ಹೇಮಳ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಸ್ವಾತಂತ್ರೋತ್ಸವ ಆಚರಣೆ

0

ನಿವೃತ್ತ ಮುಖ್ಯ ಶಿಕ್ಷಕ ಬಾಲಕೃಷ್ಣರವರಿಂದ ಶಾಲೆ ದತ್ತು ಸ್ವೀಕಾರ

ಕೆಮ್ಮಲೆಯ ಹೇಮಳ ಸ.ಕಿ.ಪ್ರಾ.ಶಾಲೆಯಲ್ಲಿ 75ನೇ ಸ್ವಾತಂತ್ರೋತ್ಸವ ಅಮೃತ ಮಹೋತ್ಸವ ನಡೆಯಿತು.

ಶಾಲಾ ಎಸ್‌ಡಿಎಂಸಿ ಅಧ್ಯಕ್ಷರಾದ ಯತೀಶ್ ಹೇಮಳ ಧ್ವಜಾರೋಹಣಗೈದರು. ಶಾಲಾ ಮಕ್ಕಳಿಂದ ಮೆರವಣಿಗೆ ನಡೆಯಿತು. ಸಭಾಕಾರ್ಯಕ್ರಮದಲ್ಲಿ ನಿವೃತ್ತ ಮುಖ್ಯ ಗುರು, ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಬಾಲಕೃಷ್ಣ.ಕೆ ಶಾಲೆಯನ್ನು ದತ್ತು ಸ್ವೀಕರಿಸಿದರು.

ಮಕ್ಕಳಿಗೆ ಉಚಿತ ನೋಟು ಪುಸ್ತಕ, ಲೇಖನ ಸಾಮಾಗ್ರಿಗಳನ್ನು ವಿತರಿಸಿದರು. ಲೈಬ್ರೇರಿಗೆ ಪುಸ್ತಕ ಮತ್ತು ಸ್ಟೀಲು ಕಪಾಟು ನೀಡಿದರು.

ವೇದಿಕೆಯಲ್ಲಿ ಗ್ರಾ.ಪಂ. ಸದಸ್ಯೆ ಶ್ರೀಮತಿ ದಿವ್ಯಾ ಯೋಗಾನಂದ, ನಿವೃತ್ತ ಸೈನಿಕ ಗೋಪಾಲಕೃಷ್ಣ ಐಪಳ, ಎಸ್.ಡಿ.ಎಂ.ಸಿ ಅಧ್ಯಕ್ಷ ಯತೀಶ್ ಹೇಮಳ, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ನಾರಾಯಣ ಕೋರ್ಜೆ, ನಿವೃತ್ತ ಮುಖ್ಯ ಶಿಕ್ಷಕ ಬಾಲಕೃಷ್ಣ.ಕೆ.ಹೇಮಳ, ಸಿಆರ್‌ಪಿ ಜಯಂತ.ಕೆ ಮುಖ್ಯಗುರು ವೇದಾವತಿಯವರು ಉಪಸ್ಥಿತರಿದ್ದರು. ಕುಮಾರಿ ತೃಪ್ತಿ ಜ್ಞಾನದೀಪ ಶಿಕ್ಷಕಿ ಕಾರ್ಯಕ್ರಮ ನಿರೂಪಿಸಿದರು. ಮಕ್ಕಳಿಂದ ಮನರಂಜನಾ ಕಾರ್ಯಕ್ರಮ ಜರುಗಿತು. ಮು.ಗು.ವೇದಾವತಿಯವರು ವಂದನಾರ್ಪಣೆಗೈದರು.