ಅಮರಮುಡ್ನೂರು : ದೊಡ್ಡತೋಟ ಅಂಗನವಾಡಿ ಕೇಂದ್ರದಲ್ಲಿ ಸ್ವಾತಂತ್ರ್ಯ ದಿನಾಚರಣೆ

0

ಅಮರಮುಡ್ನೂರು ಗ್ರಾಮ ಪಂಚಾಯತ್ ನ ದೊಡ್ಡತೋಟ ಅಂಗನವಾಡಿ ಕೇಂದ್ರ ದಲ್ಲಿ 75 ನೇ ಸ್ವಾತಂತ್ರ್ಯ ದಿನಾಚರಣೆಯ ಅಮೃತ ಮಹೋತ್ಸವದ ಅಂಗವಾಗಿ ನೂತನವಾಗಿ ನಿರ್ಮಿಸಿದ ಧ್ವಜ ಸ್ಥಂಭ ಉದ್ಘಾಟನೇ ಮತ್ತು ದ್ವಜಾರೋಹಣ ಕಾರ್ಯಕ್ರಮ ಅ.15ರಂದು ನಡೆಯಿತು.

ನೂತನ ಧ್ವಜ ಸ್ತಂಭ ವನ್ನು ಬಾಲ ವಿಕಾಸ ಸಮಿತಿಯ ಅಧ್ಯಕ್ಷೆ ಗಾಯತ್ರಿ ಶ್ರೀಹರಿ ಯವರು ದೀಪ ಬೆಳಗಿಸಿ ಉದ್ಘಾಟಿಸಿದರು. ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಪದ್ಮಪ್ರಿಯಾ ಹೊಂಬಾಳೆ ಅರಳಿಸಿ ಧ್ವಜರೊಹಣ ನಡೆಸಿದರು. ಧ್ವಜಾರೋಹಣ ಕಾರ್ಯಕ್ರಮದ ನಿರೂಪನೆಯನ್ನು ದೊಡ್ಡತೋಟ ಶಾಲಾ ಅಧ್ಯಾಪಕ ಪ್ರಕಾಶ್ ನೆರವೆರಿಸಿದರು. ಬಳಿಕ ಸಭಾ ಕಾರ್ಯಕ್ರಮ ನಡೆಯಿತು. ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾ.ಪಂ. ಸದಸ್ಯ ಹೂವಪ್ಪ ಗೌಡ ವಹಿಸಿದ್ದರು.

ವೇದಿಕೆಯಲ್ಲಿ ಬಾಲ ವಿಕಾಸನ ಸಮಿತಿ ಅಧ್ಯಕ್ಷೆ ಗಾಯತ್ರಿ ಶ್ರೀಹರಿ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಆಕಾಶ್, ಪಂಚಾಯತ್ ಸದಸ್ಯೆ ಶ್ರೀಮತಿ ಜಾನಕಿ, ಶಿಶು ಅಭಿವೃದ್ಧಿ ಯೋಜನೆಯ ಗುತ್ತಿಗಾರು ವಲಯದ ಪ್ರಭಾರ ಮೇಲ್ವಿಚಾರಕಿ ಶ್ರೀಮತಿ ಉಷಾ ಎಂ., ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವಲಯ ಮೇಲ್ವಿಚಾರಕರಾದ ಸೀತಾರಾಮ ಮತ್ತು ಪ್ರಾಥಮಿಕ ಆರೋಗ್ಯ ಸುರಕ್ಷಾ ಅಧಿಕಾರಿ ಶ್ರೀಮತಿ ಲಲಿತ ಹೆಚ್.ಕೆ. ಮತ್ತು ಸಮುದಾಯ ಆರೋಗ್ಯ ಅಧಿಕಾರಿ ಶ್ರೀಮತಿ ಶಿಲ್ಪಾ ರವರು ಉಪಸ್ಥಿತರಿದ್ದರು.

ಕಾರ್ಯಕ್ರಮಕ್ಕೆ ಶೌರ್ಯ ವಿಪತ್ತು ತಂಡದ ದೊಡ್ಡತೋಟ ವಲಯದ ಸಂಯೊಜಕ ವೆಂಕಟರಮಣ ದೊಂಪ್ಪಗುಡ್ದೆ ಮತ್ತು ಸದಸ್ಯರು, ಪೋಷಕರಾದ ಜನಾರ್ಧನ ಗೌಡ, ದೇವಪ್ಪ ಆಚಾರ್ಯ, ನಾರಾಯಣ (ಆಂಜನೇಯ ಶಾಮಿಯನ ದೊಡ್ಡತೋಟ) ಅಜ್ಮೀರ್ (ಸುಣ್ಣ ತಯಾರಿಕಾ ಘಟಕದ ಮಾಲಿಕರಾದ ಅಜ್ಜಿಜ್) ,K S M ಕಂದಡ್ಕ ಮಾಲಿಕರಾದ ಮಂಜುನಾಥ ಮತ್ತು ಆರೋಗ್ಯ ಇಲಾಖೆಯ ಶ್ರೀಮತಿ ಲಲಿತ ಮತ್ತು ಶಿಲ್ಪಾ, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿ ಕುಸುಮಾವತಿ, ಸ್ತ್ರೀ ಶಕ್ತಿ ಗುಂಪುಗಳ ಸದಸ್ಯೆಯರು, ಪೋಷಕರು ಮತ್ತು ಊರಿನವರು ಸಹಕರಿಸಿದರು. ಕಾರ್ಯಕ್ರಮವನ್ನು ರೇಖಾ ಕೆ.ಎಸ್. ನಿರೂಪಿಸಿ, ನಾಡಗೀತೆ ಯನ್ನು ಕು| ಮೋಹಿನಿ, ವೀಣಾ, ಮಧುಶ್ರೀ ಹಾಡಿದರು. ಅಂಗನವಾಡಿ ಕಾರ್ಯಕರ್ತೆ ಶ್ರೀಮತಿ ರಾಜೇಶ್ವರಿ ಸ್ವಾಗತಿಸಿದರು. ಶ್ರೀಮತಿ ಭಾಗ್ಯಶ್ರೀ ವಂದಿಸಿದರು. ಇದೇ ಸಂದರ್ಭದಲ್ಲಿ ಧ್ವಜಸ್ಥಂಬ ನಿರ್ಮಾಣದ ದಾನಿಗಳನ್ನು ಗೌರವಿಸಲಾಯಿತು.