ಬಾಳಿಲ : ಕಾರಿಗೆ ಡಿಕ್ಕಿ ಹೊಡೆದು ಪರಾರಿಯಾದ ಪಿಕಪ್ ವಾಹನ ಪತ್ತೆ

0

ಕಾರಿಗೆ ಪಿಕಪ್ ಡಿಕ್ಕಿ ಹೊಡೆದು ಪರಾರಿಯಾದ ಪಿಕಪ್ ನ್ನು ಸ್ಥಳೀಯರ ನೆರವಿನಿಂದ ಪತ್ತೆ ಹಚ್ಚಿದ ಘಟನೆ ಆ.16.ಬಾಳಿಲದಿಂದ ವರದಿಯಾಗಿದೆ.
ಬೆಳ್ಳಾರೆ ಕಡೆಗೆ ಹೋಗುತ್ತಿದ್ದ ಪುರುಷೋತ್ತಮ ಎಂಬವರ ಕಾರಿಗೆ ಬಾಳಿಲದ ಅಗಲ್ಪಾಡಿ ಎಂಬಲ್ಲಿ ಎದುರಿನಿಂದ ಬಂದ ಪಿಕಪ್ ವಾಹನ ಡಿಕ್ಕಿ ಹೊಡೆದು ಕಾರಿನ ಒಂದು ಬದಿ ಜಖಂ ಗೊಂಡಿತು.ಆದರೆ ಪಿಕಪ್ ವಾಹನದವರು ನಿಲ್ಲಿಸದೆ ಅಲ್ಲಿಂದ ಪರಾರಿಯಾಗಿದ್ದರು.

ಈ ವಿಚಾರ ತಿಳಿದ ಕೂಡಲೇ ಸ್ಥಳೀಯರು ವಾಹನವನ್ನು ಹುಡುಕಾಟ ನಡೆಸಿದ್ದು,ಈ ವೇಳೆ ಬಾಳಿಲದ ಉರುಂಬಿ ಎಂಬಲ್ಲಿ ವಾಹನ ಪತ್ತೆಯಾಗಿದೆ. ಪರಾರಿಯಾದ ಪಿಕಪ್ ಹಾಸನದ ಸಚಿನ್ ಎಂಬವರುದು ಎಂದು ತಿಳಿದು ಬಂದಿದೆ.ಬಳಿಕ ಪ್ರಕರಣವನ್ನು ರಾಜಿಯಲ್ಲಿ ಮುಗಿಸಲಾಯಿತು.