ಕರಿಕೆ ಸರಕಾರಿ ಆಯುರ್ವೇದ ಚಿಕಿತ್ಸಾಲಯದ ವೈದ್ಯಾಧಿಕಾರಿಯಾಗಿ ಡಾ. ಪಲ್ಲವಿ ಕೆ.ಸಿ ನೇಮಕಾತಿ

0

 

 

ಕರ್ನಾಟಕ ಸರ್ಕಾರದ ಆಯುಷ್ ಇಲಾಖೆಗೆ ಕೆಪಿಎಸ್ಸಿ ಮೂಲಕ ನೇಮಕಾತಿ ನಡೆದಿದ್ದು, ಡಾ. ಪಲ್ಲವಿ ಕೆ.ಸಿ.ಯವರು ಮಡಿಕೇರಿ ತಾಲ್ಲೂಕಿನ ಕರಿಕೆ ಸರ್ಕಾರಿ ಆಯುರ್ವೇದ ಚಿಕಿತ್ಸಾಲಯಕ್ಕೆ ಸೇವೆಗೆ ನೇಮಕಾತಿಗೊಂಡಿದ್ದಾರೆ.

ಮೂಲತಃ ಸುಳ್ಯ ತಾಲ್ಲೂಕಿನ ಅರಂತೋಡು ಗ್ರಾಮದ ಕರಿ೦ಬಿ ಮನೆ ಚಿನ್ನಪ್ಪ ಗೌಡ ಮತ್ತು ಪುಷ್ಪಾವತಿ ಶಿಕ್ಷಕ ದಂಪತಿಗಳ ಪುತ್ರಿಯಾಗಿರುವ ಇವರು, 2006ರಿಂದ 2021ವರೆಗೆ ಸುದೀರ್ಘ 15 ವರ್ಷಗಳ ಕಾಲ ಕೊಲ್ಲಮೊಗ್ರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕಾಂಟ್ರ್ಯಾಕ್ಟ್ ನೆಲೆಯಲ್ಲಿ ವೈದ್ಯಾಧಿಕಾರಿಯಾಗಿ ಸೇವೆಯಲ್ಲಿದ್ದರು.

ರೋಟರಿ ಪ್ರಾಥಮಿಕ ಶಾಲೆಯಲ್ಲಿ ತನ್ನ ಪ್ರಾಥಮಿಕ ಶಿಕ್ಷಣವನ್ನು, ಕೆವಿಜಿ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ತನ್ನ ಹೈಸ್ಕೂಲ್ ಸ್ಕೂಲ್ ಶಿಕ್ಷಣವನ್ನು, ನೆಹರು ಮೆಮೋರಿಯಲ್ ಪದವಿ ಪೂರ್ವ ಕಾಲೇಜಿನಲ್ಲಿ ತನ್ನ ಪಿಯುಸಿ ವಿದ್ಯಾಭ್ಯಾಸ ಪೂರೈಸಿ ಕೆವಿಜಿ ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಬಿ.ಎ.ಎಂ.ಎಸ್ ಪದವಿ ಪಡೆದಿದ್ದರು.

ಡಾ. ಪಲ್ಲವಿಯವರು ಕೆವಿಜಿ ಇಂಜಿನಿಯರಿಂಗ್ ಕಾಲೇಜಿನ ಮೆಕ್ಯಾನಿಕಲ್ ವಿಭಾಗದ ಪ್ರೊಫೆಸರ್ ಪ್ರಶಾಂತ ತಂಟೆಪ್ಪಾಡಿಯವರ ಧರ್ಮಪತ್ನಿ.