ಕೊಲ್ಲಮೊಗ್ರು : ಬಂಗ್ಲೆಗುಡ್ಡೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸ್ವಾತಂತ್ರ್ಯಅಮೃತ ಮಹೋತ್ಸವ

0

ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಬಂಗ್ಲೆಗುಡ್ಡೆ, ಕೊಲ್ಲಮೊಗ್ರು ಇಲ್ಲಿ ಅಮೃತ ಮಹೋತ್ಸವವನ್ನು ವಿಜ್ರಂಭಣೆಯಿಂದ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಯುತ ಉದಯ್ ಕುಮಾರ್ ಕೊಪ್ಪಡ್ಕ ಧ್ವಜಾರೋಹಣ ನಡೆಸಿಕೊಟ್ಟರು. ನಂತರ ಶಾಲೆಯಿಂದ ವಿದ್ಯಾರ್ಥಿಗಳು ಹಾಗೂ ಪೋಷಕರು ಊರ ಅಭಿಮಾನಿಗಳೆಲ್ಲಾ ಸೇರಿ ಕೆ. ವಿ. ಜಿ ಸರ್ಕಲ್ ವರೆಗೆ ಘೋಷ ವಾಕ್ಯದೊಂದಿಗೆ ಮೆರವಣಿಗೆ ನಡೆಸಲಾಯಿತು. ಮುಂದೆ ಸಭಾಕಾರ್ಯಕ್ರಮದ ಅಂಗವಾಗಿ ಶಾಲಾ ವಿದ್ಯಾರ್ಥಿಗಳು ಹಾಗೂ ಪೋಷಕರಿಂದ ಭಾಷಣ, ದೇಶಭಕ್ತಿಗೀತೆ,ವಿವಿಧ ನೃತ್ಯ ರೂಪಕಗಳು ಸಾಂಸ್ಕ್ರತಿಕ ಕಾರ್ಯಕ್ರಮಗಳು ನಡೆದವು. ಈ ಸಂದರ್ಭದಲ್ಲಿ ಅಮೃತ ಮಹೋತ್ಸವದ ಅಂಗವಾಗಿ ನಡೆದ ವಿವಿಧ ಸ್ಪರ್ಧಾ ವಿಜೇತರಿಗೆ ಬಹುಮಾನ ನೀಡಲಾಯಿತು.
ಮಕ್ಕಳ ಕಲಿಕೆಗೆ ಪೂರಕವಾಗಿ ಶ್ರೀಯುತ ಪ್ರದೀಪ್ ಕುಂಇೇಟಿ ವಿದ್ಯಾರ್ಥಿಗಳಿಗೆ ಬರವಣಿಗೆಗೆ 100ಪೆನ್ಸಿಲ್,30 ಪೈಂಟ್ ಬಾಕ್ಸ್,‌ 30 ಡಿಕ್ಷನರಿ ಗಳನ್ನು ನೀಡಿ ಪ್ರೋತ್ಸಾಹಿಸಿದರು. ಮಧ್ಯಾಹ್ನದ ಭೋಜನವನ್ನು ಪೋಷಕರು ಅಕ್ಕಿ ಸಾಮಾನುಗಳನ್ನು ನೀಡಿ, ಅಡುಗೆ ಸಹಾಯಕರೊಂದಿಗೆ ಪೋಷಕರು ಜೊತೆಗೂಡಿ ಉಣಬಡಿಸಿದರು.