ಕೋಮು ಪ್ರಚೋದನೆ ಮಾಡುವರ ಮೇಲೆ ಇಲಾಖೆ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಬೇಕು

0

 

p>

ಕೋಮು ಪ್ರಚೋದಕರನ್ನು ಎಲ್ಲ ಧರ್ಮ, ಪಕ್ಷದವರು ವಿರೋಧಿಸಿ, ಜಾಗೃತಿ ಮೂಡಿಸೋಣ : ಟಿ.ಎಂ. ಶಹೀದ್ ಸಲಹೆ

“ಸಮಾಜದಲ್ಲಿ ಕೋಮು ಪ್ರಚೋದನೆ ಮಾಡುವ ಯಾರೇ ಇರಲಿ ಅವರ ಮೇಲೆ ಇಲಾಖೆ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಬೇಕು ಮತ್ತು ಮತ್ತು ಕೋಮು ಪ್ರಚೋದಕರನ್ನು ಪಕ್ಷ, ಧರ್ಮ ಮರೆತು ವಿರೋಧಿಸಿ, ಸಮಾಜದಲ್ಲಿ ಜಾಗೃತಿ ಮೂಡಿಸುವ ಕೆಲಸ ಆಗಬೇಕು ಎಂದು ತೆಕ್ಕಿಲ್ ಪ್ರತಿಷ್ಠಾನ ಅಧ್ಯಕ್ಷ ಟಿ.ಎಂ. ಶಹೀದ್ ಹೇಳಿದ್ದಾರೆ.

ಇಂದು ಸುಳ್ಯದಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು, “ಇತ್ತೀಚಿನ ದಿನದಗಳಲ್ಲಿ ಮೂರು ಹತ್ಯೆ ಜಿಲ್ಲೆಯಲ್ಲಿ ನಡೆದಿದೆ. ಘಟನೆಯ ಬಳಿಕ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ಪೋಲೀಸರ ಕೆಲಸಕ್ಕೆ ಅಭಿನಂದನೆಗಳು. ಆದರೆ ಹತ್ಯೆಯಂತಹ ಘಟನೆ ನಮ್ಮ ಜಿಲ್ಲೆಗೆ ಕಳಂಕ. ಮತ್ತು ಮಗನನ್ನು ಕಳೆದುಕೊಂಡ ಮನೆಯವರಿಗೆ ತುಂಬಲಾರದ ನಷ್ಟ ವಾಗಿದೆ. ಹಣ ಎಷ್ಟೇ ಕೊಟ್ಟರೂ ಅವರನ್ನು ಕೊಡಲು ಸಾಧ್ಯವಿಲ್ಲ. ಜೀವ ತೆಗೆದು ಕೋಮು ಗಲಭೆ ಸೃಷ್ಟಿಸುವುದು ಒಳ್ಳೆಯ ಬೆಳವಣಿಗೆ ಅಲ್ಲ. ಕೆಲವು ಸಂಘಟನೆಗಳು ಯುವಕರನ್ನು ದಾರಿ ತಪ್ಪಿಸುತ್ತಿದೆ. ಯಾವುದೇ ಒಂದು ಸಂಘಟನೆ ಗಲಭೆ, ಗಲಾಟೆಗೆ ಕುಮ್ಮಕ್ಕು ನೀಡಿದಾಗ ಅದರ ನಾಯಕರಿಗೆ ಸಮಸ್ಯೆಯಾಗುತ್ತಿಲ್ಲ. ಬದಲಾಗಿ ಆ ಸಂಘಟನೆಗಳ ಎಷ್ಟೋ ಯುವಕರು ಜೈಲುಪಾಲಾಗುತ್ತಾರೆ . ಎಲ್ಲಾ ಪಕ್ಷ, ಸಂಘಟನೆಗಳು ಇದಕ್ಕೆ ಕಾರಣ. ಟಿಪ್ಪು – ಸಾರ್ವಕರ್ ಹೆಸರಿನಲ್ಲಿ ನಮ್ಮ ಸಮಾಜ‌ಕಲುಷಿತ ಆಗುತ್ತಿದೆ. ಗಲಾಟೆಗಳಾಗುತ್ತಿದೆ. ಸಮಾಜದಲ್ಲಿ ಅಶಾಂತಿ ಸೃಷ್ಟಿಯಾಗುತ್ತಿದೆ. ಆದ್ದರಿಂದ ಯುವಕರು ಜಾಗೃರಾಗಬೇಕು. ದಾರಿ ತಪ್ಪಬಾರದು. ಕೊಲೆಯಿಂದ ಏನೂ ಸಾಧನೆ ಮಾಡಿದ್ದು ಏನೂ ಇಲ್ಲ ಎಂದು ಅವರು ಹೇಳಿದರು.

ಮುಸ್ಲಿಂ ಯುವಕರಿಗೆ ನಾವು ಎಲ್ಲಾ ಕಡೆ ವಿನಂತಿ ಮಾಡುತ್ತಿದ್ದು, ಯಾರೂ ಕೂಡಾ ಕೋಮು ಗಲಭೆಗೆ ಹೋಗಬೇಡಿ ಎಂದು ಜಾಗೃತಿ ಮೂಡಿಸಿದ್ದೇವೆ. ಸಾಮಾಜಿಕ ಜಾಲತಾಣದಲ್ಲಿ ಅಪಪ್ರಚಾರ ಪೋಸ್ಟ್‌, ಸುಳ್ಳು ಸುದ್ದಿ ಹಬ್ಬಿಸುದರ ವಿರುದ್ಧ ಜಾಗೃತಿ ಮೂಡಿಸಬೇಕಿದೆ. ಗಾಂಜಾ, ಅಫೀಮು ಅಮಲು ಪದಾರ್ಥ ದಿಂದ ಒಂದು ರೀತಿಯಲ್ಲಿ ಗಲಾಟೆಗಳಾದರೆ, ಧರ್ಮದ ಅಮಲು ಕೂಡಾ ಮಿತಿ ಮೀರುತ್ತಿದೆ ಕೋಮು ಸಂಘರ್ಷಕ್ಕೆ ದಾರಿ ಮಾಡಿಕೊಡುತ್ತಿದೆ.

ಆದ್ದರಿಂದ ನಮ್ಮ ಮನವಿಯೆಂದರೆ ಸಮಾಜದಲ್ಲಿ ಶಾಂತಿ ನೆಲೆಸಲು ಎಲ್ಲರೂ ಒಟ್ಟಾಗಿ ನಡೆಯೋಣ. ಎಲ್ಲ ಯುವಕರು ಕೂಡಾ ಒಳ್ಳೆಯ ಶಿಕ್ಷಣ ಪಡೆದು ಎಲ್ಲಾರೂ ಒಂದಾಗಿ ಬದುಕು ನಡೆಸುವಂತಾಗಬೇಕು. ಧರ್ಮದ ಒಳ್ಳೆಯ ಗುಣಗಳನ್ನು ಪಾಲಿಸುವ ಕೆಲಸ ಆಗಬೇಕು. ಈ ಬಗ್ಗೆ ಜನಜಾಗೃತಿ ಮೂಡಿಸಬೇಕು. ಎರಡೂ ಸಮುದಾಯದಲ್ಲೂ ಜಾಗೃತಿ ಉಂಟು ಮಾಡಿ ಯುವ ಸಮುದಾಯವನ್ನು ಎಚ್ಚರಿಸುವ ಕೆಲಸ ಮಾಡಬೇಕು ಎಂದು ಶಹೀದ್ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ನ.ಪಂ.‌ಸದಸ್ಯ ಶರೀಫ್ ಕಂಠಿ, ಉದ್ಯಮಿ ಸಿದ್ದಿಕ್ ಕೊಕ್ಕೊ, ಶಮಿವುಲ್ಲಾ ಇದ್ದರು.

LEAVE A REPLY

Please enter your comment!
Please enter your name here