ಯಕ್ಷಗಾನ ಕಲಾವಿದ ಶೇಖರ ಮಣಿಯಾಣಿಯವರಿಗೆ ಮಾತೃ ವಿಯೋಗ

0

 

ಸುಳ್ಯ ಕಸಬಾದ ಕಲ್ಲುಮುಟ್ಲು ಪಂಪ್ ಹೌಸ್ ಬಳಿ ನಿವಾಸಿ ಪರಿವಾರ ನಿವೃತ್ತ ಯೋಧ ದಿ.ಸುಬ್ರಾಯ ಮಣಿಯಾಣಿ ಯವರ ಪತ್ನಿ, ಯಕ್ಷಗಾನ ಕಲಾವಿದ ಸಂಯೋಜಕ ಶೇಖರ ಮಣಿಯಾಣಿ ಯವರ ಮಾತೃಶ್ರೀ ಯವರಾದ
ಶ್ರೀಮತಿ ಪುಷ್ಪಾವತಿ ಯವರು ಅಲ್ಪ ಕಾಲದ ಅಸೌಖ್ಯದಿಂದ ಇಂದು ಮುಂಜಾನೆ ಸುಳ್ಯದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಅವರಿಗೆ 88 ವರ್ಷ ವಯಸ್ಸಾಗಿತ್ತು. ಮೃತರು ಪುತ್ರರಾದ ಯಕ್ಷಗಾನ ಕಲಾವಿದ ಶೇಖರ ಮಣಿಯಾಣಿ ಸುಳ್ಯ, ಶಿಕ್ಷಣ ಇಲಾಖೆಯ ಉದ್ಯೋಗಿ ರತ್ನಾಕರ ಕಲ್ಲುಮುಟ್ಲು, ಕರಾವಳಿ ಹೋಟೆಲ್ ಮಾಲಕ ರವಿಪ್ರಕಾಶ್ ಕಲ್ಲುಮುಟ್ಲು, ಇಬ್ಬರು ಪುತ್ರಿಯರಾದ ನಳಿನಾಕ್ಷಿ, ಸತ್ಯಾವತಿ ಹಾಗೂ ಸೊಸೆಯಂದಿರನ್ನು,ಅಳಿಯಂದಿರನ್ನು, ಮೊಮ್ಮಕ್ಕಳನ್ನು ಹಾಗೂ ಕುಟುಂಬಸ್ಥರನ್ನು ಬಂಧುಗಳನ್ನು ಅಗಲಿದ್ದಾರೆ.