ನಿವೃತ್ತ ಮುಖ್ಯ ಶಿಕ್ಷಕ ತಿಮ್ಮಪ್ಪ ಗೌಡ ಪಲ್ಲತ್ತಡ್ಕ ನಿಧನ

0

 

ಬಳ್ಪ ಗ್ರಾಮದ ಪಲ್ಲತ್ತಡ್ಕ ನಿವೃತ್ತ ಶಿಕ್ಷಕ ತಿಮ್ಮಪ್ಪ ಗೌಡ ರವರು ಅಲ್ಪ ಕಾಲದ ಅಸೌಖ್ಯದಿಂದ ಆ.20ರಂದು ಮುಂಜಾನೆ ಸ್ವಗೃಹದಲ್ಲಿ ನಿಧನರಾದರು. ಅವರಿಗೆ 72 ವರ್ಷ ವಯಸ್ಸಾಗಿತ್ತು. ಅವರು ಪ್ರಗತಿ ಪರ ಕೃಷಿಕರಾಗಿದ್ದು. ಅವರು ಮಡಪ್ಪಾಡಿ,ಬಳ್ಪ,ಎಲಿಮಲೆ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸಿರುತ್ತಾರೆ.ಪಂಜ ಸಾರ್ವಜನಿಕ ಗಣೇಶೋತ್ಸವ ಸಮಿತಿ ಅಧ್ಯಕ್ಷರಾಗಿ, ಅಡ್ಡಬೈಲು ಭಜನಾ ಮಂಡಳಿಯ ಪದಾಧಿಕಾರಿಯಾಗಿ ಹಾಗೂ ವಿವಿಧ ಸಂಘ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ.ಮೃತರು ಪತ್ನಿ ನಿವೃತ್ತ ಮುಖ್ಯ ಶಿಕ್ಷಕಿ ಶ್ರೀಮತಿ ಲೋಕೇಶ್ವರಿ, ಪುತ್ರ ಪಂಚಶ್ರೀ ಪಂಜ ಸ್ಪೋರ್ಟ್ಸ್ ಕ್ಲಬ್ ನ ಅಧ್ಯಕ್ಷ ಪವನ್ ಪಲ್ಲತ್ತಡ್ಕ, ಪುತ್ರಿ ಶ್ರೀಮತಿ ಲೇಷ್ಮಾ ಹರೀಶ್ ನಡುಗಲ್ಲು, ಸೊಸೆ ಲಿನ್ಯಶ್ರೀ,ಅಳಿಯ, , ಮೊಮ್ಮಕ್ಕಳು, ಬಂಧು ಮಿತ್ರರು,ಕುಟುಂಬಸ್ಥರನ್ನು ಆಗಲಿದ್ದಾರೆ.