ಶ್ರೀ ಶ್ರೀ ವಿದ್ಯಾಪ್ರಸನ್ನತೀರ್ಥ ಶ್ರೀ ಪಾದಂಗಳವರ ೨೬ನೇ ಚಾತುರ್ಮಾಸ್ಯ ವೃತ

0

 

ಸಾಂಸ್ಕೃತಿಕ ವೈಭವ – 2022 ಆರಂಭ, ಶ್ರೀಗಳಿಂದ ದೀಪ ಪ್ರಜ್ವಲನೆ

ಶ್ರೀ ಸಂಪುಟ ನರಸಿಂಹ ಸ್ವಾಮಿ ಶ್ರೀ ಸುಬ್ರಹ್ಮಣ್ಯ ಮಠದ ಶ್ರೀ ವಿದ್ಯಾಪ್ರಸನ್ನತೀರ್ಥ ಶ್ರೀ ಪಾದಂಗಳವರ ೨೬ನೇ ಚಾತುರ್ಮಾಸ್ಯ ವೃತದ ಪ್ರಯುಕ್ತ
ಸಾಂಸ್ಕೃತಿಕ ವೈಭವ – ೨೦೨೨ ಆ.೧೯  ರಿಂದ ಆರಂಭವಾಗಿ ಆ.28 ರ ವರೆಗೆ ನಡೆಯಲಿದೆ. ಸಂಜೆ ಶ್ರೀ ಶ್ರೀ ವಿದ್ಯಾಪ್ರಸನ್ನತೀರ್ಥ ದೀಪೋಜ್ವಲನೆ ಮಾಡಿ ಕಾರ್ಯಕ್ರಮಗಳಿಗೆ ಚಾಲನೆ ನೀಡಿ ಆಶೀವರ್ಚನ ನೀಡಿದರು.

 

ಬಳಿಕ “ಸಂಜೀವ ಕುಸುಮೋದ್ಧಾರ” ಎಂಬ ಯಕ್ಷಗಾನ ತಾಳಮದ್ದಳೆ ನಡೆಯಿತು. ಯಕ್ಷಶ್ರೀ ಹವ್ಯಾಸಿ ಬಳಗ ಪುತ್ತೂರು ತಾಳಮದ್ದಳೆ ನಡೆಸಿಕೊಟ್ಟರು. ಆ.೨೦ ರಂದು ಸಂಜೆ ೫ ರಿಂದ “ಶ್ರೀಮದ್ ಭಾಗವತದ ಅವಿಸ್ಮರಣೀಯ ಘಟನಾವಳಿಗಳು” ಎಂಬ ವಿಷಯದ ಬಗ್ಗೆ ಶ್ರೀ ಶ್ರೀ ವಿದ್ಯಾಪ್ರಸನ್ನತೀರ್ಥ ರಿಂದ ಪ್ರವಚನ ನಡೆಯಲಿದೆ. ಸಂಜೆ ೬ ರಿಂದ ಕಾವ್ಯವಾಚನ ಹಾಗೂ ಭಕ್ತಿ ಗಾಯನ ನಡೆಯಲಿದೆ. ಆ.೨೧ ರ ಸಂಜೆ ೪ ರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ಹಾಗೂ ದಾಸರ ಪದಗಳ ಗಾಯನ ಅಮೃತವರ್ಷಿನಿ ಮತ್ತು ಬಳಗದಿಂದ ನಡೆಯಲಿದೆ. ಸಂಜೆ ೫.೧೫ ರಿಂದ ಸಂಕಲ್ಪದ ಮಹತ್ವ ಎಂಬ ವಿಷಯದ ಬಗ್ಗೆ ಸುಹಾಸ್ ಭಟ್ ರಿಂದ ಉಪನ್ಯಾಸ ನಡೆಯಲಿದೆ. ಸಂಜೆ ೫.೩೦ ರಿಂದ ವಿದ್ವಾನ್ ನಿರಂಜನ್ ದಿಂಡೋಡಿ ಬೆಂಗಳೂರು ಇವರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ನಡೆಯಲಿದೆ. ಆ.೨೨ ಸಾಯಂಕಾಲ ೩ ರಿಂದ ಯಕ್ಷಗಾನ ತಾಳಮದ್ದಳೆ “ಶ್ರೀರಾಮ ನಿರ್ಯಾಣ” ನಡೆಯಲಿದೆ. ಭಾಗವತರಾಗಿ : ಡಾ| ಸತ್ಯನಾರಾಯಣ ಪುಣ್ಚಿತ್ತಾಯ, ಮದ್ದಳೆಯಲ್ಲಿ ವಿದ್ವಾನ್ ಪದ್ಮನಾಭ ಉಪಾಧ್ಯಾಯ, ಚೆಂಡೆಯಲ್ಲಿ ಸುಬ್ರಹ್ಮಣ್ಯ ಮುಚ್ಚಿಂತ್ತಾಯ ಇರಲಿದ್ದಾರೆ. ಆ.೨೩. ರಂದು ಸಾಯಂಕಾಲ ೪-೩೦ ಶ್ರೀ ಶೀ ವಿದ್ಯಾಪ್ರಸನ್ನತೀರ್ಥ ಗಳಿಂದ ಪ್ರವಚನ ನಡೆಯಲಿದೆ. ಸಂಜೆ ಗಂಟೆ ೫-೦೦ ರಿಂದ “ವೈದಿಕ, ಪೌರಾಣಿಕ ಮತ್ತುಜನಪದ ಆಚರಣೆಗಳಲ್ಲಿ ಆಧುನಿಕತೆ ವರವೇ?ಶಾಪವೆ” ಎಂಬ ವಿಷಯದ ಮೇಲೆ ಚಿಂತನ – ಮಂಥನ ಶ್ರೀ ಲಕ್ಷ್ಮೀಶ ತೋಳ್ಪಾಡಿ ಅವರ ನೇತೃತ್ವದಲ್ಲಿ ನಡೆಯಲಿದೆ. ಮಾಧವ ಭಟ್, ಶ್ರೀಶ ಕುಮಾರ್, ಶ್ರೀಕೃಷ್ಣ ಉಪಾಧ್ಯಾಯ, ರಾಕೇಶ್ ಕುಮಾರ್ ಕಮ್ಮಜೆ ಭಾಗವಹಿಸಲಿದ್ದಾರೆ. ಆ. ೨೪ ರಂದು ಸಂಜೆ ೫ ರಿಂದ “ಮಹಾಭಾರತ ಗ್ರಂಥದಲ್ಲಿ ಬರುವ ಹೃದಯಸ್ಪರ್ಶಿ ಸನ್ನಿವೇಶಗಳು” ಎಂಬ ವಿಷಯದ ಬಗ್ಗೆ ಶ್ರೀಗಳವರಿಂದ ಪ್ರವಚನ ನಡಯಲಿದೆ. ಗಂಟೆ ೫-೪೫ ರಿಂದ ವಿದ್ವಾನ್ ಶ್ರೀ ವೈ ಅನಂತಪದ್ಮನಾಭ ಭಟ್, ಕಾರ್ಕಳ ಹರಿಕಥಾ ಶ್ರವಣ “ಭಕ್ತ ಸುಧಾಮ” ನಡೆಯಲಿದೆ. ಆ. ೨೫ ರ ಸಂಜೆ ೫ ರಿಂದ “ಸಾಮಾಜಿಕ ಸ್ವಾಸ್ತ್ಯ ಕಾಪಾಡುವಲ್ಲಿ ಮಠಾಧಿಪತಿಗಳ ಜವಾಬ್ದಾರಿ” ಎಂಬ ವಿಷಯದ ಬಗ್ಗೆ ವಿದ್ಯಾಪ್ರಸನ್ನ ಶ್ರೀಗಳವರಿಂದ ಪ್ರವಚನ ನಡೆಯಲಿದೆ. ಸಾಯಂಕಾಲ ೬-೦೦ರಿಂದ ಯಜ್ಞೇಶ್ ಆಚಾರ್ ರವರಿಂದ “ದಾಸ ಸಂಕೀರ್ತನೆ” ನಡೆಯಲಿದೆ. ಆ.೨೬ ಸಾಯಂಕಾಲ ೪ ರಿಂದ ಪ್ರೊ.ಪವನ್ ಕಿರಣ್ ಕೆರೆ ವಿರಚಿತ ಳೆ `ಶ್ರೀ ರಂಗ ತುಲಾಭಾರ’ ತಾಳಮದ್ದಲೆ ಧೀಶಕ್ತಿ ಮಹಿಳಾ ಯಕ್ಷ ಬಳಗ, ಪುತ್ತೂರು ಇವರಿಂದ ನಡೆಯಲಿದೆ. ಕು| ರಚನಾ ಚಿದ್ಗಲ್ ಭಾಗವತಿಗೆ ಮಾಡಲಿದ್ದಾರೆ. ಲಕ್ಷ್ಮೀಶ ಪಂಜ ಮದ್ದಳೆಯಲ್ಲಿ ಇರಲಿದ್ದಾರೆ. ಕುಮಾರ ಪುತ್ತೂರು ಚೆಂಡೆ ನುಡಿಸಲಿದ್ದಾರೆ. ಆ.೨೮ ರಂದು ಸಾಯಂಕಾಲ ೫-೦೦ರಿಂದ ಯಕ್ಷಗಾನ ತಾಳಮದ್ದಳೆ “ತಾಮ್ರಧ್ವಜ ಕಾಳಗ” ನಡೆಯಲಿದೆ. ದುರ್ಗಾಂಬ ಕಲಾ ಸಂಗಮ ಶ್ರೀ ಕ್ಷೇತ್ರ ಶರವೂರು ಆಲಂಕಾರು ಅರಿಂದ ನಡೆಯಲಿದೆ. ಭಾಗವತರಾಗಿ ಗೋಪಾಲಕೃಷ್ಣ ಭಟ್ ನೈಮಿಶ ಮತ್ತು ಡಿ.ಕೆ ಆಚಾರ್ಯ ಇರಲಿದ್ದಾರೆ. ಚೆಂಡೆ ಮದ್ದಳೆಯಲ್ಲಿ ಚಂದ್ರ ದೇವಾಡಿಗ ನಗ್ರಿ, ಮೋಹನ ಕುಮಾರ್ ಶರವೂರು, ಶ್ರೀಹರಿ ದೇವಾಡಿಗ ಬಿಳಿವರ್ಗ ಇರಲಿದ್ದಾರೆ.