ಅಂಜಲಿ ಮೊಂಟೆಸ್ಸೋರಿ ಪ್ಲೇ ಸ್ಕೂಲ್ ನಲ್ಲಿ ಸಂಭ್ರಮದ ಕೃಷ್ಣ ಜನ್ಮಾಷ್ಟಮಿ

0

 

ಇಂದು ಅಂಜಲಿ ಮೊಂಟೆಸ್ಸೋರಿ ಪ್ಲೇ ಸ್ಕೂಲ್ ನಲ್ಲಿ ಕೃಷ್ಣ ಜನ್ಮಾಷ್ಟಮಿ ಯನ್ನು ಆಚರಿಸಲಾಯಿತು. ಸಂಸ್ಥೆಯ ಮಕ್ಕಳ ಅಜ್ಜ ಅಜ್ಜಿಯಂದಿಯರು ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಪುಟಾಣಿಗಳು ಮುದ್ದು ಕೃಷ್ಣ ವೇಷ ಧರಿಸಿ ನಲಿದು ಕುಪ್ಪಳಿಸಿದರು.

ಮಾತೆಯರು ಮುದ್ದುಕೃಷ್ಣರೊಂದಿಗೆ ಯಶೋಧಮಯಿಯರಾಗಿ ಕಂಗೊಳಿಸಿದರು.ಎಲ್ಲಾ ಪೋಷಕರಿಗೆ ಮೊಸರು ಕುಡಿಕೆ,ಕಾಯಿ ಹೊಡೆಯುವುದು ಹಾಗೂ ಮ್ಯೂಸಿಕಲ್ ಚೇರ್ ಆಟ ಆಡಿಸಿ ಬಹುಮಾನ ವಿತರಿಸಲಾಯಿತು. ಮುದ್ದು ಮಾಯಾಂಕ ಪ್ರಾರ್ಥಿಸಿದರು. ಕಾರ್ಯಕ್ರಮದಲ್ಲಿ ಸಂಸ್ಥೆಯ ಸಂಚಾಲಕಿ ಶ್ರೀಮತಿ ಗೀತಾಂಜಲಿ ಹಾಗೂ ಶಿಕ್ಷಕಿಯರು ಉಪಸ್ಥಿತರಿದ್ದರು.