ಸೋಣಂಗೇರಿ ಅಂಗನವಾಡಿ ಕೇಂದ್ರದಲ್ಲಿ ಸ್ವಾತಂತ್ರ್ಯೋತ್ಸವ

0

 

ಸೋಣಂಗೇರಿ ಅಂಗನವಾಡಿ ಕೇಂದ್ರದಲ್ಲಿ ಸ್ವಾತಂತ್ರ್ಯೋತ್ಸವ ಅಮೃತಮಹೋತ್ಸವನ್ನು ಆ.15ರಂದು ಆಚರಿಸಲಾಯಿತು.
ಜಾಲ್ಸೂರು ಗ್ರಾ.ಪಂ. ಸದಸ್ಯ ಈಶ್ವರ ನಾಯ್ಕ ಕುಕ್ಕಂದೂರು ಅವರು ಧ್ವಜಾರೋಹಣ ನೆರವೇರಿಸಿ, ಶುಭಹಾರೈಸಿದರು.
ನಿವೃತ್ತ ಪ್ರಾಂಶುಪಾಲೆ ಶ್ರೀಮತಿ ತಂಗಮ್ಮ ಅವರು ಸ್ವಾತಂತ್ರ್ಯೋತ್ಸವದ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು. ಈ ಸಂದರ್ಭದಲ್ಲಿ ಜಾಲ್ಸೂರು ಗ್ರಾಮ ಪಂಚಾಯತಿ ಸದಸ್ಯರುಗಳಾದ ಶಿವಪ್ರಸಾದ್ ಕುಕ್ಕಂದೂರು, ಶ್ರೀಮತಿ ದೀಪಾ ಅಜಕಳಮೂಲೆ, ನಿವೃತ್ತ ಶಿಕ್ಷಕ ಅರುಳಪ್ಪನ್ ಮಾಸ್ತರ್, ಮಾಜಿ ಗ್ರಾ.ಪಂ. ಸದಸ್ಯರುಗಳಾದ ಶಿವಕುಮಾರ್ ಕುಕ್ಕಂದೂರು, ಸುಬ್ಬಯ್ಯ ಗೌಡ ನಾಯರ್ ಹಿತ್ಲು, ಶ್ರೀಮತಿ ಸುಮಂಗಲಿ ನಾಯಕ್, ಸ್ಥಳೀಯರಾದ ಗೋಪಾಲಕೃಷ್ಣ ಸುತ್ತುಕೋಟೆ, ಚಿದಾನಂದ ಕುಕ್ಕಂದೂರು, ಸತ್ಯಶಾಂತಿ ತ್ಯಾಗಮೂರ್ತಿ, ಮಾಜಿ ಗ್ರಾ.ಪಂ. ಅಧ್ಯಕ್ಷೆ ಮಲ್ಲಿಕಾ, ಅಂಗನವಾಡಿ ಮಕ್ಕಳ ಪೋಷಕರು, ಅಂಗನವಾಡಿ ಶಿಕ್ಷಕಿ ರವಿಕಲಾ, ಸಹಾಯಕಿ ಸೇರಿದಂತೆ ಸ್ಥಳೀಯರು ಉಪಸ್ಥಿತರಿದ್ದರು.