ಪಂಜ: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಜಾತಿಗಳ ಜಾಗೃತ ಸಮಿತಿ ಸಭೆ

0

 

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಜಾತಿಗಳ ಜಾಗೃತ ಸಮಿತಿ ಸಭೆಯು ಜು. 31 ರಂದು ಪಂಜ ಪಂಚಾಯತ್ ಸಭಾಭವನದಲ್ಲಿ ನಡೆಯಿತು.

ತಾಲ್ಲೂಕು ಸಮಿತಿ ಅಧ್ಯಕ್ಷ ಅಚ್ಚುತ ಮಲ್ಕಜೆ ಅಧ್ಯಕ್ಷತೆ ವಹಿಸಿದ್ದರು.
ನಿವೃತ್ತ ಯೋಧ ಕೊರಗಪ್ಪ ಕೊನ್ನಡ್ಕ ಅಂಬೇಡ್ಕರ್ ಭಾವಚಿತ್ರದೆದುರು ದೀಪ ಬೆಳಗಿಸುವುದರ ಮೂಲಕ ಸಭೆಯನ್ನು ಉದ್ಘಾಟಿಸಿದರು.
ಬಾಳಪ್ಪ ಕಳಂಜರವರು ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದರು. ಸಮಾಜ ಕಲ್ಯಾಣ ಇಲಾಖೆಯ ಸೌಲಭ್ಯದ ಕುರಿತು ಕಾವ್ಯ ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ತಾಲ್ಲೂಕು ಮಟ್ಟದ ಸಮಿತಿಗೆ ಶಶಿಧರ ಮಾತ್ರೆಮಜಲು, ರೋಹಿಣಿ ಕೂತ್ಕುಂಜ, ಕೊರಗಪ್ಪ ಕೊನ್ನಡ್ಕ , ವಸಂತ ಛತ್ರಪ್ಪಾಡಿ, ಶಶಿಧರ ಏರಣಗುಡ್ಡೆ, ಯಶೋಧ ಇದುಂಗುಳಿ, ಜಯಲಕ್ಷ್ಮಿ ಕಣ್ಕಲ್ ಅವರನ್ನು ಆಯ್ಕೆ ಮಾಡಲಾಯಿತು. ಉಳಿದಂತೆ ಗ್ರಾಮಮಟ್ಟದ ಸದಸ್ಯರನ್ನು ಆಯ್ಕೆ ಮಾಡಲಾಯಿತು.
ವೇದಿಕೆಯಲ್ಲಿ ಸಮಾಜ ಕಲ್ಯಾಣ ಇಲಾಖೆಯ ನಂದಿನಿ, ರೋಹಿಣಿ ಕೂತ್ಕುಂಜ ಉಪಸ್ಥಿತರಿದ್ದರು.
ಶಶಿಧರ ಮಾತ್ರೆಮಜಲು ಸ್ವಾಗತಿಸಿ, ಯಶೋದಾ ಇದುಂಗುಳಿ ವಂದಿಸಿದರು.