ಚೆಂಬು : ಶ್ರೀ ಭಗವಾನ್ ಸಂಘದಿಂದ ಸ್ವಾತಂತ್ರ್ಯೋತ್ಸವದ ಬೈಕ್ ಜಾಥಾ

0

 

ಆಝಾದಿ ಕಾ ಅಮೃತ್ ಮಹೋತ್ಸವದ ಅಂಗವಾಗಿ ಆಗಸ್ಟ್15 ರಂದು ನೆಹರೂ ಯುವ ಕೇಂದ್ರದ ಆಶ್ರಯದಲ್ಲಿ ಚೆಂಬು ಶ್ರೀ ಭಗವಾನ್ ಸಂಘ ಆಯೋಜಿಸಿದ ಸ್ವಾತಂತ್ರ್ಯೋತ್ಸವ ಬೃಹತ್ ಬೈಕ್ ಜಾಥಾ ಯಶಸ್ವಿಯಾಗಿ ನಡೆಯಿತು.

ಕೊಯನಾಡು ಶಾಲಾ ಆವರಣದಿಂದ ಹೊರಟ ಜಾಥಾ ಸಂಪಾಜೆ ,ಕಲ್ಲುಗುಂಡಿ ಮೂಲಕ ಸುಮಾರು 7 ಕಿ.ಮೀ ಸಾಗಿ ಬಾಲಂಬಿ ಪಯಸ್ವಿನಿ ಸೊಸೈಟಿ ಆವರಣದಲ್ಲಿ ಕೊನೆಗೊಂಡಿತು.ಜಾಥಾದಲ್ಲಿ ಸುಮಾರು ನೂರಕ್ಕೂ ಹೆಚ್ಚು ಸವಾರರು ತ್ರಿವರ್ಣ ಧ್ವಜ ಹಾರಿಸುತ್ತಿದ್ದ ಹಿಂಬದಿ ಸವಾರರೊಂದಿಗೆ ಘೋಷಣೆಯೊಂದಿಗೆ ಸಾಗಿ ದೇಶಪ್ರೇಮ ಮೆರೆದರು.
ವೈವಿಧ್ಯಮಯ ಕಾರ್ಯಕ್ರಮ, ಸೇವಾಕಾರ್ಯಗಳಿಂದ ಜನಪ್ರಿಯತೆ ಪಡೆದ ಶ್ರೀ ಭಗವಾನ್ ಸಂಘದ ಈ ಕಾರ್ಯಕ್ರಮಕ್ಕೆ ಸಂಪಾಜೆಯ ಪಯಸ್ವಿನಿ,ಆದರ್ಶ ಯುವಕ ಸಂಘಗಳು ಮತ್ತು ಚೆಂಬುಗ್ರಾಮದ ಯುವಕೇಸರಿ ,ಮಿತ್ರಕೂಟ ,ವಿವೇಕಾನಂದ, ಗರುಡ ,ಶ್ರೀರಾಮ್ ಯುವಕ ಸಂಘಗಳು ಸಾಥ್ ನೀಡಿದರು.
ಸಂಪಾಜೆಯ ಸಾಮಾಜಿಕ ಧುರೀಣ ವೇಣುಗೋಪಾಲ್ ಬಂಟೋಡಿ ರವರು ಜಾಥಕ್ಕೆ ಬಾವುಟ ಹಾರಿಸುವ ಮೂಲಕ ಚಾಲನೆ ನೀಡಿದರು.ಬಾಲಂಬಿಯಲ್ಲಿ ನಡೆದ ಸಮಾರೋಪ ಸಮಾರಂಭದಲ್ಲಿ ಮಾಜಿ ಯೋಧರಾದ  ಜಗದೀಶ್ ಕುಯಿಂತೋಡು ದೇಶಪ್ರೇಮದ ಮಹತ್ವದ ಬಗ್ಗೆ ಸಂದೇಶ ನೀಡಿದರು.ಮುಖ್ಯ ಅತಿಥಿಗಳಾಗಿ  ಸುಬ್ರಹ್ಮಣ್ಯ ಉಪಾಧ್ಯಾಯ,  ರಾಜಾರಾಮ ಕಳಗಿ ಮಾತನಾಡಿದರು.ಸಂಘದ ಗೌರವಾದ್ಯಕ್ಷ  ಅನಂತ್ ಊರುಬೈಲು ಸ್ವಾಗತಿಸಿ ,ಅದ್ಯಕ್ಷ  ಯತೀಶ ಹನಿಯಡ್ಕ ವಂದಿಸಿದರು.ಸಂಘದ ಕಾರ್ಯದರ್ಶಿ ಶ್ರೀ ಶರತ್ ಹೊಸೂರು ,ಸಂಘದ ಸದಸ್ಯರು ,ಗ್ರಾ.ಪಂ.ಸದಸ್ಯರು ,ಸೊಸೈಟಿ ನಿರ್ದೇಶಕರು ಮತ್ತು ಅಪಾರ ದೇಶಾಭಿಮಾನಿಗಳು ಉಪಸ್ಥಿತರಿದ್ದರು.