ಪಂಜದಲ್ಲಿ ಶ್ರೀ ಭಜನೋತ್ಸವ- ಧಾರ್ಮಿಕ ಸಭಾ ಕಾರ್ಯಕ್ರಮ

0

 

ಭಜನೆಯಿಂದ ದೇವರ ಅನುಗ್ರಹ-ಹರೀಶ್ ಕಂಜಿಪಿಲಿ

ಭಜನೆಯಿಂದ ಸಂಸ್ಕಾರ ಸಂಸ್ಕೃತಿ ಬೆಳವಣಿಗೆ : ಯತೀಶ್ ದುಗಲಡ್ಕ

ಭಜನೆಗೆ ಪ್ರತಿ ಮನೆಯವರು ಸಹಕರಿಸಿದ್ದಾರೆ : ಪ್ರಕಾಶ್ ಜಾಕೆ

ಶ್ರೀ ಶಾರದಾಂಬಾ ಭಜನಾ ಮಂಡಳಿಯ ಪಂಜ,ಭಜನೋತ್ಸವ ಸಮಿತಿ ಇದರ ಆಶ್ರಯದಲ್ಲಿ ಆ.19 ರಂದು ಶ್ರೀ ಭಜನೋತ್ಸವ 2022 ಅರ್ಧ ಏಕಹ ಭಜನಾ ಕಾರ್ಯಕ್ರಮ ಸೂರ್ಯೋದಯದಿಂದ ಸೂರ್ಯಾಸ್ತಮಾನ ದವರೆಗೆ ಪಂಜ ಶ್ರೀ ಶಾರದಾಂಬಾ ಭಜನಾ ಮಂದಿರದಲ್ಲಿ ಜರುಗಿತು. ಸಂಜೆ ಸಾಮೂಹಿಕ ಶ್ರೀ ಸತ್ಯನಾರಾಯಣ ದೇವರ ಪೂಜೆ ಮತ್ತು ಧಾರ್ಮಿಕ ಸಭಾ ಕಾರ್ಯಕ್ರಮ ಜರುಗಿತು. ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ
ಮುಖ್ಯ ಅತಿಥಿ ಸ್ಥಾನದಿಂದ ಜಿ.ಪಂ.ಮಾಜಿ ಸದಸ್ಯ ಹರೀಶ್ ಕಂಜಿಪಿಲಿ ರವರು ಮಾತನಾಡಿ
“ಭಜನೆಯಿಂದಾಗಿ
ಜಾತಿ, ಅಂತಸ್ತುಗಳನ್ನು ಮರೆತು ನಾವೆಲ್ಲ ಒಂದೇ , ನಾವೆಲ್ಲ ಹಿಂದುಗಳು ಭಾವನೆಗಳು ಬೆಳೆಯುತ್ತದೆ. ಕಠಿಣ ತಪಸ್ಸು, ಪೂಜೆ ಮೂಲಕ ದೇವರ ಒಲಿಸಲು ಆಗುತ್ತದೆ.ಅದಕ್ಕಿಂತ‌ಲೂ ಸುಲಭವಾಗಿ ದೇವರ ಒಲಿಸುವ ದಾರಿ ಭಜನೆ.”ಎಂದು ಅವರು ಹೇಳಿದರು.

ಇನ್ನೋರ್ವ ಅತಿಥಿ ತಾಲೂಕು ಭಜನಾ ಪರಿಷತ್ ಕಾರ್ಯದರ್ಶಿ ಯತೀಶ್ ದುಗಲಡ್ಕ ಮಾತನಾಡಿ
“ಪ್ರತಿ ಮನೆ ಮನಗಳಲ್ಲಿ ಭಜನೆ ಸಂಕೀರ್ತನೆ ನಡೆಯಬೇಕು.ಈ ಮೂಲಕ ಮಕ್ಕಳಿಗೆ ನಮ್ಮ ಸಂಸ್ಕಾರ , ಸಂಸ್ಕೃತಿಯನ್ನು ತಿಳಿಸಿ ಕೊಡುವ ಕಾರ್ಯಗಳು ಆಗುತ್ತದೆ.”ಎಂದು ಅವರು ಹೇಳಿದರು.
ಭಜನೋತ್ಸವ ಸಮಿತಿ ಅಧ್ಯಕ್ಷ ಪ್ರಕಾಶ್ ಜಾಕೆ ಸಭಾಧ್ಯಕ್ಷತೆ ವಹಿಸಿ
ಮಾತನಾಡಿ
“ನಾವು ಮನೆ ಮನೆ ಭಜನೆಗೆ ಹೋದಲ್ಲಿ ಪ್ರತೀ ಮನೆಯವರು ಸಹಕರಿಸಿದ್ದಾರೆ ಮತ್ತು ನಮ್ಮೊಂದಿಗೆ ಭಜನೆಯಲ್ಲಿ ಪಾಲ್ಗೊಂಡಿರುತ್ತಾರೆ.ಈ ಪರಿಸರದಲ್ಲಿ ಪುಟಾಣಿಗಳು ರಾತ್ರಿ ನಮ್ಮೆಂದಿಗೆ ಬಹಳ ಉತ್ಸಾಹದಿಂದ ಭಜನೆಯಲ್ಲಿ ಪಾಲ್ಗೊಂಡಿದ್ದರು.”
ಎಂದು ಹೇಳಿದರು.

ಭಜನಾ ಪರಿಷತ್ ಪೂರ್ವಾಧ್ಯಕ್ಷ ವಿಶ್ವನಾಥ ರೈ ಅರ್ಗುಡಿ,ಭಜನೋತ್ಸವ ಸಮಿತಿಯ ಕಾರ್ಯದರ್ಶಿ ವಾಚಣ್ಣ ಕೆರೆಮೂಲೆ, ಖಜಾಂಜಿ ರಾಜಕುಮಾರ್ ಬೇರ್ಯ, ಭಜನಾ ಮಂಡಳಿ ಅಧ್ಯಕ್ಷ ಬಾಲಕೃಷ್ಣ ಪುತ್ಯ, ಉಪಾಧ್ಯಕ್ಷ ತಿಮ್ಮಪ್ಪ ಗೌಡ ಕೂತ್ಕುಂಜ, ಕಾರ್ಯದರ್ಶಿ ಗುರುಪ್ರಸಾದ್ ತೋಟ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಇದೇ ವೇಳೆ ಭಜನೋತ್ಸವ ಸಮಿತಿ ಅಧ್ಯಕ್ಷ ಪ್ರಕಾಶ್ ಜಾಕೆ ಕಾರ್ಯದರ್ಶಿ ವಾಚಣ್ಣ ಕೆರೆಮೂಲೆ, ಖಜಾಂಜಿ ರಾಜಕುಮಾರ್ ಬೇರ್ಯ ರವರನ್ನು ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಪುರುಷೋತ್ತಮ ನಾಗತೀರ್ಥ ಪ್ರಾರ್ಥಿಸಿದರು.ದೇವಿಪ್ರಸಾದ್ ಕಡಪಲ ಸ್ವಾಗತಿಸಿದರು.ಪುರಂದರ ಶೆಟ್ಟಿ ನಾಗತೀರ್ಥ ನಿರೂಪಿಸಿದರು.ಗುರುಪ್ರಸಾದ್ ತೋಟ ಪ್ರಾ‌ಸ್ತಾವಿಕಗೈದರು.ವಾಚಣ್ಣ ಕೆರೆಮೂಲೆ ವಂದಿಸಿದರು.
*ದೀಪ ಪ್ರಜ್ವಲನೆ:*
ಮುಂಜಾನೆ ಪಂಜ ಶ್ರೀ ಪರಿವಾರ ಪಂಚಲಿಂಗೇಶ್ವರ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪದ್ಮನಾಭ ರೈ ಅಗೋಳಿಬೈಲುಗುತ್ತು ದೀಪ ಪ್ರಜ್ವಲನೆ ಮಾಡಿದರು. ಭಜನೋತ್ಸವ ಸಮಿತಿ ಅಧ್ಯಕ್ಷ ಪ್ರಕಾಶ್ ಜಾಕೆ, ಕಾರ್ಯದರ್ಶಿ ವಾಚಣ್ಣ ಕೆರೆಮೂಲೆ,ಭಜನಾ ಮಂಡಳಿ ಅಧ್ಯಕ್ಷ ಬಾಲಕೃಷ್ಣ ಪುತ್ಯ, ಕಾರ್ಯದರ್ಶಿ ಗುರುಪ್ರಸಾದ್ ತೋಟ, ಭಜನೋತ್ಸವ ಸಮಿತಿಯ ಖಜಾಂಜಿ ರಾಜಕುಮಾರ್ ಬೇರ್ಯ, ಭಜನಾ ಪರಿಷತ್ ಪೂರ್ವಾಧ್ಯಕ್ಷ ವಿಶ್ವನಾಥ ರೈ ಅರ್ಗುಡಿ,ಭಜನಾ ಮಂಡಳಿ ಸದಸ್ಯರು, ವಿವಿಧ ಭಜನಾ ತಂಡದವರು, ಮೊದಲಾದವರು ಉಪಸ್ಥಿತರಿದ್ದರು.ಗುರುಪ್ರಸಾದ್ ತೋಟ ಸ್ವಾಗತಿಸಿದರು ಮತ್ತು ವಂದಿಸಿದರು.