ಜ್ಞಾನದೀಪ ವಿದ್ಯಾಸಂಸ್ಥೆ ಎಲಿಮಲೆಯಲ್ಲಿ ಆಜಾದಿ ಕ ಅಮೃತಮಹೋತ್ಸವ ಮತ್ತು ಶ್ರೀಕೃಷ್ಣ ವೇಷ ಸ್ಪರ್ಧೆ 

0

75ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಆ.15 ರಂದು ಜ್ಞಾನದೀಪ ವಿದ್ಯಾಸಂಸ್ಥೆ ಎಲಿಮಲೆಯಲ್ಲಿ ಧ್ವಜಾರೋಹಣ ನಡೆಯಿತು. ಭಾರತೀಯ ಭೂಸೇನಾ ಯೋಧ ಸತೀಶ ಜಾಲುಮನೆಯವರು ಧ್ವಜಾರೋಹಣ ನೆರವೇರಿಸಿದರು. ಬಳಿಕ ಸ್ವಾತಂತ್ರ್ಯ ದ ಮೆರವಣಿಗೆ ನಡೆಯಿತು. ನಂತರ ಸಭಾ ಕಾರ್ಯಕ್ರಮ ನಡೆಯಿತು. ವಿದ್ಯಾರ್ಥಿಗಳು ಭಾಷಣ ದೇಶಭಕ್ತಿಗೀತೆ ಮತ್ತು ವಿವಿಧ ನೃತ್ಯಗಳಿಂದ ಮನೋರಂಜಿಸಿದರು. ಆಜಾದಿ ಕ ಅಮೃತ ಮಹೋತ್ಸವದ ಅಂಗವಾಗಿ ವಿದ್ಯಾರ್ಥಿಗಳಿಗೆ ನಡೆಸಿದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನವನ್ನು ವಿತರಿಸಿ ಸಿಹಿತಿಂಡಿಯನ್ನು ನೀಡಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಚಂದ್ರಶೇಖರ ಭಟ್ ತಳೂರು ವಹಿಸಿದ್ದರು. ಅತಿಥಿಯಾಗಿ ಸತೀಶ್ ಜಾಲುಮನೆ ಆಗಮಿಸಿದ್ದರು. ವೇದಿಕೆಯಲ್ಲಿ ರಾಧಾಕೃಷ್ಣ ಮಾವಿನಕಟ್ಟೆ, ಕೃಷ್ಣಯ್ಯ ಮೂಲೆತೋಟ, ಮಹಾವೀರ ಜೈನ್ ಶಾಲಾ ಮುಖ್ಯೋಪಾಧ್ಯಾಯರಾದ ಗದಾಧರ್ ಬಾಳುಗೋಡು ಹಾಗೂ ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷೆ ಮೇಘಶ್ರೀ ಜೀರ್ಮುಖಿ ಯವರು ಉಪಸ್ಥಿತರಿದ್ದರು. ನಂತರ ಇದೇ ವೇದಿಕೆಯಲ್ಲಿ ಪ್ರಿ.ಕೆ.ಜಿ. ಎಲ್.ಕೆ.ಜಿ. ಹಾಗೂ ಯು. ಕೆ. ಜಿ. ವಿದ್ಯಾರ್ಥಿಗಳಿಗಾಗಿ ಶ್ರೀಕೃಷ್ಣ ವೇಷ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿತ್ತು. ಇದರಲ್ಲಿ ಸುಮಾರು ಇಪ್ಪತ್ತೈದು ವಿದ್ಯಾರ್ಥಿಗಳು ಸ್ಪರ್ಧಿಸಿದರು. ವಿಜೇತರಾದವರಿಗೆ ಚಂದ್ರಶೇಖರ ಭಟ್ ತಳೂರು ರವರು ಬಹುಮಾನ ನೀಡಿದರು.

 

 

LEAVE A REPLY

Please enter your comment!
Please enter your name here