ಗಾಂಧಿನಗರ ಸುಳ್ಯ ಕಾರ್ಸ್ , ಜನತಾ ಕಾಂಪ್ಲೆಕ್ಸ್ ವಠಾರದಲ್ಲಿ ಸ್ವಾತಂತ್ರೋತ್ಸವ ಅಮೃತಮಹೋತ್ಸವ

0

 

 

ಸುಳ್ಯ ಗಾಂಧಿನಗರ ಸುಳ್ಯ ಕಾರ್ಸ್ ,ಜನತಾ ಕಾಂಪ್ಲೆಕ್ಸ್ ವಠಾರದಲ್ಲಿ ಸ್ವಾತಂತ್ರೋತ್ಸವ ಅಮೃತ ಮಹೋತ್ಸವ ಆಚರಣೆ ಎರಡು ಕಟ್ಟಡದಲ್ಲಿರುವ ಉದ್ಯಮಿಗಳ ನೇತ್ರತ್ವದಲ್ಲಿ ನಡೆಯಿತು.
ಧ್ವಜಾರೋಹಣವನ್ನು ಹಿರಿಯ ವೈದ್ಯ ಡಾ.ಅನಂತ ವಿ ಆರ್ ನೆರವೇರಿಸಿದರು.
ಸ್ವಾತಂತ್ರೋತ್ಸವದ ಬಗ್ಗೆ ವಕೀಲರ ಸಂಘದ ಮಾಜಿ ಅಧ್ಯಕ್ಷ,ನಗರ ಪಂಚಾಯತ್ ಸದಸ್ಯ ಎಂ ವೆಂಕಪ್ಪ ಗೌಡ ಮಾತನಾಡಿದರು.
ಮೈಸ್ ಕಂಪ್ಯೂಟರ್ ಶಿಕ್ಷಣ ಕೇಂದ್ರದ ವಿದ್ಯಾರ್ಥಿಗಳಾದ ಜ್ಞಾನ,ಧನ್ಯರು ದ್ವಜಗೀತೆ ಹಾಡಿದರು.
ಜನತಾ ಗ್ರೂಪ್ಸ್ ನ ಹಾಜಿ ಅಬ್ದುಲ್‌ ಹಮೀದ್ ಜನತಾ,ಸುಳ್ಯ ಕಾರ್ಸ್ ಅಬ್ದುಲ್ಲಾ ಅತಿಥಿಗಳಾಗಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಗಾಂಧಿನಗರ ಮಸೀದಿ ಅಧ್ಯಕ್ಷ ಮುಸ್ತಫಾ,ಜನತಾ ಸ್ಟೋರ್ಸ್ ಮಾಲಕ ರಿಜ್ವಾನ್ ಜನತಾ,ಅನ್ಸಾರ್ ಅಧ್ಯಕ್ಷ ಹಾಜಿ ಶುಕೂರ್,ಶಿವಂ ಕ್ಲಿನಿಕ್ ನ ವೈದ್ಯ ಡಾ.ವೆಂಕಟಕೃಷ್ಣ,ಉದ್ಯಮಿ ಬಾನುಪ್ರಕಾಶ್ ಮಾಸ್ಟರ್ ಆಗ್ರೋ, ಜನತಾ ಲಾಡ್ಜ್ ವ್ಯವಸ್ಥಾಪಕ ಹನೀಫ್ ದೇಲಂಪಾಡಿ, ನ್ಯಾಯವಾದಿ ವೆಂಕಟರಮಣ ಭಟ್,ನ್ಯಾಯವಾದಿ ಚಂಪಾ ವಿ ಗೌಡ, ಎಲೈಸಿ ನಿವೃತ್ತ ಅಧಿಕಾರಿ ಶ್ರೀನಿವಾಸ್,ಮುರುಗನ್ ಬೇಕರಿ ಮಾಲಕ ಮುರುಗನ್ ಇದ್ದರು.
ಜುವೇಲ್ಲರಿ ಮಾಲಕ ತೀರ್ಥರಾಮ್ ಕಾರ್ಯಕ್ರಮದಲ್ಲಿ ಪ್ರಸ್ತಾವಿಕ ಮಾತನಾಡಿದರು.

ಕಾರ್ಯಕ್ರಮದಲ್ಲಿ ಯತೀಶ್ ಕಾಡುತೋಟ ಸ್ವಾಗತಿಸಿ ವಂದಿಸಿದರೂ.
ಮೈಸ್ ಕಂಪ್ಯೂಟರ್ ನ ಮಲ್ಲಿಕಾರ್ಜುನ ಸಂಪೂರ್ಣ ಕಾರ್ಯಕ್ರಮದಲ್ಲಿ ಸಹಕರಿಸಿ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here