ಆಲೆಟ್ಟಿ ಸದಾಶಿವ ದೇವಳದಲ್ಲಿ ಶ್ರೀ ಕೃಷ್ಣ ಜನ್ಮಾಷ್ಠಮಿ ಉತ್ಸವ

0

 

 

ಸಾಮೂಹಿಕ ಸತ್ಯನಾರಾಯಣ ಪೂಜೆ
ಮೊಸರು ಕುಡಿಕೆ, ಹಗ್ಗ ಜಗ್ಗಾಟ ಹಾಗೂ ವಿವಿಧ ಸ್ಪರ್ಧೆಗಳು

ಶ್ರೀ ಕೃಷ್ಣ ಪರಮಾತ್ಮನ ಆದರ್ಶ ಸಂದೇಶ ಧರ್ಮದ ರಕ್ಷಣೆಗೆ ಅಡಿಪಾಯ- ಡಾ.ಜ್ಞಾನೇಶ್

ಆಲೆಟ್ಟಿ ಸದಾಶಿವ ದೇವಸ್ಥಾನದಲ್ಲಿ ಶ್ರೀ ಕೃಷ್ಣ ಜನ್ಮಾಷ್ಠಮಿ ಉತ್ಸವವು ಧಾರ್ಮಿಕ ಹಾಗೂ ವಿವಿಧ ಸ್ಪರ್ಧೆ ಯೊಂದಿಗೆ ವಿಜೃಂಭಣೆಯಿಂದ ಆ.18 ರಂದು ನಡೆಯಿತು.
ಬೆಳಗ್ಗೆ ದೇವಳದಲ್ಲಿ ಪ್ರಧಾನ ಅರ್ಚಕ ಹರ್ಷಿತ್ ಬನ್ನಿಂತಾಯ ರವರ ನೇತೃತ್ವದಲ್ಲಿ ದೇವರಿಗೆ ನಿತ್ಯ ಪೂಜೆಯಾಗಿ ಸಾಮೂಹಿಕ ಪ್ರಾರ್ಥನೆಯು ನೆರವೇರಿತು. ಭಾರಧ್ವಾಜಾಶ್ರಮದ ಪುರೋಹಿತ್ ವೆಂಕಟೇಶ್ ಶಾಸ್ತ್ರಿ ಅರಂಬೂರು ರವರ ನೇತೃತ್ವದಲ್ಲಿ ಸಾರ್ವಜನಿಕ ಸತ್ಯನಾರಾಯಣ ಪೂಜೆಯು ನಡೆಯಿತು.
ಉತ್ಸವದ ಪ್ರಯುಕ್ತ ಸಾರ್ವಜನಿಕರಿಗಾಗಿ ವಿವಿಧ ಅಟೋಟ ಸ್ಪರ್ಧೆಗಳು ನಡೆಯಿತು.
ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ತೀರ್ಥಕುಮಾರ್ ಕುಂಚಡ್ಕ ರವರ ಅಧ್ಯಕ್ಷ ತೆಯಲ್ಲಿ ಧಾರ್ಮಿಕ ಸಭೆಯು ನಡೆಯಿತು. ಬಡ್ಡಡ್ಕ ರಾ.ಅ.ಹಿ.ಪ್ರಾ.ಶಾಲೆಯ ಸಂಚಾಲಕ ಡಾ.ಎನ್.ಎ.ಜ್ಞಾನೇಶ್ ರವರು ದೀಪ ಪ್ರಜ್ವಲಿಸಿ ಉಪನ್ಯಾಸ ನೀಡಿದರು. ವೇದಿಕೆಯಲ್ಲಿ ಅನುವಂಶಿಕ ಆಡಳಿತ ಮೊಕ್ತೇಸರರ ಪೈಕಿ ಶ್ರೀಪತಿ ಬೈಪಡಿತ್ತಾಯ, ಜೀ.ಸ.ಅಧ್ಯಕ್ಷ ಎನ್.ಎ.ರಾಮಚಂದ್ರ, ಸೇ.ಸ.ಅಧ್ಯಕ್ಷ ಪುರುಷೋತ್ತಮ ಕೋಲ್ಚಾರು, ಸದಸ್ಯರಾದ ಸತೀಶ್ ಕುಂಭಕ್ಕೋಡು, ಜಗದೀಶ್ ಸರಳಿಕುಂಜ, ಅಚ್ಚುತ ಮಣಿಯಾಣಿ ಆಲೆಟ್ಟಿ, ಹರಪ್ರಸಾದ್ ಗಬ್ಬಲ್ಕಜೆ, ಹರಿಪ್ರಸಾದ್ ಕಾಪುಮಲೆ, ನಳಿನಿ ರೈ ಆಲೆಟ್ಟಿ ಉಪಸ್ಥಿತರಿದ್ದರು. ಭಜನಾ ಸಂಘದ ಸದಸ್ಯ ಧನಂಜಯ ಆಲೆಟ್ಟಿ ಪ್ರಾರ್ಥಿಸಿದರು. ಸೇ.ಸ.ಕಾರ್ಯದರ್ಶಿ ರಾಮಚಂದ್ರ ಆಲೆಟ್ಟಿ ಸ್ವಾಗತಿಸಿದರು. ಸತೀಶ್ ಕುಂಭಕ್ಕೋಡು ವಂದಿಸಿದರು. ಭಜನಾ ಸಂಘದ ಕಾರ್ಯದರ್ಶಿ ಶಿವಪ್ರಸಾದ್ ಆಲೆಟ್ಟಿ ಕಾರ್ಯಕ್ರಮ ನಿರೂಪಿಸಿದರು.
ಮಧ್ಯಾಹ್ನ ಮಹಾಪೂಜೆಯಾಗಿ ಪ್ರಸಾದ ವಿತರಣೆಯಾಯಿತು. ಆಗಮಿಸಿದ ಎಲ್ಲರಿಗೂ ಅನ್ನ ಸಂತರ್ಪಣೆ ನೆರವೇರಿತು.
ಸಮಿತಿಯ ಸದಸ್ಯರು, ಭಜನಾ ಸಂಘದ ಸದಸ್ಯರು ಸ್ವಯಂ ಸೇವಕರಾಗಿ ಸಹಕರಿಸಿದರು. ಮೊಸರು ಕುಡಿಕೆ, ಓಟದ ಸ್ಪರ್ಧೆ, ಭಕ್ತಿಗೀತೆ ಸ್ಪರ್ಧೆ, ಹಗ್ಗ ಜಗ್ಗಾಟ, ಸಂಗೀತ ಕುರ್ಚಿ, ಮಕ್ಕಳಿಗೆ ಪ್ರತ್ಯೇಕ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು.