ಸುಳ್ಯ: ಸೈಂಟ್ ಜೋಸೆಫ್ ಶಾಲೆಯಲ್ಲಿ ಅಜಾದಿ ಕಾ ಅಮೃತ ಮಹೋತ್ಸವ

0

 

ಸುಳ್ಯದ ಸೈಂಟ್ ಜೋಸೆಫ್ ಶಾಲೆಯಲ್ಲಿ ಅಜಾದಿ ಕಾ ಅಮೃತ ಮಹೋತ್ಸವನ್ನು ಆ.15 ರಂದು ಶಾಲೆಯಲ್ಲಿ ವಿಜೃಂಭಣೆಯಿಂದ ಆಚರಿಸಲಾಯಿತು. ಧ್ವಜಾರೋಹನವನ್ನು ಶಾಲಾ ಸಂಚಾಲಕರಾದ ರೆ.ಪಾ.ವಿಕ್ಟರ್ ಡಿ ಸೋಜರವರು ನೆರವೇರಿಸಿ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.ಕಾರ್ಯಕ್ರಮದಲ್ಲಿ 75 ವರ್ಷ ಮೇಲ್ಪಟ್ಟ ಇಬ್ಬರು ಗಣ್ಯ ವ್ಯಕ್ತಿಗಳನ್ನು ಗುರುತಿಸಿ ಶಾಲಾವತಿಯಿಂದ ಸನ್ಮಾನಿಸಲಾಯಿತು. ವಿಲಿಯಂ ಲಸ್ರಾದೊರವರು ಶಾಲಾ ಕಟ್ಟಡ ನಿರ್ಮಾಣದಲ್ಲಿ ಅತಿ ಹೆಚ್ಚು ಸಹಾಯ ಮತ್ತು ಎಲ್ಲಾ ರೀತಿಯ ಶಾಲಾ ಪ್ರಗತಿಯಲ್ಲಿ ಸಹಕರಿಸಿರುತ್ತಾರೆ.ಇನ್ನೋರ್ವ ಅತಿಥಿಯಾದ ಭೂಸೇನೆಯಲ್ಲಿ ಹವಾಲ್ದಾರಾಗಿ ನಿವೃತ್ತರಾದ ವೀರಪ್ಪ ಗೌಡ ಐವರ್ನಾಡು ಇವರನ್ನು ಗುರುತಿಸಿ ಶಾಲಾವತಿಯಿಂದ ಸನ್ಮಾನಿಸಲಾಯಿತು.


ಅಜಾಧಿಕಾ ಅಮೃತ ಮಹೋತ್ಸವದ ಪ್ರಯುಕ್ತ ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆಗಳನ್ನು ಆಯೋಜಿಸಿ ಬಹುಮಾನ ವಿತರಣೆ ಮಾಡಲಾಯಿತು. ನಂತರ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳಾದ ಯೋಗ ,ಭರತನಾಟ್ಯ, ಸಮೂಹ ಗೀತೆ ಸಮೂಹ ನೃತ್ಯಗಳು ನಡೆಯಿತು, ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಪ್ರೌಢ ಪ್ರಾಥಮಿಕ ಹಾಗೂ ಪೂರ್ವ ಪ್ರಾಥಮಿಕ ಪೋಷಕ ಸಮಿತಿಯ ಅಧ್ಯಕ್ಷರುಗಳು ನಗರ ಪಂಚಾಯತ್ ಸದಸ್ಯರಾದ ಡೇವಿಡ್ ಧೀರಾ ಕ್ರಾಸ್ತಾ,ಚಚ್೯ ಪಾಲನಾ ಸಮಿತಿ ಉಪಾಧ್ಯಕ್ಷ ರಾದ ಗಾಡ್ ಫ್ರಿ ಮೊಂತೇರೊ, ನಗರ ಪಂಚಾಯತ್ ಮಾಜಿ ಸದಸ್ಯರು ರಾದ ಶ್ರೀಮತಿ ಸುನಿತಾ ಮೊಂತೆರೋ,ಶಾಲಾ ಪ್ರಭಾರ ಮುಖ್ಯ ಶಿಕ್ಷಕಿಯರಾದ ಸಿಸ್ಟರ್ ಮೇರಿ ಸ್ಟೆಲ್ಲಾ ಮತ್ತು ಶ್ರೀಮತಿ ಚೇತನಾರವರು ಶಾಲಾ ವಿದ್ಯಾರ್ಥಿ ನಾಯಕಿಯರು ಉಪಸ್ಥಿತರಿದ್ದರು.

 

ಈ ಕಾರ್ಯಕ್ರಮವನ್ನು ಶಾಲಾ ವಿದ್ಯಾರ್ಥಿಗಳಾದ ಕು.ಬಿಂದು ಹಾಗೂ ಸಮನ್ಯು ಎಸ್ ಶೆಟ್ಟಿ ನಿರೂಪಿಸಿ ಸಿಸ್ಟರ್ ಮೇರಿ ಸ್ಟೆಲ್ಲಾ ಸ್ವಾಗತಿಸಿ, ಸಹಶಿಕ್ಚಕಿ ಭವ್ಯ ವಂದಿಸಿದರು.