ಆಸ್ಪತ್ರೆಗೆ ತಲುಪುವಷ್ಟರೊಳಗ ಕಾರಿನಲ್ಲಿಯೇ ಹೆರಿಗೆಯಾದ ಮಹಿಳೆ

0

 

ಆರೋಗ್ಯದಿಂದಿರುವ ತಾಯಿ ಮತ್ತು ಮಗು

ಗರ್ಭಿಣಿ ಮಹಿಳೆಯೋರ್ವರು ಮನೆಯಲ್ಲಿ ಹೆರಿಗೆ ನೋವು ಕಾಣಿಸಿ ಸುಳ್ಯ ಆಸ್ಪತ್ರೆಗೆ ಕರೆತರುವ ವೇಳೆ ಆಸ್ಪತ್ರೆಗೆ ತಲುಪುತ್ತಿದ್ದಂತೆ ಕಾರಿನಲ್ಲಿಯೇ ಗಂಡು ಮಗುವಿಗೆ ಜನ್ಮ ನೀಡಿದ ಘಟನೆ ಇಂದು ಮುಂಜಾನೆ ರ 3 ಗಂಟೆ ಸುಮಾರಿಗೆ  ನಡೆದಿದೆ.

 

ಅರಂಬೂರು ನಿವಾಸಿ ಅಯಾಜ್ ಎಂಬವರ ಪತ್ನಿ ಸಫಿಯಾ ಕಾರಿನಲ್ಲಿ ಹೆರಿಗೆಯಾದ ಮಹಿಳೆ.

ನಿನ್ನೆ ಪುತ್ತೂರಿನ ಸಂಬಂಧಿಕರ ಮನೆಗೆ ಸಫಿಯಾ ಮತ್ತು ಮನೆಯವರು ತೆರಳಿದ್ದು ರಾತ್ರಿ ಹನ್ನೊಂದು ಗಂಟೆಗೆ ಅರಂಬೂರಿನ ಅವರ ಮನೆಗೆ ಬಂದಿರುತ್ತಾರೆ ಎನ್ನಲಾಗಿದೆ.
ರಾತ್ರಿ 2:30ರ ಸಮಯದಲ್ಲಿ ಸಫಿಯರಿಗೆ ಹೆರಿಗೆ ನೋವು ಕಾಣಿಸಿಕೊಂಡಿದ್ದು ವೈದ್ಯರು ನೀಡಿದ ದಿನಾಂಕ ಇನ್ನು ಎಂಟು ದಿನ ಬಾಕಿ ಇರುವ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ಸಹಜವಾಗಿ ಬಂದಿದ್ದರು. ಆದರೆ ಸುಳ್ಯ ಕೆವಿಜಿ ಆಸ್ಪತ್ರೆಗೆ ತಲುಪುತ್ತಿದ್ದಂತೆ ಹೆರಿಗೆ ನೋವು ಜಾಸ್ತಿಯಾಗಿ ಅವರನ್ನು ಕರೆದುಕೊಂಡು ಬರುತ್ತಿದ್ದ ಆಲ್ಟೊ ಕಾರಿನಲ್ಲಿಯೇ ಮುದ್ದಾದ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.
ಆಸ್ಪತ್ರೆಯ ಸಿಬ್ಬಂದಿಗಳು ಮತ್ತು ವೈದ್ಯರ ತಂಡ ಕೂಡಲೆ ಕಾರ್ಯಪ್ರವೃತ್ತರಾಗಿ ತಾಯಿ ಮತ್ತು ಮಗುವಿಗೆ ಆರೈಕೆಯನ್ನು ನೀಡಿ ಇದೀಗ ಇಬ್ಬರೂ ಆರೋಗ್ಯವಂತರಾಗಿದ್ದಾರೆ ಎಂದು ತಿಳಿದುಬಂದಿದೆ.