ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸ್ವಾತಂತ್ರ್ಯ ಅಮೃತಮಹೋತ್ಸವ ಆಚರಣೆ

0

 

p>

ಸ್ವಾತಂತ್ರ್ಯ ನಡಿಗೆ,ಅಮರಸುಳ್ಯ ದಂಗೆ ಬೀದಿ ನಾಟಕ

ಸುಳ್ಯದಿಂದ ಪ್ರಥಮ ದರ್ಜೆ ಕಾಲೇಜು ವರೆಗೆ ಸ್ವಚ್ಚತಾ ಅಬಿಯಾನ

ಸುಳ್ಯ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸ್ವಾತಂತ್ರೋತ್ಸವ ಅಮೃತಮಹೋತ್ಸವ ಆಚರಣೆ ಮತ್ತು ವಿದ್ಯಾರ್ಥಿಗಳ ಸಾಂಸ್ಕೃತಿಕ ವೈಭವ ಕಾರ್ಯಕ್ರಮ ನಡೆಯಿತು.
ಧ್ವಜಾರೋಹಣವನ್ನು ನಿವೃತ್ತ ಶಿಕ್ಷಕ ಸೋಮಯ್ಯ ಮಾಸ್ಟರ್ ನೇರವೆರಿಸಿ ಮಾತನಾಡಿದರು.

ಇದೇ ಸಂದರ್ಭದಲ್ಲಿ ಸ್ವಾತಂತ್ರೋತ್ಸವ ಅಂಗವಾಗಿ ಆಯೋಜಿಸಿದ ಸಾಂಸ್ಕೃತಿಕ ಕಾರ್ಯಕ್ರಮಗಳ ವಿಜೇತರಿಗೆ ಬಹುಮಾನ ವಿತರಣೆ ಕಾರ್ಯಕ್ರಮ ನಡೆಯಿತು.
ಪದವಿ ಕಾಲೇಜು ವಿದ್ಯಾರ್ಥಿಗಳಿಂದ ಕಾಲೇಜು ಬಳಿಯಿಂದ ಸುಳ್ಯ ಬಸ್ ನಿಲ್ದಾಣದವರೆಗೆ ಗಾಂಧಿನಡಿಗೆಯ ಮೂಲಕ ವಿದ್ಯಾರ್ಥಿಗಳು ಮತ್ತು ಕಾಲೇಜು ಉಪನ್ಯಾಸಕರು ಸುಳ್ಯ ನಗರದಲ್ಲಿ ಸಾಗಿದರು.
ಶ್ರೀಹರಿ ಕಾಂಪ್ಲೆಕ್ಸ್ ವಠಾರದಲ್ಲಿ ಅಮರಸುಳ್ಯ ದಂಗೆ ಬಿದಿನಾಟಕ
ಸರಕಾರಿ ಪ್ರಥಮ ದರ್ಜೆ ಕಾಲೇಜು ವಿದ್ಯಾರ್ಥಿಗಳು ಗಾಂಧಿನಡಿಗೆ ಮೂಲಕ ಸುಳ್ಯಕ್ಕೆ ಬಂದು ಸುಳ್ಯ ಶ್ರೀಹರಿ ಕಾಂಪ್ಲೆಕ್ಸ್ ವಠಾರದಲ್ಲಿ ಸುದ್ದಿ ಜನಾಂದೋಲನ ವೇದಿಕೆ ಸಹಕಾರದೊಂದಿಗೆ “ಅಮರ ಸುಳ್ಯ ದಂಗೆ” ಬೀದಿ ನಾಟಕ ಪ್ರದರ್ಶನ ನೀಡಿದರು.
ಕಾರ್ಯಕ್ರಮದಲ್ಲಿ ಸುದ್ದಿ ಸಮೂಹ ಸಂಸ್ಥೆಗಳ ನಿರ್ದೇಶಕ ಡಾ.ಯು ಪಿ ಶಿವಾನಂದ ಶುಭ ಹಾರೈಸಿ ಮಾತನಾಡಿದರು.
ಶ್ರೀಹರಿ ಕಾಂಪ್ಲೆಕ್ಸ್ ಮಾಲಕ ಕೃಷ್ಣ ಕಾಮತ್ ಅರಂಬೂರು,ಪದವಿ ಕಾಲೇಜು ಪ್ರಾಂಶುಪಾಲ ಸತೀಶ್ ಕುಮಾರ್ ಕೊಯಿಂಗಾಜೆ ಉಪಸ್ಥಿತರಿದ್ದರು.
ಅಮರ ಸುಳ್ಯ ದಂಗೆ ನಾಟಕ ನಿರ್ದೇಶಕ, ಕಾಲೇಜು ಉಪನ್ಯಾಸಕ ಪುಷ್ಪರಾಜ್ ಸ್ವಾಗತಿಸಿದರು.


ಬಳಿಕ ಶ್ರೀಹರಿ ಕಾಂಪ್ಲೆಕ್ಸ್ ಮಾಲಕ ಕೃಷ್ಣ ಕಾಮತ್ ರವರ ವತಿಯಿಂದ ಎಲ್ಲಾ ವಿದ್ಯಾರ್ಥಿಗಳಿಗೆ ತಂಪು ಪಾನಿಯ ವಿತರಿಸಲಾಯಿತು.
ಕಾರ್ಯಕ್ರಮ ಕೊನೆಯ ಸುದ್ದಿ ಬಿಡುಗಡೆ ಪ್ರಧಾನ ವರದಿಗಾರ ಹರೀಶ್ ಬಂಟ್ವಾಳ್ ರಿಂದ ಲಂಚ ಭ್ರಷ್ಟಾಚಾರ ಮುಕ್ತ ಅಭಿಯಾನದ ಘೋಷಣೆಯನ್ನು ಕೂಗಿ ವಿದ್ಯಾರ್ಥಿಗಳಿಗೆ ಪ್ರತಿಜ್ಞೆ ಮಾಡಿದರು.
ನಾಟಕ ಮುಗಿದ ನಂತರ ವಿದ್ಯಾರ್ಥಿಗಳು ಸುಳ್ಯ ನಗರದಿಂದ ಕೊಡಿಯಾಲಬೈಲ್ ವರೆಗೆ ರಸ್ತೆಯ ಉದ್ದಗಲಕ್ಕೂ ಸ್ವಚ್ಚತೆಮಾಡಿದರು.
ಕಾರ್ಯಕ್ರಮದಲ್ಲಿ ಪದವಿ ಕಾಲೇಜು ವಿದ್ಯಾರ್ಥಿಗಳು,ಉಪನ್ಯಾಸಕರು,ಪ್ರಾಂಶುಪಾಲರು,ಬೋಧಕೆತರ ಸಿಬ್ಬಂದಿಗಳು, ಸುದ್ದಿಬಿಡುಗಡೆ ಉದ್ಯೋಗಿಗಳು ಸಹಕರಿಸಿದರು.

LEAVE A REPLY

Please enter your comment!
Please enter your name here