ಸುಳ್ಯ: ಕೆವಿಜಿ ಇಂಟರ್ ನ್ಯಾಷನಲ್ ಪಬ್ಲಿಕ್ ಸ್ಕೂಲ್ ನಲ್ಲಿ 2022-23ನೇ ಸಾಲಿನ ಅಣಕು ಸಂಸತ್ತು ಪ್ರದರ್ಶನ

0

 

 

ಸುಳ್ಯದ ಕೆವಿಜಿ ಇಂಟರ್ ನ್ಯಾಷನಲ್ ಪಬ್ಲಿಕ್ ಸ್ಕೂಲ್ ನಲ್ಲಿ 2022-23ನೇ ಸಾಲಿನ ಅಣಕು ಸಂಸತ್ತನ್ನು ಅ.18 ರಂದು ಶಾಲಾ ಹೆರಿಟೇಜ್ ಕ್ಲಬ್ ವತಿಯಿಂದ ಶಾಲಾ ಸಭಾಂಗಣದಲ್ಲಿ ಆಯೋಜಿಸಲಾಯಿತು .

 

 

ಕಾರ್ಯಕ್ರಮಕ್ಕೆ ಶಾಲಾ ಆಡಳಿತ ಮಂಡಳಿಯ ಸಂಚಾಲಕ ಡಾ. ರೇಣುಕಾಪ್ರಸಾದ್ ಕೆ. ವಿ ಹಾಗೂ ಮುಖ್ಯಕಾರ್ಯನಿರ್ವಹಣಾಧಿಕಾರಿ ಡಾ.ಉಜ್ವಲ್ ಯು.ಜೆ ಶುಭ ಹಾರೈಸಿದರು.

ಮೊದಲಿಗೆ ಹತ್ತನೇ ತರಗತಿಯ ಸಾರ ಅಝ ಸಂಸತ್ತಿನ ನಿಯಮಗಳ ಬಗ್ಗೆ ಮತ್ತು ಸಂಸದೀಯ ಸರಕಾರದ ಬಗ್ಗೆ ಸಂಕ್ಷಿಪ್ತವಾಗಿ ಮಾಹಿತಿಯನ್ನು ನೀಡಿದರು. ಹತ್ತನೇ ತರಗತಿಯ ಸೂರಜ್ ಮತ್ತು 9ನೇ ತರಗತಿಯ ವಂಶಿ ಸಭಾಪತಿ ಸ್ಥಾನವನ್ನು ಅಲಂಕರಿಸಿದರು. ಶಾಲಾ ಮಂತ್ರಿಮಂಡಲದ ನಾಯಕ ಹತ್ತನೇ ತರಗತಿಯ ಯಶಸ್ ಮತ್ತು ನಾಯಕಿ ಸೃಜನ ಬಿ.ಎಸ್ ಇತರ ಸದಸ್ಯರು ಗಳೊಂದಿಗೆ ಶಾಲೆಯ ವಿದ್ಯಾರ್ಥಿ ಸಂಸತ್ತಿನ ಕಲಾಪವನ್ನು ಮುನ್ನಡೆಸಿದರು. 10ನೇ ತರಗತಿಯ ಪ್ರತಿಜ್ಞಾ ಮತ್ತು ರಿತ್ವಿಕ್ ವಿರೋಧಪಕ್ಷದ ನಾಯಕರಾಗಿ ಕಲಾಪವನ್ನು ನಡೆಸಿದರು.
ಸಂಸತ್ತಿನ ಪ್ರಶ್ನಾವಳಿಯ ನಂತರ ಶೈಕ್ಷಣಿಕ ಮಸೂದೆಯನ್ನು ಮಂಡಿಸಲಾಯಿತು. ಈ ಕಾರ್ಯಕ್ರಮದಲ್ಲಿ ಪ್ರಾಂಶುಪಾಲ ಅರುಣ್ ಕುಮಾರ್, ಉಪಪ್ರಾಂಶುಪಾಲೆ ಶಿಲ್ಪ ಬಿದ್ದಪ್ಪ ಮತ್ತು ಇತರ ಶಿಕ್ಷಕರು ಭಾಗವಹಿಸಿದರು. ಕಾರ್ಯಕ್ರಮದ ಕೊನೆಗೆ ಪ್ರಾಂಶುಪಾಲರು ‘ ವಿದ್ಯಾರ್ಥಿ ದೆಸೆಯಿಂದಲೇ ನಾಯಕತ್ವ ಗುಣ ರೂಢಿಸಿಕೊಂಡು, ಸಂಸತ್ತಿನಲ್ಲಿ ನಡೆಯುವ ಕಾರ್ಯ ಕಲಾಪಗಳ ಬಗ್ಗೆ ಅರಿತುಕೊಳ್ಳುವ ಉದ್ದೇಶದಿಂದ ಶಾಲೆಯಲ್ಲಿ ಅಣಕು ಸಂಸತ್ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ’ ಎಂದರು.

ವಿದ್ಯಾರ್ಥಿ ನಾಯಕಿ ಸೃಜನ ಬಿ.ಎಸ್ ಧನ್ಯವಾದ ಅರ್ಪಿಸಿದರು . ಕಾರ್ಯಕ್ರಮವು ರಾಷ್ಟ್ರಗೀತೆಯೊಂದಿಗೆ ಮುಕ್ತಾಯಗೊಂಡಿತು.