ಸುಳ್ಯ ಬ್ರಹ್ಮಕುಮಾರೀಸ್ ರಾಜಯೋಗ ಧ್ಯಾನ ಕೇಂದ್ರದಲ್ಲಿ ಶ್ರೀ ಕೃಷ್ಣ ಜನ್ಮಾಷ್ಠಮಿ ಆಚರಣೆಗೆ ಚಾಲನೆ

0

ಬಾಲಗೋಪಾಲನ ದರ್ಶನ ವಿಶೇಷ ಕಾರ್ಯಕ್ರಮಕ್ಕೆ ಡಾ.ಕೆ.ವಿ.ಚಿದಾನಂದ ರಿಂದ ಚಾಲನೆ

ವಿವಿಧ ಭಜನಾ ಮಂಡಳಿಯ ಸದಸ್ಯರಿಂದ ಭಜನಾ ಸೇವೆ

ಬ್ರಹ್ಮಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯದ ತಾಲೂಕು ಕೇಂದ್ರ ಸುಳ್ಯ ಬ್ರಹ್ಮಕುಮಾರೀಸ್ ರಾಜಯೋಗ ಧ್ಯಾನ ಕೇಂದ್ರ ಅಂಬಟೆಡ್ಕದಲ್ಲಿ ಶ್ರೀ ಕೃಷ್ಣ ಜನ್ಮಾಷ್ಠಮಿ ಕಾರ್ಯಕ್ರಮಕ್ಕೆ ಆ.17 ರಂದು ಚಾಲನೆ ನೀಡಲಾಯಿತು.


ಶ್ರೀ ಕೃಷ್ಣ ಜನ್ಮಾಷ್ಠಮಿಯ ಅಂಗವಾಗಿ ಕರ್ನಾಟಕದಲ್ಲಿ ಪ್ರಥಮ ಪ್ರಯೋಗವಾಗಿ ತೊಟ್ಟಿಲಲ್ಲಿ ಮಲಗಿರುವ ಬಾಲ ಗೋಪಾಲನ (ಶ್ರೀ ಕೃಷ್ಣ)ನನ್ನು ತೂಗುವ ಮೂಲಕ ಆರತಿ ಬೆಳಗಿ ಡಾ.ಕೆ.ವಿ.ಚಿದಾನಂದ ರವರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಆಗಮಿಸಿದ ಎಲ್ಲಾ ಅತಿಥಿಗಳು‌ ತೊಟ್ಟಿಲಲ್ಲಿರುವ ಶ್ರೀ ಕೃಷ್ಣ ಪರಮಾತ್ಮನನ್ನು ತೂಗಿ ಮಂಗಳಾರತಿ ಬೆಳಗಿದರು. ಬ್ರಹ್ಮಕುಮಾರೀಯರು ಶ್ಲೋಕ ಪಠಣ ಮಾಡಿದರು. ವಿವಿಧ ಭಜನಾ ಮಂಡಳಿ ಸದಸ್ಯರಿಂದ ಭಜನಾ ಕಾರ್ಯಕ್ರಮ ನಡೆಯಿತು.

ಸಭಾ ಕಾರ್ಯಕ್ರಮ: ರಕ್ಷಾ ಬಂಧನ ಕಾರ್ಯಕ್ರಮ

ಬ್ರಹ್ಮಕುಮಾರೀಸ್ ದಾರವಾಡ ಜಿಲ್ಲೆಯ ಸಂಚಾಲಕಿ ಬಿ.ಕೆ.ಜಯಂತಿ ಯವರು ಈಶ್ವರೀಯ ಸಂದೇಶ ಹಾಗೂ ರಕ್ಷಾ ಬಂಧನದ ಮಹತ್ವದ ಬಗ್ಗೆ ತಿಳಿಸಿದರು.
ಈ ಸಂದರ್ಭದಲ್ಲಿ ಮುಖ್ಯ ಅಭ್ಯಾಗತರಾಗಿ ಸುಳ್ಯ ಅಕಾಡೆಮಿ ಆಪ್ ಲಿಬರಲ್ ಎಜ್ಯುಕೇಶನ್ ಅಧ್ಯಕ್ಷ ಡಾ.ಕೆ.ವಿ.ಚಿದಾನಂದ, ನಗರ ಪಂಚಾಯತ್ ಅಧ್ಯಕ್ಷ ವಿನಯಕುಮಾರ್ ಕಂದಡ್ಕ, ಬೆಳ್ಳಾರೆ ವರ್ತಕರ ಸಂಘದ ಅಧ್ಯಕ್ಷ ಎಂ. ಮಾಧವ ಗೌಡ, ತಾಲೂಕು ವೈದ್ಯಾಧಿಕಾರಿ ನಂದ ಕುಮಾರ್, ಸಮಾಜ ಕಲ್ಯಾಣ ಇಲಾಖೆ ಮಾಜಿ ಅಧ್ಯಕ್ಷೆ ದಿವ್ಯ ಪ್ರಭಾ ಚಿಲ್ತಡ್ಕ, ಗಜೇಂದ್ರ ಗಡ ಬ್ರಹ್ಮಕುಮಾರೀಸ್ ಬಿ.ಕೆ ಸರೋಜ ರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಡಾ.ಸಾಯಿಗೀತಾ ಜ್ಞಾನೇಶ್ ಪ್ರಾರ್ಥಿಸಿದರು. ಸುಳ್ಯ ಕೇಂದ್ರದ ಸದಸ್ಯ ಉಮೇಶ್ ಆಚಾರ್ಯ ಬಿ.ಕೆ ಸ್ವಾಗತಿಸಿದರು. ಸುಳ್ಯ ಕೇಂದ್ರದ ಬ್ರಹ್ಮಕುಮಾರೀಸ್ ಉಮಾ ರವರು ‌ಕಾರ್ಯಕ್ರಮ ನಿರೂಪಿಸಿದರು.


ಈ ಸಂದರ್ಭದಲ್ಲಿ ಭಜನಾ ಮಂಡಳಿ ಸದಸ್ಯರು, ಬೆಳ್ಳಾರೆ ಜ್ಞಾನ ದೀಪ ಶಿಕ್ಷಣ ಸಂಸ್ಥೆ ವಿದ್ಯಾರ್ಥಿಗಳು, ಬ್ರಹ್ಮಕುಮಾರೀಸ್ ಕೇಂದ್ರ ದ ಸದಸ್ಯರು ಭಾಗವಹಿಸಿದರು.