ಪಂಜ: ಸ್ವಾತಂತ್ರ್ಯ ಅಮೃತ ಮಹೋತ್ಸವ ಅಂಗವಾಗಿ ಅಖಂಡ ಭಾರತ ಸಂಕಲ್ಪ ದಿನ’

0

ಹಿಂದು ಜಾಗರಣಾ ವೇದಿಕೆ ಪಂಜ ಇದರ ವತಿಯಿಂದ ಸ್ವಾತಂತ್ರೋತ್ಸವದ ಅಮೃತ ಮಹೋತ್ಸವ ಸಲುವಾಗಿ ‘ಅಖಂಡ ಭಾರತ ಸಂಕಲ್ಪ ದಿನ’ ಕಾರ್ಯಕ್ರಮ ಆ.14 ರಂದು ಪಂಜದ ದೀನ್ ದಯಾಳ್ ವಾಣಿಜ್ಯ ಸಂಕೀರ್ಣ ಬಳಿ ನಡೆಯಿತು.


ಪಂಜ ಹಿಂದು ಜಾಗರಣ ವೇದಿಕೆಯ ಗೌರವಾಧ್ಯಕ್ಷ ಲೋಕೇಶ್ ಬರೆಮೇಲು ಸಭಾಧ್ಯಕ್ಷತೆ ವಹಿಸಿದ್ದರು. ಕಾಸರಗೋಡು ಸಂಸ್ಕೃತ ಭಾರತಿ ಜಿಲ್ಲಾ ಸಂಯೋಜಕ್ ಮಂಜುನಾಥ ಉಡುಪ ಕುಂಟಾರು ದಿಕ್ಸೂಚಿ ಭಾಷಣ ಮಾಡಿದರು. ಮಾಜಿ ಸೈನಿಕ ಪದ್ಮನಾಭ ಗೌಡ ಬೊಳ್ಳಾಜೆ,ಪಂಜ ಹಿಂದು ಜಾಗರಣ ವೇದಿಕೆ ಅಧ್ಯಕ್ಷ
ಕಿರಣ್ ನೆಕ್ಕಿಲ,ಸುಳ್ಯ ಹಿಂದು ಜಾಗರಣ ವೇದಿಕೆಯ ಪ್ರಧಾನ ಕಾರ್ಯದರ್ಶಿ ನಿಕೇಶ್ ಉಬರಡ್ಕ, ವೇದಿಕೆಯಲ್ಲಿ ಉಪಸ್ಥಿತರಿದ್ದರು.ಕಾರ್ಯಕ್ರಮದಲ್ಲಿ ಶ್ರೀಮತಿ ರಮ್ಯಾ ದಿಲೀಪ್ ಬಾಬ್ಲುಬೆಟ್ಟು ಪ್ರಾರ್ಥಿಸಿದರು.ಸತೀಶ್ ಪಲ್ಲೋಡಿ ಸ್ವಾಗತಿಸಿದರು. ಪ್ರಕಾಶ್ ಜಾಕೆ ಪ್ರಾಸ್ತಾವಿಕ ಮಾತನಾಡಿದರು. ದಯಾನಂದ ಮೇಲ್ಮನೆ ವಂದಿಸಿದರು.


ಪಂಜಿನ ಮೆರವಣಿಗೆ: ಸಭಾ ಕಾರ್ಯಕ್ರಮಕ್ಕೆ ಮುಂಚೆ ಬೃಹತ್ ಪಂಜಿನ ಮೆರವಣಿಗೆ ಪಂಜ ದೀನ್ ದಯಾಳ್ ಸಂಕೀರ್ಣ ಬಳಿಯಿಂದ ಪಂಜ ಸಿ.ಎ ಬ್ಯಾಂಕ್ ನ ಬಳಿ ತನಕ ಸಾಗಿ ಬಂತು.ಬೃಹತ್ ಸಂಖ್ಯೆಯಲ್ಲಿ ಜನ ಪಾಲ್ಗೊಂಡಿದ್ದರು.ಪಂಜಿನ ಮೆರವಣಿಗೆಗೆ ಗೋಪಾಲಕೃಷ್ಣ ಕುದ್ವ ಮತ್ತು ಚಂದ್ರಶೇಖರ ಶಾಸ್ತ್ರಿ ಯವರು ಚಾಲನೆ ನೀಡಿದರು.