ಹಾಲೆಮಜಲು : ಸ್ವಾತಂತ್ರೋತ್ಸವ ಆಚರಣೆ

0

 

p>

 

ನಾಲ್ಕುರು ಗ್ರಾಮದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಹಾಲೆಮಜಲು, ಆದರ್ಶ ಯೂತ್ ಕ್ಲಬ್ ಹಾಲೆಮಜಲು, ನಾಲ್ಕುರು ವಿಪತ್ತು ನಿರ್ವಹಣಾ ಘಟಕ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಸ್ವಸಹಾಯ ಸಂಘ, ಊರಿನ ನಾಗರಿಕರು ಸೇರಿಕೊಂಡು 75 ನೇ ಸ್ವಾತಂತ್ರ್ಯೋತ್ಸವವನ್ನು ಹಾಲೆಮಜಲು ಬಸ್ಸು ತಂಗುದಾಣ ಪುಸ್ತಕಗೂಡು ಇಲ್ಲಿಂದ ತಿರಂಗ ಯಾತ್ರೆಯಲ್ಲಿ ಸಾಗಿ ಶಾಲೆಯಲ್ಲಿ ಧ್ವಜಾರೋಹಣವನ್ನು ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಕಾರ್ಯಧ್ಯಕ್ಷೆ ಶ್ರೀಮತಿ ಪವಿತ್ರ ಬಿ.ಕೆ ರವರು ನೆರವೇರಿಸಿ ಶುಭ ಹಾರೈಸಿದರು.

 

ಈ ಸಂದರ್ಭದಲ್ಲಿ ಗುತ್ತಿಗಾರು ಗ್ರಾಮ ಪಂಚಾಯತ್ ಸದಸ್ಯ ವಿನಯ ಸಾಲ್ತಾಡಿ, ಆದರ್ಶ ಯೂತ್ ಕ್ಲಬ್ ಅಧ್ಯಕ್ಷ ದಿನೇಶ ಹಾಲೆಮಜಲು, ವಿಪತ್ತು ಅಂಗನವಾಡಿ ಘಟಕದ ಸಂಯೋಜಕ ಸತೀಶ್ ಬೊಂಬುಳಿ ಮತ್ತಿತರರು ಉಪಸ್ಥಿತರಿದ್ದರು.
ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ಜಯಂತಿ ವಾಗ್ಲೆ ಸ್ವಾಗತಿಸಿದರು. ಅಂಗನವಾಡಿ ಶಿಕ್ಷಕಿ ತೇಜಾವತಿ ಬಾಳೆಕಜೆ ವಂದಿಸಿದರು. ಪ್ರತಿನಿಧಿ ಹರಿಶ್ಚಂದ್ರ ಕುಳ್ಳಂಪಾಡಿ ಕಾರ್ಯಕ್ರಮ ನಿರೂಪಿಸಿದರು.

(ವರದಿ : ಡಿ.ಹೆಚ್.)

LEAVE A REPLY

Please enter your comment!
Please enter your name here