ಅರಂತೋಡು : ಗಲ್ಫ್ ಸಹೋದರಿಗೆ ಸ್ನೇಹ ಕೂಟ

0

ಅರಂತೋಡು ಬದ್ರಿಯಾ ಜಮಾಅತ್ ಸಮಿತಿಯ ವತಿಯಿಂದ ಗಲ್ಫ್ ನಲ್ಲಿ ಉದ್ಯೋಗದಲ್ಲಿ ಇದ್ದು, ಊರಿಗೆ ಆಗಮಿಸಿದ ನಾಸಿರುದ್ದಿನ್ ಪಟೇಲ್, ಬಶೀರ್ ಅರಂಬೂರ್ಹಾಗೂ ಹಬೀಬ್ ಗುಂಡಿ ರವರಿಗೆ ಸ್ಬೇಹ ಕೂಟವು ಅರಂತೋಡು ಜುಮಾ ಮಸೀದಿ ಯ ಕಚೇರಿ ಯಲ್ಲಿ ನಡೆಯಿತು.

ಅಧ್ಯಕ್ಷತೆ ಯನ್ನು ಅಶ್ರಫ್ ಗುಂಡಿ ವಹಿಸಿದರು ದುಆ ವನ್ನುಖತೀಬ್ ರಾದ ಅಲ್ ಹಾಜ್ ಇಸಾಕ್ ಬಾಖವಿ ನೆರೆವೇರಿಸಿದರು ಗಲ್ಫ್ ಪ್ರತಿನಿಧಿ ಗಳ ಪರವಾಗಿ ಬಶೀರ್ ಅರಂಬೂರು ಮಾತನಾಡಿ ಇಲ್ಲಿನ ಪದವಿ ಪೂರ್ವ ಕಾಲೇಜ್ ನಲ್ಲಿ ವ್ಯಾಸಂಗ ಮಾಡುವಾಗ ಈ ಮಸೀದಿ ಗೆ ಬರುತ್ತಿದ್ದೆ ಆಗ ಕೆ ಎಂ ಶಾಹ್ ಮುಸ್ಲಿಯಾರ್ ಧರ್ಮ ಗುರುಗಳಾಗಿದ್ದರು ಅವರು ಅಪಾರ ಪಾಂಡಿತ್ಯ ವನ್ನು ಹೊಂದಿದ್ದರು ಅವರ ಆದರ್ಶ ವನ್ನು ಇಂದಿಗೂ ಅರಂತೋಡು ಜಮಾ ಅತ್ ಪರಿಪಾಲಿಸುತ್ತ ಬರುತ್ತಿದೆ ಎಂದರು ಅನ್ವಾರುಲ್ ಹುಧಾ ಎಶೋಷಿಯೇಷನ್ ಅಧ್ಯಕ್ಷ ಅಬ್ದುಲ್ ಮಜೀದ್, ನಾಸಿರುದ್ದಿನ್ ಪಟೇಲ್, ಹಬೀಬ್ ರಾಹ್ಮಾನ್ ಶುಭ ಹಾರೈಸಿದರು.

ಹಾಜಿ ಕೆ ಎಂ ಮೊಹಮ್ಮದ್, ಸಹಾಯಕ ಅಧ್ಯಾಪಕ ಸಾಜೀದ್ ಅಝ್ ಹರಿ, ಕೆ ಎಂ ಅಬೂಬಕ್ಕರ್ ಪಾರೆಕ್ಕಲ್, ಅಬ್ದುಲ್ ಖಾದರ್ ಪಟೇಲ್, ಮೊಯಿದು ಕುಕ್ಕುಂಬಳ, ಅಮೀರ್ ಕುಕ್ಕುಂಬಳ ಎಸ್ ಕೆ ಎಸ್ ಎಸ್ ಎಫ್ ಅಧ್ಯಕ್ಷ ಆಶಿಕ್ ಮೊದಲದವರಿದ್ದರು, ಕಾರ್ಯದರ್ಶಿ ಕೆ ಎಂ ಮೂಸಾನ್ ಸ್ವಾಗರಿಸಿದರು, ಎ ಹನೀಫ್ ವಂದಿಸಿದರು