ಆಲೆಟ್ಟಿ ವಾಲ್ಮೀಕಿ ಆಶ್ರಮ ಶಾಲೆಯಲ್ಲಿ ಅಮೃತ ಮಹೋತ್ಸವದ ಸ್ವಾತಂತ್ರ್ಯ ದಿನಾಚರಣೆ

0

ಆಲೆಟ್ಟಿ ವಾಲ್ಮೀಕಿ ಆಶ್ರಮ ಶಾಲೆಯಲ್ಲಿ ಸ್ವಾತಂತ್ರ್ಯ ದಿನಾಚರಣೆ ಆಚರಿಸಲಾಯಿತು. ದ್ವಜಾರೋಹಣವನ್ನು ಶಾಲಾ ಪೋಷಕರ ಸಂಘದ ಅಧ್ಯಕ್ಷ ಶ್ರೀಧರ ಮಾಣಿಮರ್ಧು ನೆರವೇರಿಸಿದರು. ಶಾಲಾ ಮುಖ್ಯ ಶಿಕ್ಷಕರಾದ ಮಾಧವ ಕೆ. ಸ್ವಾಗತಿಸಿದರು. ಶಿಕ್ಷಕಿಯರಾದ ಶ್ರೀಮತಿ ಗೀತಾ ಕೆ.ಬಿ., ಕುಮಾರಿ ಹೇಮಲತ, ಅಂಗನವಾಡಿ ಕಾರ್ಯಕರ್ತೆ ಶ್ರೀಮತಿ ಮಮತ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಮಕ್ಕಳ ಪೋಷಕರು ಶಾಲಾ ಸಿಬ್ಬಂದಿಗಳು ಭಾಗವಹಿಸಿದ್ದರು.

ಅಂಬೇಡ್ಕರ್ ರಕ್ಷಣಾ ವೇದಿಕೆ ವತಿಯಿಂದ ಸಿಹಿ ತಿಂಡಿ ವ್ಯವಸ್ಥೆ ಮಾಡಿದ್ದರು. ಬಳಿಕ ಅಮೃತ ಮಹೋತ್ಸವದ ಅಂಗವಾಗಿ ವಿದ್ಯಾರ್ಥಿಗಳಾದ ಪವಿತಾ, ಚಿಂತನ್, ಕೌಶಿಕ್ ಭಾಷಣ ಮಾಡಿದರು ಹಾಗೂ ದೇಶ ಭಕ್ತಿಗೀತೆ ಗಾಯನ ನಡೆಯಿತು. ಮತ್ತು ವಿವಿಧ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಧ್ವಜ ಬಿಡಿಸುವ ಸ್ಪರ್ಧೆಯಲ್ಲಿ 1ನೇ ತರಗತಿಯಲ್ಲಿ ಪ್ರಥಮ ದಕ್ಷಾ, ದ್ವಿತೀಯ ಪ್ರೀತಿಕಾ, ತೃತೀಯ ಅಪೂರ್ವ, 2ನೇ ತರಗತಿಯಲ್ಲಿ ಪ್ರಥಮ ಲಾವಣ್ಯ ಎಂ.,ದ್ವಿತೀಯ ಕಾರ್ತಿಕ್ ಬಿ., ತೃತೀಯ ಲಿಖಿತ್ ಎಂ.,3ನೇ ತರಗತಿಯಲ್ಲಿ ಪ್ರಥಮ ಶ್ರಾವ್ಯ ಕೆ.ಯಚ್., ದ್ವಿತೀಯ ಮೋಕ್ಷ ಜಿ.ಆರ್., ತೃತೀಯ ಪವನ್ ಎಂ.ಎಸ್., ರಾಷ್ಟ್ರೀಯ ನಾಯಕರ ಚಿತ್ರ ಬಿಡಿಸುವ ಸ್ಪರ್ಧೆ 4ನೇ ತರಗತಿಯಲ್ಲಿ ಪ್ರಥಮ ಸಾತ್ವಿಕ್ ಪಿ.ವಿ., ದ್ವಿತೀಯ ಮೋಕ್ಷಿತಾ ಕೆ.ಯನ್., ತೃತೀಯ ಪವಿತಾ ಯಂ.ಯಸ್., 5 ನೇ ತರಗತಿಗೆ ನಡೆದ ಪ್ರಬಂಧ ಸ್ಪರ್ಧೆಯಲ್ಲಿ ಪ್ರಥಮ ಕೌಶಿಕ್, ದ್ವಿತೀಯ ನಿಶಾಂತ್ ಪಿ.ಆರ್., ತೃತೀಯ ಯಜ್ಞಶ್ರೀ ಬಹುಮಾನ ಪಡೆದುಕೊಂಡರು.