ಜಾಲ್ಸೂರು : ಕದಿಕಡ್ಕ ಅಂಗನವಾಡಿ ಕೇಂದ್ರದಲ್ಲಿ 75 ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆ

0

ಜಾಲ್ಸೂರು ಕದಿಕಡ್ಕ ಅಂಗನವಾಡಿ ಕೇಂದ್ರದಲ್ಲಿ 75 ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಧ್ವಜಾರೋಹಣ ಕಾರ್‍ಯಕ್ರಮವನ್ನು ಬಾಲ ವಿಕಾಸ ಸಮಿತಿಯ ಸದಸ್ಯರಾದ ಶೇಖರ್ ಕಾಳಮನೆರವರು ನೆರವೇರಿಸಿದರು.


ಸಭಾ ಕಾರ್ಯಕ್ರಮದ ಸಭಾಧ್ಯಕ್ಷತೆಯನ್ನು ಜಾಲ್ಸೂರು ಗ್ರಾಮ ಪಂಚಾಯತ್‌ನ ಅಧ್ಯಕ್ಷ ಬಾಬು.ಕೆ.ಎಂ ರವರು ವಹಿಸಿ ಸಂದರ್ಭೋಚಿತವಾಗಿ ಮಾತನಾಡಿದರು.

ವಿಶೇಷ ಆಹ್ವಾನಿತರಾಗಿ ಜಾಲ್ಸೂರಿನ ಬನಾರಿ ಇಲೆಕ್ಟ್ರಿಕಲ್ಸ್‌ನ ಮಾಲಕರಾದ ನಂದ ಕಿಶೋರ್ ಬನಾರಿ ಇವರು ಉಪಸ್ಥಿತರಿದ್ದರು.

ವೇದಿಕೆಯಲ್ಲಿ ಜಾಲ್ಸೂರು ಗ್ರಾಮ ಪಂಚಾಯತ್‌ನ ಸದಸ್ಯರುಗಳಾದ ಸತೀಶ್.ಎನ್.ಎಂ ಮತ್ತು ಸಂದೀಪ್ ಕದಿಕಡ್ಕ, ಮಕ್ಕಳ ಪೋಷಕರಾದ ವಿನೋದ್ ಕುಮಾರ್ ಮಹಾಬಲಡ್ಕ ಉಪಸ್ಥಿತರಿದ್ದು ಶುಭಹಾರೈಸಿದರು. ಪುಟಾಣಿ ಮಕ್ಕಳ ದೇಶಭಕ್ತಿಗೀತೆಯ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಮುಂದುವರೆದು, ವಿನೋದ್ ಕುಮಾರ್ ಮತ್ತು ಚೈತ್ರ ದಂಪತಿಗಳ ಪುತ್ರನಾದ ಶೈಜೇಶ್ ಎಂಬ ಮಗುವಿನ ಹುಟ್ಟುಹಬ್ಬವನ್ನು ಕೇಕ್ ಕತ್ತರಿಸುವ ಮೂಲಕ ಆಚರಿಸಲಾಯಿತು.

ಗ್ರಾಮ ಪಂಚಾಯತ್ ವತಿಯಿಂದ ಅಂಗನವಾಡಿ ಮಕ್ಕಳಿಗೆ ನಡೆಸಿದ ವಿವಿಧ ಸ್ಪರ್ಧೆಗಳ ಬಹುಮಾನ ವಿತರಣೆಯನ್ನು ನಡೆಸಿಕೊಟ್ಟರು. ಕಾರ್‍ಯಕ್ರಮದಲ್ಲಿ ಬಾಲವಿಕಾಸ ಸಮಿತಿಯ ಗೌರವ ಸಲಹೆಗಾರರಾದ ಶಿವಪ್ಪ ಕಜೆಗದ್ದೆ, ಅಬ್ದುಲ್ ಖಾದರ್.ಸಿ.ಎಚ್, ಆಶಾ ಕಾರ್ಯಕರ್ತೆಯಾದ ಶ್ರೀಮತಿ ಸರಸ್ವತಿ.ಎಂ, ಕುಕ್ಕಂದೂರು ಅಂಗನವಾಡಿ ಕಾರ್ಯಕರ್ತೆ ಕುಮಾರಿ ತುಳಸಿ.ಎಂ, ಅನ್ನಪೂಣೇಶ್ವರಿ ಸ್ತ್ರೀಶಕ್ತಿ ಸಂಘದ ಅಧ್ಯಕ್ಷೆ ಶ್ರೀಮತಿ ವಿಜಯ ಕಾಳಮನೆ, ಸ್ಥಳೀಯರಾದ ಶಾಂಪ್ರಸಾದ್.ಜೆ.ಕೆ ಹಾಗೂ ಮಕ್ಕಳ ಪೋಷಕರು, ಪುಟಾಣಿ ಮಕ್ಕಳು ಉಪಸ್ಥಿತರಿದ್ದರು. ಅಂಗನವಾಡಿ ಕಾರ್ಯಕರ್ತೆ ಶ್ರೀಮತಿ ಕೆ.ಗಿರಿಜಾ ಸ್ವಾಗತಿಸಿ, ಬಾಲವಿಕಾಸ ಸಮಿತಿಯ ಸದಸ್ಯರಾದ ಶಿವಪ್ಪ ಕಜೆಗದ್ದೆ ವಂದಿಸಿದರು. ಬಾಲವಿಕಾಸ ಸಮಿತಿಯ ಸದಸ್ಯರಾದ ಶೇಖರ್ ಕಾಳಮನೆ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಅಂಗನವಾಡಿ ಸಹಾಯಕಿ ಶ್ರೀಮತಿ ಜಯಂತಿ ಸಹಕರಿಸಿದರು.