ಸುಳ್ಯದಲ್ಲಿ ಪರಿವಾರ ಬಂಟ ಸಮುದಾಯದ ಕ್ರೆಡಿಟ್ ಕೋಪರೇಟಿವ್ ಸೊಸೈಟಿ ತೆರೆಯುವ ಬಗ್ಗೆ ಪೂರ್ವ ಭಾವಿ ಸಭೆ

0

 

 

ಸುಳ್ಯ ಪರಿವಾರ ಬಂಟ ಸಮುದಾಯದ ಕ್ರೆಡಿಟ್ ಕೋಪರೇಟಿವ್ ಸೊಸೈಟಿ ತೆರೆಯುವ ಬಗ್ಗೆ ಪೂರ್ವ ಭಾವಿ ಸಭೆಯು ಆ‌.16 ರಂದು ಸುಳ್ಯ ಶಿವಕೃಪಾ ಕಲಾ ಮಂದಿರದಲ್ಲಿ ನಡೆಯಿತು.


ಪರಿವಾರ ಬಂಟರ ಸಂಘದ ಕೇಂದ್ರ ಸಮಿತಿಯ ಅಧ್ಯಕ್ಷ ಸಂತೋಷ್ ಕುಮಾರ್ ರವರು ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಶಂಕರ ನಾಯ್ಕ್ , ನಿರ್ದೇಶಕರಾದ ರತ್ನಾಕರ, ಸದಾಶಿವ, ಸುದೇಶ್,‌ರಾಕೇಶ್, ಗೋಪಾಲ, ಕಾರ್ಯದರ್ಶಿ ಸುಧಾಕರ ಪುತ್ತೂರು, ಸುಳ್ಯ ವಲಯ ಅಧ್ಯಕ್ಷ ವಿಠಲ ದೋಣಿಮೂಲೆ ಉಪಸ್ಥಿತರಿದ್ದರು. ಸುಳ್ಯದಲ್ಲಿ ಪ್ರಾಂಭವಾಗಲಿರುವ ಸೊಸೈಟಿಯ ಸಲಹಾ ಸಮಿತಿಯ ಅಧ್ಯಕ್ಷರಾಗಿ ಸತ್ಯಕುಮಾರ್ ಆಡಿಂಜ, ಉಪಾಧ್ಯಕ್ಷರಾಗಿ ನವೀನ್ ಕೇರ್ಪಳ, ಕಾರ್ಯದರ್ಶಿ ಶಿವಪ್ರಸಾದ್ ಆಲೆಟ್ಟಿ ಯವರನ್ನು ಆಯ್ಕೆ ಮಾಡಲಾಯಿತು.

ನಿರ್ದೇಶಕರಾಗಿ ವಿಠಲ ದೋಣಿಮೂಲೆ, ಗಣೇಶ್ ಪೈಚಾರು, ಸತೀಶ್ ಅಡ್ಕಾರ್, ದಿನೇಶ್ ‌ಬಡ್ಡಡ್ಕ, ಶಾಂತರಾಮ ಎಲಿಕ್ಕಳ, ಗೋಪಾಲ ಪೈಚಾರು, ವಿಶ್ವನಾಥ ಬೀರಮಂಗಲ, ಸುಧಾಕರ ಆಲೆಟ್ಟಿ, ದಿನೇಶ್ ಕುರುಂಜಿ ಭಾಗ್, ಗೋಪಾಲ ಕೇರ್ಪಳ, ತುಳಸಿ ಪೈಚಾರು, ವನಜಾಕ್ಷಿ ಆಲೆಟ್ಟಿ, ಶಶಿಕಲಾ ಆಡಿಂಜ, ನಿಶಿತಾ ಕೇರ್ಪಳ, ಭುವನೇಶ್ವರ ಬಡ್ಡಡ್ಕ, ರವಿಪ್ರಸಾದ್ ಅಡ್ಕಾರ್, ವಾಣಿ ದೋಣಿಮೂಲೆ ರವರನ್ನು ಆಯ್ಕೆ ಮಾಡಲಾಯಿತು. ಸಂಘದ ಸದಸ್ಯರಾದ ನವೀನ್ ಕುಮಾರ್ ಆಲೆಟ್ಟಿ, ರಾಜೇಶ್ ಬಿ.ಜಿ, ಶ್ರೀರಾಜ್ ಎಲಿಕ್ಕಳ ಉಪಸ್ಥಿತರಿದ್ದರು.
ಸುಧಾಕರ ಪುತ್ತೂರು ಪ್ರಾಸ್ತಾವಿಕ ಮಾತನಾಡಿದರು. ಶಿವಪ್ರಸಾದ್ ಆಲೆಟ್ಟಿ ಸ್ವಾಗತಿಸಿ, ಗಣೇಶ್ ಪೈಚಾರು ವಂದಿಸಿದರು.