ಕಿಡ್ನಿ ಸಮಸ್ಯೆಯಿಂದ ಬಳಲುತ್ತಿರುವ ಪುಟ್ಟ ಬಾಲಕನ ಚಿಕಿತ್ಸೆಗೆ ಬೇಕಾಗಿದೆ ದಾನಿಗಳ ನೆರವು

Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle

 

ವೃತ್ತಿಯಲ್ಲಿ ಲಾರಿ ಚಾಲಕರಾಗಿರುವ ಸುಳ್ಯ ನಿವಾಸಿ ವಿಜಯಕುಮಾರ್ ಮತ್ತು ಪ್ರೇಮಲತಾ ದಂಪತಿಗಳ ಪುತ್ರ ಹಾರ್ದಿಕ್ (9 ವರ್ಷ ಪ್ರಾಯ) 4 ನೇ ತರಗತಿಯಲ್ಲಿ ಕಲಿಯುತ್ತಿದ್ದು, ಕೆಲವು ವರ್ಷಗಳಿಂದೀಚೆ ತೀವ್ರವಾದ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದಾನೆ.

ಗೆಳೆಯರೊಂದಿಗೆ ಆಟವಾಡುತ್ತಾ ಬೆಳೆಯಬೇಕಿದ್ದ ಮಗು ಗಂಭೀರವಾದ ಆರೋಗ್ಯದ ಸಮಸ್ಯೆಯಿಂದ ಬಳಲುತ್ತಿರುವುದು ಹೆತ್ತವರ ಪಾಲಿಗೆ ಅರಗಿಸಲಾಗದ ನೋವಾಗಿ ಪರಿಣಮಿಸಿದೆ. ಇಲ್ಲಿಯ ತನಕ ಈತನ ಚಿಕಿತ್ಸೆಗೆ ೫ ಲಕ್ಷಕ್ಕಿಂತಲೂ ಅಧಿಕ ಖರ್ಚಾಗಿದ್ದು ಚಿಕಿತ್ಸೆ ಮುಂದುವರಿಸಲು ಲಕ್ಷಾಂತರ ರೂಪಾಯಿ ಅವಶ್ಯಕತೆ ಇರುವುದಾಗಿ ವೈದ್ಯರು ತಿಳಿಸಿರುತ್ತಾರೆ.
ಆದರೆ ಈಗಾಗಲೇ ಚಿಕಿತ್ಸೆಗಾಗಿ ಲಕ್ಷಾಂತರ ರೂಪಾಯಿ ಸಾಲ ಮಾಡಿ ಕಂಗಾಲಾಗಿರುವ ದಂಪತಿಗಳಿಗೆ ಮುಂದಿನ ಚಿಕಿತ್ಸೆಗೆ ಹಣ ಹೊಂದಿಸಲು ದಾರಿ ಕಾಣದಾಗಿದೆ. ಸುಳ್ಯದ ಬೀರಮಂಗಲ ಬಳಿ ಬಾಡಿಗೆ ಮನೆಯಲ್ಲಿ ವಾಸವಿರುವ ಇವರು, ಸಹೃದಯ ದಾನಿಗಳು ನೆರವು ನೀಡಿದಲ್ಲಿ ತಮ್ಮ ಮಗುವಿನ ಚಿಕಿತ್ಸೆ ಮುಂದುವರಿಸಬಹುದೆನ್ನುವ ಆಶಾಭಾವನೆ ಹೊಂದಿರುವ ದಂಪತಿಗಳು ಜಾಲತಾಣದ ಬಂಧುಗಳಲ್ಲಿ ನೆರವಿಗಾಗಿ ಕೈಚಾಚುತ್ತಿದ್ದಾರೆ. ಆದುದರಿಂದ ತಾವುಗಳು ದಯವಿಟ್ಟು ಕೆಳಗೆ ನೀಡಲಾದ ಬ್ಯಾಂಕ್ ಖಾತೆ ಅಥವಾ ಗೂಗಲ್ ಪೇ ಮೂಲಕ ಧನಸಹಾಯ ಮಾಡಬೇಕೆಂದು ಬಾಲಕನ ಹೆತ್ತವರು ಕೇಳಿಕೊಂಡಿದ್ದಾರೆ.

Name: V. PREMALATHA A/c No: 520101057802337 IFSC CODE: UBIN0901172 UNION BANK SULLIA BRANCH

Google Pay No: 9481249335

 

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.