ನೆರೆಯಿಂದ ಹಾನಿಯಾದ ಪೇರಡ್ಕ ಮಸೀದಿ, ದರ್ಗಾಕ್ಕೆ ಮಾಜಿ ಸಚಿವ ರಮಾನಾಥ ರೈ ಬೇಟಿ

0

ಇತ್ತೀಚಿಗೆ ಸುರಿದ ಭಾರಿ ಮಳೆಗೆ ನೆರೆ ಬಂದು ಹಾನಿಯಾದ ಪೇರಡ್ಕ ಮುಹಿದ್ದೀನ್ ಜುಮಾ ಮಸೀದಿ ಮತ್ತು ಇತಿಹಾಸ ಪ್ರಸಿದ್ಧ ವಲಯುಲ್ಲಾಹಿ ದರ್ಗಾ ಶರೀಫ್ಗೆ ಮಾಜಿ ಸಚಿವರಾದ ರಮಾನಾಥ ರೈ ಹಾಗೂ ಕೆಪಿಸಿಸಿ ಸಂಯೋಜಕರು ಕ್ರಷ್ಣಪ್ಪನವರು ಬೇಟಿ ನೀಡಿ ಹಾನಿಯ ಬಗ್ಗೆ ವೀಕ್ಷಿಸಿದರು.

ಪ್ರವಾಹದಿಂದ ಮಸೀದಿ ಮತ್ತು ದರ್ಗಾದ ಸುತ್ತಲು ನಿರ್ಮಿಸಿದ ಆವರಣ ಗೋಡೆಯು ಸಂಪೂರ್ಣ ಕೊಚ್ಚಿ ಹೋಗಿದ್ದು ಸುಮಾರು ಹತ್ತು ಲಕ್ಷ ರುಪಾಯಿ ನಷ್ಟ ಉಂಟಾಗಿರುವ ಬಗ್ಗೆ ತಿಳಿದುಕೊಂಡು ಮುಂದಿನ ದಿನದಲ್ಲಿ ಪರಿಹಾರ ನೀಡುವ ಬಗ್ಗೆ ಭರವಸೆ ನೀಡಿದರು. ಈ ಸಂದರ್ಭದಲ್ಲಿ ಮಸೀದಿಯ ಗೌರವಾಧ್ಯಕ್ಷ ಟಿ.ಎಂ ಶಾಹೀದ್ ತೆಕ್ಕಿಲ್ ಮಾತನಾಡಿ ಕೋಮುಸೌಹಾರ್ದತೆ ಮತ್ತು ಸಹಿಷ್ಣುತೆಗೆ ಹೆಸರುವಾಸಿಯಾದ ಪೇರಡ್ಕವು ಸರ್ವ ಧರ್ಮಿಯರ ಆರಾಧನ ಕೇಂದ್ರವಾಗಿದೆ. “ನನ್ನ ಅಜ್ಜ ತೆಕ್ಕಿಲ್ ಮೊಹಮ್ಮದ್ ಹಾಜಿ, ಸಂಪಾಜೆಯ ಸಣ್ಣಯ್ಯ ಪಟೇಲ್, ದಿ|ಕೀಲಾರು ಗೋಪಾಲ ಕ್ರಷ್ಣಯ್ಯರವರ ತಂದೆ ಕೀಲಾರು ರಾಮಚಂದ್ರಯ್ಯ, ಸಣ್ಣಕ್ಕ ಕೂಸಕ್ಕ, ಕುಯಿಂತೋಡು ಚಂಗಪ್ಪ ಪಟೇಲ್, ಜಿ.ಗುಡ್ಡಪ್ಪ ಗೌಡ ಗೂನಡ್ಕ, ಶಿವಣ್ಣ ಪಟೇಲ್, ವಿ.ಪಿ ಕೊಯಿಲೋರವರ, ಮಾಧವ ಭಟ್ ಮಾರ್ಗದರ್ಶನ ಮತ್ತು ಸಹಕಾರದಿಂದ ಗ್ರಾಮೀಣ ಪ್ರದೇಶವಾದ ಗೂನಡ್ಕದಲ್ಲಿ, ಪೇರಡ್ಕದಲ್ಲಿ, ಸಂಪಾಜೆ ಹಾಗೂ ಪರಿಸರದ ಗ್ರಾಮ ದಲ್ಲಿ ಸಾಮರಸ್ಯದ ಜೀವನ ನಡೆಸಲು ಸಾಧ್ಯವಾಗಿದೆ.

ಈಗಲೂ ನಮ್ಮೂರಿನಲ್ಲಿ ಜಾತ್ಯಾತೀತ ಮತ್ತು ಕೋಮು ಸೌಹಾರ್ದತೆಯನ್ನು ಕಾಪಾಡಿಕೊಂಡು ಬಂದಿರುತ್ತೇವೆ”. ಕೆಪಿಸಿಸಿ ಸಂಯೋಜಕರಾದ ಕ್ರಷ್ಣಪ್ಪನವರು ಪೇರಡ್ಕ ಮಸೀದಿ ಹಾಗೂ ದರ್ಗಾದ ಕಾಮಗಾರಿಗೆ ಗ್ರಾನೈಟ್ನ್ನು ನೀಡಿರುವುದನ್ನು ಟಿ.ಎಂ ಶಾಹೀದ್ ತೆಕ್ಕಿಲ್ ಇದೇ ಸಂದರ್ಭದಲ್ಲಿ ಶ್ಲಾಘಿಸಿದರು.ಮಾಜಿ ಸಚಿವ ರಮಾನಾಥ ರೈ ರವರು ಮಸೀದಿಯ ನವೀಕರಣ ಕಾಮಗಾರಿಯನ್ನು ವೀಕ್ಷಿಸಿ ತ್ರಪ್ತಿ ವ್ಯಕ್ತ ಪಡಿಸಿದರು. ಪೇರಡ್ಕ ಜುಮಾ ಮಸೀದಿಯ ಖತೀಬರಾದ ರಿಯಾಝ್ ಫೈಝಿ ಎಮ್ಮೆಮಾಡು ದುವಾ ನೆರವೇರಿಸಿ ಲೋಕ ಕಲ್ಯಾಣಕ್ಕಾಗಿ ಪ್ರಳಯದಿಂದ ಮಳೆಯಿಂದ ಊರನ್ನು ರಕ್ಷಿಸಲು ಎಲ್ಲಾ ಸಮುದಾಯದವರನ್ನು ಸಹೋದರತೆಯಿಂದ ಜೀವಿಸಲು ವಿಶೇಷವಾಗಿ ಪ್ರಾರ್ಥಿಸಿದರು. ಸಂಪಾಜೆ ಗ್ರಾಮ ಪಂಚಾಯತ್ ಅಧ್ಯಕ್ಷ ಮಸೀದಿಯ ಕಾಮಗಾರಿಯ ಕಾರ್ಯದರ್ಶಿ ಜಿ ಕೆ ಹಮೀದ್ ಗೂನಡ್ಕ ಅವರ ನೇತ್ರತ್ವದಲ್ಲಿ ಗ್ರಾಮದಲ್ಲಿ ಉಂಟಾದ ನೆರೆ ಸಂದರ್ಭದಲ್ಲಿ ತುರ್ತು ಸಹಾಯಕ್ಕೆ ಬಂದ ಸರ್ವ ಧರ್ಮದ ಸಂಘ ಸಂಸ್ಥೆಗಳನ್ನು ಮತ್ತು ಸ್ವಯಂ ಸೇವಕರಾಗಿ ದುಡಿದ ಯುವಕರ ಗುಣಗಾನ ಮಾಡಿದರು.


ಈ ಸಂದರ್ಭದಲ್ಲಿ ಸುಳ್ಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಪಿ.ಸಿ ಜಯರಾಮ, ಕಾಂಗ್ರೆಸ್ ಮುಖಂಡರುಗಳಾದ ಭರತ್ ಮುಂಡೋಡಿ, ಡಾ| ರಘು, ಪಿ.ಎಸ್ ಗಂಗಾಧರ, ಗ್ರಾಮ ಪಂಚಾಯತ್ನ ಸದಸ್ಯರಾದ ಜಗಧೀಶ್ ರೈ, ಅಬುಸಾಲಿ ಗೂನಡ್ಕ, ಎಸ್ ಕೆ ಹನೀಫ್, ವಿಜಯಕುಮಾರ್, ಕಾಂಗ್ರೇಸ್ ಅಲ್ಪ ಸಂಖ್ಯಾತರ ಘಟಕದ ಅಧ್ಯಕ್ಷರಾದ ರಹೀಂ ಬೀಜದಕಟ್ಟೆ, ಇಬ್ರಾಹಿಂ ಸೆಟ್ಟಯಡ್ಕ, ಹಾಫಿಲ್ ಪೇರಡ್ಕ,ಶಾಫಿ ಕುತ್ತಮೊಟ್ಟೆ, ಎಸ್.ಎಸ್.ಯು.ಐ ಜಿಲ್ಲಾಕಾರ್ಯದರ್ಶಿ ಉನೈಸ್ ಗೂನಡ್ಕ, ಕಾಂಗ್ರೆಸ್ ಸೇವಾದಳ ಯುವ ಬ್ರಿಗೇಡ್ನ ಜುರೈದ್ ತೆಕ್ಕಿಲ್ ಪೇರಡ್ಕ, ಸಾಧುಮಾನ್ ತೆಕ್ಕಿಲ್ ಪೇರಡ್ಕ, ತಾಜು ಅರಂತೋಡು, ಜುಬೈರ್ ಅರಂತೋಡು, ಅಶ್ರಫ್ ತೆಕ್ಕಿಲ್ ಪೇರಡ್ಕ, ಆಶಿಕ್ ತೆಕ್ಕಿಲ್ ಪೇರಡ್ಕ, ಇರ್ಷಾದ್ ಪೇರಡ್ಕ, ಇರ್ಫಾನ್ ಮೊದಲಾದವರು ಉಪಸ್ಥಿತರಿದ್ದರು.