ಪಂಜ: ವನಿತಾ ಸಮಾಜದ ವತಿಯಿಂದ ಸ್ವಾತಂತ್ರ್ಯ ಅಮೃತ ಮಹೋತ್ಸವ ಆಚರಣೆ

0

 

ವನಿತಾ ಸಮಾಜ ಪಂಜ ಇದರ ವತಿಯಿಂದ 75ನೇ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮ ಆ.15 ರಂದು ವಿಜೃಂಭಣೆಯಿಂದ ಜರುಗಿತು. ಕಳೆದ ಮಾರ್ಚ್ ನಲ್ಲಿ ನಿರ್ಮಾಣಗೊಂಡ ನೂತನ ಧ್ವಜಸ್ತಂಭದ ದಾನಿಗಳಾದ ಶ್ರೀಮತಿ ಲೀಲಾವತಿ ಮತ್ತು ಬಾಲಕೃಷ್ಣ ನೇರಳ ದಂಪತಿಗಳು ಧ್ವಜಾರೋಹಣ ಗೈದು ಶುಭ ಹಾರೈಸಿದರು.

 

ಕಾರ್ಯಕ್ರಮದಲ್ಲಿ ಶ್ರೀಮತಿ ಪುಷ್ಪಾ ಡಿ ಪ್ರಸಾದ್ ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ಮುಖ್ಯ ಶಿಕ್ಷಕಿ ಪದ್ಮಾವತಿ ಮುಖ್ಯ ಅತಿಥಿಯಾಗಿ ಭಾಗವಹಿಸಿದರು. ಪೂರ್ವಾಧ್ಯಕ್ಷೆ ಶ್ರೀಮತಿ ಹೇಮಾವತಿ ಜನಾರ್ಧನ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪಂಜ ಪ್ರಾಥಮಿಕ ಆರೋಗ್ಯ ಕೇಂದ್ರ ದ ವೈದ್ಯಾಧಿಕಾರಿ ಡಾ.ಮಂಜುನಾಥ, ಅಲ್ಲಿಯ 60 ಜನ ಸಿಬ್ಬಂದಿಗಳು ಹಾಗೂ ಸ್ತ್ರೀ ಶಕ್ತಿ ಸಂಘದ ಸದಸ್ಯರು,ಅಂಗನವಾಡಿ ಮಕ್ಕಳು , ಮಕ್ಕಳ ಪೋಷಕರು, ಮಹಿಳಾ ಮಂಡಲದ ಸದಸ್ಯರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಶ್ರೀಮತಿ ಪೂರ್ಣಿಮಾ ಜಾಕೆ,ಶ್ರೀಮತಿ
ರತ್ನಾವತಿ ಬೊಳ್ಳಾಜೆ, ಶ್ರೀಮತಿ ಚಿತ್ರಕಲಾ ಬೊಳ್ಳಾಜೆ ಪ್ರಾರ್ಥಿಸಿದರು.ಶ್ರೀಮತಿ ತುಳಸಿ ದಯಾಪ್ರಸಾದ್ ನಿರೂಪಿಸಿದರು. ಕಾರ್ಯದರ್ಶಿ ಭಾಗೀರಥಿ ಕರಿಕ್ಕಳ ವಂದಿಸಿದರು.