ಉಬರಡ್ಕ : ಆಟಿಡೊಂಜಿ ಎಡ್ಡೆ ದಿನ ಕ್ರೀಡಾಕೂಟ

0

 

ಯುವಕಮಂಡಲ (ರಿ). ಉಬರಡ್ಕ ಮಿತ್ತೂರು ಇದರ ಆಶ್ರಯದಲ್ಲಿ ಯುವಕಮಂಡಲದ ಸುವರ್ಣ ಮಹೋತ್ಸವದ ಸವಿನೆನಪಿಗಾಗಿ ಹಳೆವಿದ್ಯಾರ್ಥಿ ಸಂಘ ಉಬರಡ್ಕ ಶಾಲೆ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಉಬರಡ್ಕ ಒಕ್ಕೂಟ, ಶ್ರೀ ಮಿತ್ತೂರು ನಾಯರ್ ಸಂಜೀವಿನಿ ಸಂಘದ ಒಕ್ಕೂಟ ಗ್ರಾಮಪಂಚಾಯತ್ ಉಬರಡ್ಕ ಇವರ ಸಹಕಾರದೊಂದಿಗೆ ಆಟಿಡೊಂಜಿ ಎಡ್ಡೆ ದಿನ ಕ್ರೀಡಾಕೂಟವು ಆ.14 ರಂದು ಉಬರಡ್ಕ ಶಾಲಾ ಮೈದಾನದಲ್ಲಿ ಜರುಗಿತು.


ಕ್ರೀಡಾಕೂಟವನ್ನು ಉಬರಡ್ಕ ಸಹಕಾರಿ ಬ್ಯಾಂಕ್ ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಯಪ್ರಕಾಶ್ ಉರುಂಡೆ ಯವರು ಉದ್ಘಾಟಿಸಿದರು.ಸಮಾರಂಭದ ಅಧ್ಯಕ್ಷತೆಯನ್ನು ಸುವರ್ಣ ಮಹೋತ್ಸವ ಸಮಿತಿಯ ಅಧ್ಯಕರಾದ ರಾಜೇಶ್ ಭಟ್ ನೆಕ್ಕಿಲ ರವರು ವಹಿಸಿದ್ದರು ಮುಖ್ಯ ಅತಿಥಿಗಳಾಗಿ ಉಬರಡ್ಕ ಶಾಲಾ ಮುಖ್ಯಶಿಕ್ಷಕಿ ಶ್ರೀಮತಿ ಮೀನಾಕ್ಷಿ, ಗ್ರಾಮಪಂಚಾಯತ್ ಸದಸ್ಯರಾದ ಶ್ರೀಮತಿ ಭವಾನಿ ಮೂರ್ಜೆ ಭಾಗವಹಿಸಿದ್ದರು. ವೇದಿಕೆಯಲ್ಲಿ  ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಒಕ್ಕೂಟದ ಅಧ್ಯಕ್ಷರಾದ ಶ್ರೀಮತಿ ಪದ್ಮಾವತಿ ಸೂರ್ಯಮನೆ, ಶ್ರೀ ಮಿತ್ತೂರು ನಾಯರ್ ಸಂಜೀವಿನಿ ಸಂಘ ದ ಒಕ್ಕೂಟದ ಅಧ್ಯಕ್ಷರಾದ ಶ್ರೀಮತಿ ಶಾರದಾ
ಡಿ. ಶೆಟ್ಟಿ ಉಬರಡ್ಕ ಉಪಸ್ಥಿತರಿದ್ದರು.
ಗ್ರಾಮದ ಪುರುಷರಿಗೆ ಹಾಗೂ ಮಹಿಳೆಯರಿಗೆ ಮತ್ತು ಮಕ್ಕಳಿಗೆ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ಮದ್ಯಾಹ್ನ ಭೋಜನದ ಜೊತೆಗೆ ಆಟಿಯ ವಿಶೇಷ ಖಾದ್ಯ ಪತ್ರೋಡೆಯ ವ್ಯವಸ್ಥೆ ಮಾಡಲಾಗಿತ್ತು. ಸಂಜೆ ನಡೆದ ಸಮಾರೋಪ ಸಮಾರಂಭದ ಅಧ್ಯಕ್ಷತೆ ಯನ್ನು ಯುವಕಮಂಡಲದ ಅಧ್ಯಕ್ಷರಾದ ವಿಜಯಕುಮಾರ್ ಉಬರಡ್ಕ ವಹಿಸಿದ್ದರು. ಉದ್ಯಮಿ ಯದುಕುಮಾರ್ ಅಮೈ ಬಹುಮಾನ ವಿತರಿಸಿದರು. ಮುಖ್ಯಅತಿಥಿ ಗಳಾಗಿ ಗ್ರಾಮಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಚಿತ್ರಕುಮಾರಿ, ಹಳೆವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಹರೀಶ್ ಉಬರಡ್ಕ, ಉಬರಡ್ಕ ಶಾಲಾ ಎಸ್. ಡಿ. ಎಂ. ಸಿ ಅಧ್ಯಕ್ಷರಾದ ಪುರುಷೋತ್ತಮ ಪಾಪನಡ್ಕ, ಅನಿಲ್ ಬಳ್ಳಡ್ಕ ರವರು ಭಾಗವಹಿಸಿದ್ದರು. ಪ್ರವೀಣ್ ಉಬರಡ್ಕ ಮತ್ತು ಗಂಗಾಧರ್ ಬರ್ಜೆರಿಗುಂಡಿ ಬಹುಮಾನದ ಪಟ್ಟಿ ವಾಚಿಸಿದರು. ಸಮರ್ಥ್ ಪಟ್ರಕೊಡಿ ಪ್ರಾರ್ಥಿಸಿದರು. ರಕ್ಷಿತ್ ಉಬರಡ್ಕ ಸ್ವಾಗತಿಸಿ
ದ ಕಾರ್ಯಕ್ರಮವನ್ನು ತೀರ್ಥೇಶ್ ನಾರ್ಣಕಜೆ
ನಿರೂಪಿಸಿದರು. ರಾಜೇಶ್ ಭಟ್ ನೆಕ್ಕಿಲ ವಂದಿಸಿದರು. ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮ ಮುಕ್ತಾಯ ಗೊಳಿಸಲಾಯಿತು.