೋಷಕ ವೃಂದದವರು, ಶಿಕ್ಷಕ ವೃಂದದವರು, ಹಾಗೂ ಊರ ಪರವೂರ ವಿದ್ಯಾಭಿಮಾನಿಗಳು ಉಪಸ್ಥಿತರಿದ್ದರು .

ಶಾಲಾ ನಾಯಕ ಉಫೈಫ್ ಸ್ವಾಗತಿಸಿ, ವಿದ್ಯಾರ್ಥಿಗಳಾದ ರೇಷ್ಮಾ, ಜಶಿಕಾ ನಿರೂಪಿಸಿದರು. ಸಹಶಿಕ್ಷಕ ಸಾಧಿಕ್ ಧನ್ಯವಾದಗೈದರು.