ಬೊಳ್ಳಾಜೆ : ಸ್ವಾತಂತ್ರ್ಯ ಅಮೃತಮಹೋತ್ಸವ ಆಚರಣೆ – ಸನ್ಮಾನ ಕಾರ್ಯಕ್ರಮ

0

ಬೊಳ್ಳಾಜೆ ಶ್ರೀ ಶಾರದಾ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸ್ವಾತಂತ್ರ್ಯ ಅಮೃತಮಹೋತ್ಸವ ಕಾರ್ಯಕ್ರಮ ಅ.15ರಂದು ನಡೆಯಿತು.

ಧ್ವಜಾರೋಹಣ ವನ್ನು ಆಡಳಿತ ಮಂಡಳಿ ಪ್ರಧಾನ ಕಾರ್ಯದರ್ಶಿ ಅನಂತ ಭಟ್ ಕನಿಯಾಲ ನೆರವೇರಿಸಿದರು. ಬಳಿಕ ಸ್ವಾತಂತ್ರ್ಯ ಮೆರವಣಿಗೆ ನಡೆಯಿತು.

ಬಳಿಕ ಸಭಾ ಕಾರ್ಯಕ್ರಮ ನಡೆಯಿತು.
ಸಭಾ ಕಾರ್ಯಕ್ರಮದ ಅಧ್ಯಕ್ಷ ತೆಯನ್ನು ಶೈಕ್ಷಣಿಕ ಸಮನ್ವಯ ಸಮಿತಿಯ ಸಂಚಾಲಕ ಗೋಪಾಲಕೃಷ್ಣ ಭಟ್ ಮುಡೂರು ವಹಿಸಿದ್ದರು. ಸುಳ್ಯ ತಾಲೂಕು ಜನಜಾಗೃತಿ ವೇದಿಕೆಯ ದೊಡ್ಡತೋಟ ವಲಯದ ಅಧ್ಯಕ್ಷ ಹಾಗೂ ಆಡಳಿತ ಮಂಡಳಿಯ ಸದಸ್ಯ ರಾಜಾರಾಂ ಭಟ್ ಬೆಟ್ಟ ಉದ್ಘಾಟಿಸಿ, ಸನ್ಮಾನಿತರ ಬಗ್ಗೆ ಅಭಿನಂದನಾ ಮಾತುಗಳನ್ನಾಡಿದರು. ನೆಲ್ಲೂರು ಕೆಮ್ರಾಜೆ ಪ್ರಾ.ಕೃ.ಪ.ಸ.ಸಂಘದ ಅಧ್ಯಕ್ಷ ವಿಷ್ಣು ಭಟ್ ಮೂಲೆತೋಟ ಮುಖ್ಯ ಅತಿಥಿಯಾಗಿ ಆಗಿಮಿಸಿ ಸನ್ಮಾನಿತರನ್ನು ಸನ್ಮಾನಿಸಿದರು.
ನಿವೃತ್ತ ಮುಖ್ಯೋಪಾಧ್ಯಾಯಿನಿ ಶ್ಯಾಮಾಲ ಎ.ವಿ. ಪ್ರಾಸ್ತಾವಿಕ ವಾಗಿ ಮಾತನಾಡಿದರು.
ವೇದಿಕೆಯಲ್ಲಿ ಮುಖ್ಯೋಪಾಧ್ಯಾಯ ಗಿರಿಯಪ್ಪ, ಎಸ್.ಡಿ.ಎಂ.ಸಿ. ಅಧ್ಯಕ್ಷ ವಾಸುದೇವ ಹೈದಂಗೂರು ಉಪಸ್ಥಿತರಿದ್ದರು.


ಇದೇ ಸಂದರ್ಭದಲ್ಲಿ ಬೊಳ್ಳಾಜೆ ಶಾಲಾ ವಿದ್ಯಾರ್ಥಿಗಳಿಗೆ ಸಮವಸ್ತ್ರ ಕೊಡುಗೆ ನೀಡಿದ ಗೋಪಾಲ ಕೃಷ್ಣ ಭಟ್ ಮೂಡೂರು ಹಾಗೂ ಶಾಲೆಯ ಪ್ರಗತಿಯೊಂದಿಗೆ ಹಲವು ವರ್ಷಗಳಿಂದ ಮುಖ್ಯೋಪಾಧ್ಯಾಯರಾಗಿ, ಪ್ರಸ್ತುತ ಶಿಕ್ಷಕರಾಗಿ ದುಡಿಯುತ್ತಿರುವ ಸೀತಾರಾಮ ಸಿ.ಎನ್.ರನ್ನು ವಿಷ್ಣು ಭಟ್ ಮೂಲೆತೋಟ ರವರು ಸನ್ಮಾನಿಸಿದರು.‌
ಬಳಿಕ ನೆಲ್ಲೂರು ಕೆಮ್ರಾಜೆ ಸೊಸೈಟಿಗೆ ಎರಡನೇ ಬಾರಿ ಆಯ್ಕೆಯಾಗಿ ಸೊಸೈಟಿಯನ್ನು ಮುನ್ನಡೆಸುತ್ತಿರುವ ಹಾಗೂ ಬೊಳ್ಳಾಜೆ ಶಾಖೆಯಲ್ಲಿ ನೆಟ್ ವಕ್೯ ವ್ಯವಸ್ಥೆಯನ್ನು ಮಾಡಿದ ಸಹಕಾರಿ ಸಂಘದ ಅಧ್ಯಕ್ಷ ವಿಷ್ಣು ಭಟ್ ಮೂಲೆತೋಟ ಹಾಗೂ ಶೈಕ್ಷಣಿಕ ಸಮನ್ವಯ ಸಮಿತಿ ಸದಸ್ಯರಾಗಿ, ಹಳೆ ವಿದ್ಯಾರ್ಥಿ ಯಾಗಿ ಇದೀಗ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾಗಿ ಆಯ್ಕೆಯಾದ ದಯಾನಂದ ಕೊರತ್ತೋಡಿ ಯವರನ್ನು ರಾಜಾರಾಂ ಭಟ್ ರವರು ಸನ್ಮಾನಿಸಿದರು.
ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಅಮೃತಮಹೋತ್ಸವ ಸ್ವಾತಂತ್ರ್ಯ ಹಿನ್ನೆಲೆಯಲ್ಲಿ ಆಯೋಜಿಸಿದ ಸ್ಪರ್ಧೆಯಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಶಿಕ್ಷಕಿ ಸುಚಿತ್ರಾ ಬಹುಮಾನದ ಪಟ್ಟಿ‌ ವಾಚಿಸಿದರು. ಶಿಕ್ಷಕಿ ರಮ್ಯ ವಂದಿಸಿದರು. ದಯಾನಂದ ಕೊರತ್ತೋಡಿ ಕಾರ್ಯಕ್ರಮ ನಿರೂಪಿಸಿದರು. ಗಂಗಾಧರ ಬೊಳ್ಳಾಜೆ, ಜನಾರ್ಧನ ನಾಯಕ್ ಬೊಳ್ಳಾಜೆ, ಜನಾರ್ಧನ ಕೊರತ್ತೋಡಿ, ರಾಜಶೇಖರ ಬೊಳ್ಳಾಜೆ, ಅಡುಗೆ ಸಿಬ್ಬಂದಿಗಳಾದ ಚಂದ್ರಿಕಾ, ಜಯಂತಿ, ಅಂಗನವಾಡಿ ಕಾರ್ಯಕರ್ತೆ ದೇವಕಿ ಮತ್ತಿತರು ಸಹಕರಿಸಿದರು.