ಮರ್ಕಂಜ ಅಂಗನವಾಡಿ ಕೇಂದ್ರ ದಲ್ಲಿ ಅಮೃತಮಹೋತ್ಸವ ಸ್ವಾತಂತ್ರ್ಯ ದಿನಾಚರಣೆ

0

ಮಹಿಳಾ ಮತ್ತು ಶಿಶು ಅಭಿವೃದ್ಧಿ ಇಲಾಖೆ ಸುಳ್ಯ ಯೋಜನೆಯಡಿಯಲ್ಲಿ ಮರ್ಕಂಜ ಅಂಗನವಾಡಿ ಕೇಂದ್ರ ದಲ್ಲಿ ಅಮೃತಮಹೋತ್ಸವ ಸ್ವಾತಂತ್ರ್ಯ ದಿನಾಚರಣೆ ಆಚರಿಸಲಾಯಿತು. ಮರ್ಕಂಜ ಗ್ರಾ.ಪಂ. ಉಪಾಧ್ಯಕ್ಷ ಗೋವಿಂದ ಅಳವುಪಾರೆ ಧ್ವಜಾರೋಹಣ ನೆರವೇರಿಸಿದರು. ಈ ಸಂದರ್ಭದಲ್ಲಿ ಗ್ರಾ.ಪಂ. ಸದಸ್ಯರು ಮರ್ಕಂಜ ಪ್ರಾ.ಕೃ.ಪ.ಸ.ಸಂಘದ ಸಿಬ್ನಂದಿಗಳು, ಬಾಲವಿಕಾಸ ಸಮಿತಿಯ ಪದಾಧಿಕಾರಿಗಳು, ಅಂಗನವಾಡಿಯ ಪುಟಾಣಿಗಳು, ಪೋಷಕರು, ಊರವರು ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿ ಉಪಸ್ಥಿತರಿದ್ದರು. ಬಳಿಕ ಸಿಹಿತಿ ವಿತರಿಸಲಾಯಿತು. ಸಿಹಿತಿಂಡಿ ಯನ್ನು ಯುವರಾಜ ಜೈನ್ ಹಾಗೂ ರಾಮಚಂದ್ರ ಪಾಟಾಳಿಯವರು ನೀಡಿದ್ದರು.