ಫುಟ್ಬಾಲ್ ಆಟಗಾರರು ಹಾಗೂ  ಅಭಿಮಾನಿಗಳಿಂದ ಫುಟ್ಬಾಲ್ ಪೋಸ್ಟ್ ಹಸ್ತಾಂತರ ಹಾಗೂ ಲೋಕಾರ್ಪಣೆ 

0

 

 

 

ಕರ್ನಾಟಕ ಪಬ್ಲಿಕ್ ಸ್ಕೂಲ್ ಗಾಂಧಿನಗರ ಇಲ್ಲಿಯ ಆಟದ ಮೈದಾನಕ್ಕೆ ಫುಟ್ಬಾಲ್ ಆಟಗಾರರು ಹಾಗೂ ಕ್ರೀಡಾಭಿಮಾನಿಗಳಿಂದ 25000 ರೂ ವೆಚ್ಚವನ್ನು ಸಂಗ್ರಹಿಸಿ ಫುಟ್ಬಾಲ್ ಪೋಸ್ಟ್ ನ್ನು ನಿರ್ಮಿಸಿ ಹಸ್ತಾಂತರಿಸಲಾಯಿತು.

ಈ ಒಂದು ಹಸ್ತಾಂತರ ಕಾರ್ಯಕ್ರಮ ಕರ್ನಾಟಕ ಪಬ್ಲಿಕ್ ಸ್ಕೂಲ್ ಗಾಂಧಿನಗರ ಇಲ್ಲಿಯ ಪ್ರಾಂಶುಪಾಲರಾದ ಸಮದ್ ಸರ್ ರವರ ಅದ್ಯಕ್ಷತೆಯಲ್ಲಿ ನಡೆಯಿತು. ಮುನಾಫರ್ ಸುಳ್ಯ ರವರು ಬಂದಂತಹ ಸರ್ವರನ್ನು ಸ್ವಾಗತಿಸಿದರು. ಕರ್ನಾಟಕ ಪಬ್ಲಿಕ್ ಸ್ಕೂಲ್ ಸುಳ್ಯ ದೈಹಿಕ ಶಿಕ್ಷಕರಾದ ಶ್ರೀಮತಿ ಭವಾನಿಯವರು ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿದರು. ಹಾಗೂ ಶರೀಫ್ ಕಂಠಿ ಸುಳ್ಯ ರವರು ಕಾರ್ಯಕ್ರಮದ ಕುರಿತು ಪ್ರಾಸ್ತವಿಕ ಮಾತಗಳನ್ನಾಡಿದರು., ಕಾರ್ಯಕ್ರಮದಲ್ಲಿ ಕರ್ನಾಟಕ ಪಬ್ಲಿಕ್ ಸ್ಕೂಲ್ ಗಾಂಧಿನಗರ ಉಪ ಪ್ರಾಂಶುಪಾಲರಾದ ಅರುಣ್ ಸರ್, ಫರೀದ್ ಶಿಲ್ಪ, ಉರ್ಷಾನ್ ಸುಳ್ಯ,ಶಾಫಿ ನಾವೂರ್, ರಿಝವಾನ್ ನಾವೂರ್, ಉಬೈಸ್ ಸಾಬು, ನಿಝರ್ ಕಲ್ಲುಮುಟ್ಲು, ಶಮಾಲ್ ವೆಲ್ಕಮ್, ಬಷೀರ್ ಗೋರಿ, ಹಾಗೂ ಹಲವಾರು ಊರಿನ ಪ್ರಮುಖರು ಹಾಗೂ ಕರ್ನಾಟಕ ಪಬ್ಲಿಕ್ ಸ್ಕೂಲ್ ಗಾಂಧಿನಗರ ಇಲ್ಲಿಯ ಹಲವಾರು ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡರು.