ಕೆ.ವಿ.ಜಿ. ಪಾಲಿಟೆಕ್ನಿಕ್ ನೂತನ ವಿದ್ಯಾರ್ಥಿಗಳಿಗೆ ಸ್ವಾಗತ

0

 

ಕನಸು ಕಂಡರೆ ಸಾಲದು, ಸಾಧಿಸಬೇಕು  : ಎಸಿಬಿ ಎಸ್.ಪಿ ಸೈಮನ್. ಸಿ.ಎ

 


ಕೇವಲ ಕನಸು ಕಂಡರೆ ಸಾಲದು ಅದನ್ನು ನನಸು ಮಾಡಲು ಶ್ರಮಪಡಬೇಕು ಎಂದು ಪಶ್ಚಿಮ ವಲಯ ಭ್ರಷ್ಟಾಚಾರ ನಿಗ್ರಹ ದಳದ ಪೋಲೀಸ್ ಅಧೀಕ್ಷಕ ಸಿ.ಎ ಸೈಮನ್ ಹೇಳಿದರು. ಅವರು ಕುರುಂಜಿ ವೆಂಕಟ್ರಮಣ ಗೌಡ ಪಾಲಿಟೆಕ್ನಿಕ್ ನ 2022-23 ನೇ ಸಾಲಿನ ನೂತನ ವಿದ್ಯಾರ್ಥಿಗಳಿಗೆ ಸ್ವಾಗತ ಮತ್ತು 21-22 ನೇ ಸಾಲಿನ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ತಪ್ಪು ಮಾಡಲು ಭಯಪಡಬೇಡಿ ಆದರೆ ಸಾಧನೆ ಮಾಡದೇ ಇರಲು ಭಯಪಡಬೇಕು. ಕೇವಲ ಕನಸು ಕಂಡರೆ ಸಾಲದು ಅದನ್ನು ಸಾಧಿಸಲು ಶ್ರಮಪಡಬೇಕು. ಕೆ.ವಿ.ಜಿ.ಯವರು ತಾನು ಕಂಡ ಕನಸನ್ನು ನನಸು ಮಾಡಿದ್ದಾರೆ ಎಂದು ಅವರು ಹೇಳಿದರು. ಅಮರಶ್ರೀ ಬಾಗ್ ನ ಜಾನಕಿ ವೆಂಕಟ್ರಮಣ ಗೌಡ ಸಭಾಭವನದಲ್ಲಿ ನಡೆದ
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಎ.ಓ.ಎಲ್.ಇ ಯ ಪ್ರಧಾನ ಕಾರ್ಯದರ್ಶಿ ಡಾ.ಕೆ.ವಿ‌. ರೇಣುಕಾಪ್ರಸಾದ್ ಮಾತನಾಡಿ ಕೆ.ವಿ.ಜಿ‌ ವಿದ್ಯಾಸಂಸ್ಥೆಗಳಲ್ಲಿ ವಿದ್ಯಾರ್ಜನೆ ಮಾಡಿದ ಸಾವಿರಾರು ವಿದ್ಯಾರ್ಥಿಗಳು ದೇಶ ವಿದೇಶಗಳಲ್ಲಿ ದುಡಿಯುವುದರ ಜೊತೆಗೆ ನಮ್ಮ ಸಂಸ್ಥೆಯ ಬ್ರಾಂಡ್ ಅಂಬಾಸಿಡರ್ ಗಳಾಗಿ ಮೂಡಿಬರುತ್ತಿದ್ದಾರೆ ಎಂದರು. ಕಾಲೇಜಿನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಉಜ್ವಲ್ ಪ್ರಾಸ್ತಾವಿಕವಾಗಿ ಮಾತನಾಡಿ ಕೆ.ವಿ.ಜಿ.ಪಾಲಿಟೆಕ್ನಿಕ್ ನ್ನು ಆಯ್ದುಕೊಂಡ ವಿದ್ಯಾರ್ಥಿಗಳನ್ನು ಅಭಿನಂದಿಸಿದರಲ್ಲದೆ ಅತ್ಯಂತ ಸಮರ್ಥವಾಗಿ ಕಾರ್ಯನಿರ್ವಹಿಸುತ್ತಿರುವ ಪಾಲಿಟೆಕ್ನಿಕ್ ನ ಸಿಬ್ಬಂದಿ ವರ್ಗದವರ ನ್ನು ಶ್ಲಾಘಿಸಿದರು.
ಅತಿಥಿಗಳಾಗಿ ಉಪಸ್ಥಿತರಿದ್ದ ಕರ್ನಾಟಕ ರಾಜ್ಯ ಮೀನುಗಾರಿಕೆ ಅಭಿವ್ರದ್ಧಿ ನಿಗಮದ ಅಧ್ಯಕ್ಷ ಎ.ವಿ ತೀರ್ಥರಾಮ ಮಾತನಾಡಿ ಆತ್ಮ ನಿರ್ಭರ ಭಾರತ ಕಲ್ಪನೆಯಲ್ಲಿ ಪಾಲಿಟೆಕ್ನಿಕ್ ವಿದ್ಯಾರ್ಥಿಗಳಿಗೆ ವಿಫುಲ ಅವಕಾಶಗಳಿವೆ ಎಂದರು. ಕರ್ನಾಟಕ ರಬ್ಬರ್ ಅಭಿವ್ರದ್ಧಿ ನಿಗಮದ ಮಾಜಿ ಅಧ್ಯಕ್ಷ ಎಸ್.ಎನ್.ಮನ್ಮಥ ಮಾತನಾಡಿ ಕೆ.ವಿ.ಜಿಯವರ ದೂರದ್ರಷ್ಟಿತ್ವದ ಫಲವಾಗಿ ಬೆಳೆದು ನಿಂತ ವಿದ್ಯಾಸಂಸ್ಥೆಗಳು ಗ್ರಾಮೀಣ ಜನರಿಗೆ ವರದಾನವಾಗಿವೆ ಎಂದರು. ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ವೆಂಕಟ್ ದಂಬೆಕೋಡಿ ಮಾತನಾಡಿ ಕೆ.ವಿ.ಜಿ.ಯವರು ಸದುದ್ದೇಶದಿಂದ ಆರಂಭಿಸಿದ ಸಂಸ್ಥೆ ಊರಿನ ಕೊರತೆ ನೀಗಿಸುತ್ತಿದೆ ಆ ಮೂಲಕ ಸದುದ್ದೇಶದ ಕಾರ್ಯಕ್ಕೆ ಪ್ರತಿಫಲ ಸಿಗುತ್ತದೆ ಎಂಬುದಕ್ಕೆ ನಿದರ್ಶನವಾಗಿದೆ ಎಂದರು. ಪಂಜ ಕ್ರಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಣ ಸುಬ್ರಹ್ಮಣ್ಯ ಕುಳ ಮಾತನಾಡಿ ಯಶಸ್ಸಿಗೆ ಅಡ್ಡದಾರಿಗಳು ಇರುವುದಿಲ್ಲ‌, ಪರಿಶ್ರಮದಿಂದಲೇ ಪಡೆಯಬೇಕು ಎಂದು ಕಿವಿಮಾತು ಹೇಳಿದರು. ಪದ್ಮಶ್ರೀ ಡಾ.ಗಿರೀಶ್ ಭಾರದ್ವಾಜ್ ಮಾತನಾಡಿ ತಾಂತ್ರಿಕ ವಿದ್ಯಾಭ್ಯಾಸ ಪಡೆದು ದೇಶದ ಪ್ರಗತಿಗೆ ಕೊಡುಗೆ ಕೊಡಬೇಕಾದರೆ ಗ್ರಾಮೀಣ ಪ್ರದೇಶದ ಅವಶ್ಯಕತೆಗಳನ್ನು ಪೂರೈಸುವಲ್ಲಿ ಯುವಜನರು ತೊಡಗಿಕೊಳ್ಳಬೇಕು ಎಂದರು.
ಕಾಲೇಜಿನ ಪ್ರಾಂಶುಪಾಲ ಜಯಪ್ರಕಾಶ ಕೆ ವರದಿ ವಾಚಿಸಿ ಸಂಸ್ಥೆಯ ನಿಯಮಗಳ ಬಗ್ಗೆ ಪೋಷಕರಿಗೆ ಮತ್ತು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು. ವೇದಿಕೆಯಲ್ಲಿ ಉಪಪ್ರಾಂಶುಪಾಲ ಶ್ರೀಧರ್ ಎಂ.ಕೆ, ಅಕಾಡೆಮಿಕ್ ಡೀನ್ ಚಂದ್ರಶೇಖರ ಎಂ.ಎನ್, ಕೆ.ವಿ.ಜಿ.ಪಿ ಆಡಳಿತ ಪರಿಷತ್ ನ ಸಿಬ್ಬಂದಿ ಪ್ರತಿನಿಧಿಗಳಾದ ಅಣ್ಣಯ್ಯ ಕೆ, ಧನಂಜಯ ಕಲ್ಲುಗದ್ದೆ, ಕಛೇರಿ ಅಧೀಕ್ಷಕ ಶಿವರಾಮ ಕೇರ್ಪಳ, ವಿದ್ಯಾರ್ಥಿ ಕ್ಷೇಮಾಧಿಕಾರಿಗಳಾದ ಅನಿಲ್ ಕುಮಾರ್, ಹರೀಶ್ ಕೆ.ವಿ, ವಿದ್ಯಾರ್ಥಿ ಸಂಘದ ಅಧ್ಯಕ್ಷ ಮೋಹನ್, ಕಾರ್ಯದರ್ಶಿ ಸುದೀಪ್ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಪೋಲೀಸ್ ಅಧೀಕ್ಷಕ ಸೈಮನ್ ಸಿ.ಎ ಹಾಗೂ ಮೀನುಗಾರಿಕಾ ಅಭಿವ್ರದ್ಧಿ ನಿಗಮದ ಅಧ್ಯಕ್ಷ ಎ.ವಿ‌.ತೀರ್ಥರಾಮ ಇವರುಗಳನ್ನು ಸಂಸ್ಥೆಯ ವತಿಯಿಂದ ಸನ್ಮಾನಿಸಲಾಯಿತು. ಸಂಸ್ಥೆಯ ಮುಖ್ಯ ಕಾರ್ಯನಿರ್ವಣಾಧಿಕಾರಿ ಡಾ.ಉಜ್ವಲ್ ಯು.ಜೆ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಉಪನ್ಯಾಸಕಿ ಶಾಲಿನಿ ಎಂ.ಎಸ್ ವಂದಿಸಿದರು. ಎನ್ನೆಸ್ಸೆಸ್ ಕಾರ್ಯಕ್ರಮಾಧಿಕಾರಿ ಚಂದ್ರಶೇಖರ ಬಿಳಿನೆಲೆ ವಂದಿಸಿದರು.