ಕೆ.ವಿ.ಜಿ. ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ- ಕೆ.ವಿ.ಜಿ ಆಯುರ್ ಫಾರ್ಮ ಮತ್ತು ಸಂಶೋಧನ ಘಟಕದಲ್ಲಿ ನೂತನ ಉತ್ಪನ್ನದ ಬಿಡುಗಡೆ

0

 

ಕೆವಿಜಿ : ಆ. 15ರಂದು ರಂದು ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಪ್ರಯುಕ್ತ ಕೆ.ವಿ.ಜಿ ಆಯುರ್ವೇದ ಮೆಡಿಕಲ್ ಕಾಲೇಜ್ ಮತ್ತು ಆಸ್ಪತ್ರೆ ಸುಳ್ಯ ಇದರ ಅಧೀನದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕೆ.ವಿ.ಜಿ ಆಯುರ್ವೇದ ಔಷಧ ತಯಾರಿಕಾ ಘಟಕ ಹಾಗೂ ಸಂಶೋಧನಾ ಕೇಂದ್ರದಿಂದ ತಯಾರಿಸಲ್ಪಟ್ಟ *ಹರ್ಬಲ್ ಹ್ಯಾಂಡ್ ಸ್ಯಾನಿಟೈಸರ* ನ್ನು ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್(ರಿ.) ಸುಳ್ಯ, ಇದರ ಅಧ್ಯಕ್ಷರಾದ *ಡಾ. ಚಿದಾನಂದ ಕೆ. ವಿ.* ಯವರು ಮಾರುಕಟ್ಟೆಗೆ ಬಿಡುಗಡೆಗೊಳಿಸಿ, ಸಮಾಜದ ಸ್ವಾಸ್ಥ್ಯ ಕಾಪಾಡುವಲ್ಲಿ ಆಯುರ್ವೇದ ಔಷಧಿಗಳು ಪ್ರಮುಖ ಪಾತ್ರ ನಿರ್ವಹಿಸುತ್ತವೆ, ಈ ನಿಟ್ಟಿನಲ್ಲಿ ಇನ್ನೂ ಹೆಚ್ಚಿನ ಔಷಧಿಗಳನ್ನು ತಯಾರುಮಾಡಿ ಸಮಾಜದ ಒಳಿತಿಗಾಗಿ ನಾವೆಲ್ಲರೂ ಈ ಕಾಲಘಟ್ಟದಲ್ಲಿ ಶ್ರಮಿಸುವ ಅಗತ್ಯ ಇದ್ದು, ಇನ್ನೂ ಹೆಚ್ಚಿನ ಮುತುವರ್ಜಿ ವಹಿಸಬೇಕು ಎಂದು ಶುಭಹಾರೈಸಿದರು. ಸಾಂಕೇತಿಕವಾಗಿ ನಡೆದ ಈ ಕಾರ್ಯಕ್ರಮದಲ್ಲಿ *ಪ್ರೊ. ಡಾ. ಪುರುಷೋತ್ತಮ ಕೆ. ಜಿ.* ವಿಭಾಗ ಮುಖ್ಯಸ್ಥರು ಹಾಗೂ ಮುಖ್ಯ ಕಾರ್ಯನಿರ್ವಾಹಣಾಧಿಕಾರಿಗಳು ಕೆ.ವಿ.ಜಿ ಆಯುರ್ವೇದ ಫಾರ್ಮಾ ಮತ್ತು ರಿಸರ್ಚ್ ಸೆಂಟರ್ ಇವರು ಪ್ರಾಸ್ತಾವಿಕ ಮಾತುಗಳನ್ನಾಡಿ ಸ್ವಾಗತಿಸಿದರು.
ಈ ಸಂದರ್ಭದಲ್ಲಿ ಕೆವಿಜಿ ಆಯುರ್ವೇದ ಮೆಡಿಕಲ್ ಕಾಲೇಜಿನ ಪ್ರಾಂಶುಪಾಲರಾದ *ಪ್ರೊ. ಡಾ. ಲೀಲಾಧರ್ ಡಿ.ವಿ.* ರಸಶಾಸ್ತ್ರ ಹಾಗೂ ಬೈಷಜ್ಯ ಕಲ್ಪನಾ ವಿಭಾಗದ ಡಾ. ಹರ್ಷಿತಾ ಪುರುಷೋತ್ತಮ, ಡಾ. ಪಾವನ ಕೆ. ಬಿ., ಡಾ. ಗೋಪಾಲಕೃಷ್ಣ ನಾಯಕ್, ಡಾ. ಶೃತನ್ ಕೆ., ಹಾಗೂ ಕೆ.ವಿ.ಜಿ ಆಯುರ್ವೇದ ಔಷಧ ತಯಾರಿಕಾ ಘಟಕದ ಸಿಬ್ಬಂದಿ ವರ್ಗದವರು, ಕೆವಿಜಿ ಆಯುರ್ವೇದ ಮೆಡಿಕಲ್ ಕಾಲೇಜಿನ ಬೋಧಕ, ಬೋಧಕೇತರ ಸಿಬ್ಬಂದಿ ವರ್ಗ, ಸ್ನಾತಕೋತ್ತರ ವಿದ್ಯಾರ್ಥಿಗಳು, ಕಲಿಕಾ ವೈದ್ಯರುಗಳು, ಪದವಿ ವಿದ್ಯಾರ್ಥಿಗಳು, ಉಪಸ್ಥಿತರಿದ್ದರು.

*ಏನಿದು ಹರ್ಬಲ್ ಹ್ಯಾಂಡ್ ಸ್ಯಾನಿಟೈಸರ್*:-
ಕೆ.ವಿ.ಜಿ.ಎ.ಪಿ.ಎಸ್. ಹರ್ಬಲ್ ಹ್ಯಾಂಡ್ ಸ್ಯಾನಿಟೈಸರ್ ಒಂದು ಅತ್ಯುತ್ತಮವಾದ ನೈಸರ್ಗಿಕ ಸೂಕ್ಷ್ಮ ಜೀವಿ, ವೈರಾಣುನಾಶಕ ಅಂಶವಿರುವ ಅರಶಿನ (Curcuma longa), ಕಹಿಬೇವು (Azadirachta indica) ಮುಂತಾದ ಗಿಡಮೂಲಿಕೆಗಳು ಹಾಗೂ ಐಸೋ ಪ್ರೊಫೈಲ್ ಆಲ್ಕೋಹಾಲ್, ಹೈಡ್ರೋಜನ್ ಪೆರೋಕ್ಷೈಡ್ ಮತ್ತು ಗ್ಲಿಸೆರಾಲ್‌ನಿಂದ ಪರಿಷ್ಕೃತವಾದ ನಿರ್ಮಲೀಕಾರಕ ಉತ್ಪನ್ನವಾಗಿದ್ದು, ಕೈಗಳ ಸ್ವಚ್ಛತೆಯನ್ನು ಕಾಪಾಡುವುದರೊಂದಿಗೆ ಕೈಗಳ ಮೂಲಕ ಹರಡುವ ಅಂಟುರೋಗಗಳನ್ನು ನಿಯಂತ್ರಿಸುವಲ್ಲಿ ಪರಿಣಾಮಕಾರಿಯಾಗಿದೆ. ಈ ಉತ್ಪನ್ನವು ಲೆಮನ್ ಗ್ರಾಸ್ (ಮಜ್ಜಿಗೆ ಹುಲ್ಲು) ಹಾಗೂ ಜಾಸ್ಮಿನ್ (ಮಲ್ಲಿಗೆ ಹೂವು) ಸುಗಂಧದಲ್ಲಿ ಲಭ್ಯವಿದೆ.