ಮುಡ್ನೂರು ಮರ್ಕಂಜ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸ್ವಾತಂತ್ರ್ಯೋತ್ಸವ

0

 

ಮುಡ್ನೂರು ಮರ್ಕಂಜ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸ್ವಾತಂತ್ರ್ಯೋತ್ಸವ ಆಚರಿಸಲಾಯಿತು.

 

ಸ್ವಾತಂತ್ರ್ಯ ಅಮೃತ ಮಹೋತ್ಸವದ ಧ್ವಜಾರೋಹಣವನ್ನು ಎಸ್ ಡಿ ಎಂ ಸಿ ಅಧ್ಯಕ್ಷರಾದ ಮೀನಾಕ್ಷಿ ಬಿ ನೆರವೇರಿಸಿದರು. ಧ್ವಜಾರೋಹಣ ಕಾರ್ಯಕ್ರಮದಲ್ಲಿ ಶಾಲಾ ಮುಖ್ಯ ಗುರು ದೇವರಾಜ ಎಸ್ ಕೆ. ಸ್ವಾಗತಿಸಿ ಶುಭ ಕೋರಿದರು. ಎಸ್ ಡಿ ಎಂ ಸಿ ಸದಸ್ಯರು, ಪೋಷಕರು, ಹಳೆ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳು, ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷರ ನಾಗ ಕುಮಾರ್ ಶೆಟ್ಟಿ, ಯುವಕ ಮಂಡಲದ ಸದಸ್ಯರು ಮಹಿಳಾ ಮಂಡಲದ ಸದಸ್ಯರು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನ, ಶ್ರೀ ಶಕ್ತಿ ಸಂಘಗಳ ಸದಸ್ಯರು ಅಂಗನವಾಡಿ ಕಾರ್ಯಕರ್ತ ಮತ್ತು ಸಿಬ್ಬಂದಿ ವರ್ಗ ಮರ್ಕಂಜ ಶಾಲಾ ಶಿಕ್ಷಕರು ವಿದ್ಯಾರ್ಥಿಗಳು ಪುಟಾಣಿಗಳು ಭಾಗವಹಿಸಿ ರಾಷ್ಟ್ರಕ್ಕೆ ಗೌರವ ಸಲ್ಲಿಸಿದರು.

ನಂತರ ವಿದ್ಯಾರ್ಥಿಗಳ ಸೇವಾದಳದ ಲಯಬದ್ಧವಾದ ಬ್ಯಾಂಡ್ ವಾಲಗದೊಂದಿಗೆ ಮೆರವಣಿಗೆ ಸಾಗಿತು. ವಿದ್ಯಾರ್ಥಿಗಳಿಗೆ ಪೇಟೆಯ ಅಂಗಡಿ ಮಾಲೀಕರಾದ ರಾಮಣ್ಣ ಪಾಟಾಳಿ, ಉಮೇಶ್ ಮಿನುಂಗೂರು, ಚಂದ್ರಶೇಖರ ಮಿನುಂಗೂರು, ರಮೇಶ ಬೂಡು, ಅನಿತಾ ಧರ್ಮಪಾಲ ಪುರ ಹಾಗೂ ಪ್ರಾಥಮಿಕ ಕೃಷಿ ಪತ್ತಿನಸಹಕಾರಿ ಬ್ಯಾಂಕ್ ಮರ್ಕಂಜ ಇದರ ಅಧ್ಯಕ್ಷ ಮಹಾಬಲ ಕಟ್ಟಕೋಡಿ ಹಾಗೂ ನಿರ್ದೇಶಕರು ಸಿಬ್ಬಂದಿ ವರ್ಗದವರು ಸಿಹಿ ತಿಂಡಿ ನೀಡಿ ಅಭಿನಂದಿಸಿದರು.

ಶಾಲೆಯ ಸಭಾಭವನದಲ್ಲಿ ಸ್ವಾತಂತ್ರ್ಯ ಅಮೃತ ಮಹೋತ್ಸವದ ಸಮಾರಂಭವು ಎಸ್‌ಡಿಎಂಸಿ ಅಧ್ಯಕ್ಷರಾದ ಮೀನಾಕ್ಷಿ ಬಿ ಇವರ ಅಧ್ಯಕ್ಷತೆಯಲ್ಲಿ ನಡೆಯಿತು . ಸಂಸ್ಥೆಯ ಮುಖ್ಯೋಪಾಧ್ಯಾಯರಾದ ದೇವರಾಜ ಎಸ್.ಕೆ. ಸ್ವಾಗತಿಸಿದರು ವಿದ್ಯಾರ್ಥಿ ನಾಯಕ ಸೇರಿದಂತೆ 16 ವಿದ್ಯಾರ್ಥಿಗಳು ಭಾಷಣ ಮಾಡಿದರು. ಆಜಾದಿ ಕಾ ಅಮೃತ ಮಹೋತ್ಸವದ ಅಂಗವಾಗಿ ನಡೆದ ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನವನ್ನು ಅತಿಥಿಗಳು ನೀಡಿದರು . ದತ್ತಿನಿಧಿಯಾಗಿ ಸಂಸ್ಥೆಗೆ ಸಹಾಯ ನೀಡಿದ ದಾನಿಗಳನ್ನು ಸ್ಮರಿಸಿಕೊಂಡು ದತ್ತಿನಿಧಿ ಪುರಸ್ಕಾರವನ್ನು ವಿದ್ಯಾರ್ಥಿಗಳಿಗೆ ಮಾಡಲಾಯಿತು.

ಸಮಾರಂಭದಲ್ಲಿ ಗ್ರಾಮ ಪಂಚಾಯತ್ ಉಪಾಧ್ಯಕ್ಷರು ಗೋವಿಂದ ಅಳವುಪಾರೆ, ಗ್ರಾಮ ಪಂಚಾಯತ್ ಸದಸ್ಯ ರಾಜೇಂದ್ರ ಕೂಚ್ಚಿ ಭಾಗವಹಿಸಿ ಶುಭ ಹಾರೈಸಿದರು . ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಶಶಿಕಾಂತ ಬೂಡು ಉಪಸ್ಥಿತರಿದ್ದು ಸಂಸ್ಥೆಯ ಅಭಿವೃದ್ಧಿಗೆ ಸದಾ ಸಹಕಾರ ವ್ಯಕ್ತಪಡಿಸಿದರು. ತಮ್ಮಪ್ಪ ಗೌಡ ಪೂಂಬಾಡಿ ಉಪಸ್ಥಿತರಿದ್ದು ಅಕ್ಷರ ದಾಸೋಹಕ್ಕೆ ಅಕ್ಕಿ ನೀಡುವುದರೊಂದಿಗೆ ಶುಭ ಹಾರೈಸಿದರು .‌
ಸಹ ಶಿಕ್ಷಕರಾದ ಬೆಳ್ಯಪ್ಪ ಕೆ. ತ್ರಿವರ್ಣ ಧ್ವಜದಲ್ಲಿರುವ ಸಂದೇಶಗಳು ನಮ್ಮ ಜೀವನದಲ್ಲಿ ರೂಢಿ ಆಗಬೇಕೆಂದು ತಿಳಿಸುತ್ತಾ ಶುಭ ಹಾರೈಸಿದರು. ಹಳೆ ವಿದ್ಯಾರ್ಥಿಗಳ ಸಂಘದ ವತಿಯಿಂದ ಅಕ್ಷರ ದಾಸೋಹದ ಬಿಸಿಯೂಟಕ್ಕೆ ನೀಡಿದ ಊಟದ ಟ್ರಾಲಿಯನ್ನು ಸಂಸ್ಥೆಗೆ ಹಸ್ತಾಂತರ ಮಾಡಿದರು. ಹಳೆ ವಿದ್ಯಾರ್ಥಿ ಮತ್ತು ಎಸ್ ಡಿ ಎಂ ಸಿ ಅವರು ನೀಡಿದ ಮೂಲಕ ದ್ವಾರದ ಶಾಲಾ ನಾಮಫಲಕ ಅನಾವರಣಗೊಳಿಸಲಾಯಿತು. ನಲಿಕಲಿ ತರಗತಿಗೆ ಚಾಪೆ ಮತ್ತು ಸ್ಟೀಲ್ ಬ್ಯಾಕ್ ಅನ್ನು ನೀಡಿದ ಬಾಲಕೃಷ್ಣ ಗೌಡ ಪುರ ಮತ್ತು ಮನೆಯವರಿಗೆ ಅಭಿನಂದನೆ ಸಲ್ಲಿಸಲಾಯಿತು.

ಕಾರ್ಯಕ್ರಮವನ್ನು ದೈಹಿಕ ಶಿಕ್ಷಣ ಶಿಕ್ಷಕಿ ಚೆನ್ನಮ್ಮ ರವರು ನಿರೂಪಿಸಿದರು. ಶಿಕ್ಷಕಿಯರಾದ ಶ್ರೀಮತಿ ಮಮತಾ, ಅತಿಥಿ ಶಿಕ್ಷಕಿಯರಾದ ಶ್ರೀಮತಿ ನಿಶಾ ಕ ಶ್ರೀಮತಿ ವೀಣಾ ಬಿಪಿ ಗೌರವ ಶಿಕ್ಷಕಿ ಧನ ಯಂ.ಎಚ್ ಸಂಯೋಜನೆ ಮಾಡಿ ನಿರ್ವಹಿಸಿದರು. ಸಮಾರಂಭದ ಅಧ್ಯಕ್ಷರಾದ ಶ್ರೀಮತಿ ಮೀನಾಕ್ಷಿಯ ಭಾಷಣದಲ್ಲಿ ಎಲ್ಲರನ್ನೂ ಅಭಿನಂದಿಸಿ ಶುಭ ಹಾರೈಸಿದರು ಕಾರ್ಯಕ್ರಮದ ಯಶಸ್ವಿಗೆ ಸಹಕರಿಸಿದ ಎಲ್ಲರನ್ನು ಸ್ಮರಿಸಿದರು. ಸಹ ಶಿಕ್ಷಕ ಬೆಳ್ಯಪ್ಪ ಕೆ ಧನ್ಯವಾದ ಸಲ್ಲಿಸಿದರು. ಎಸ್ ಡಿಎಂ ಸಿ ಅಧ್ಯಕ್ಷರು ಮತ್ತು ಉಪಾಧ್ಯಕ್ಷರಾದ ಅನಿಲ್ ಅಂಬೆಕಲ್ಲು ಹಾಗೂ ಯುವರಾಜ್ ಜೈನ್ ಬಲ್ನಾಡು ಪೇಟೆ ಮತ್ತು ಮನೆಯವರು ನೀಡಿದ ಸಿಹಿತಿಂಡಿಯನ್ನು ನೀಡಿ ಸಿಹಿ ಬೋಜನದೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು.