ಐಟಿ ಕಚೇರಿಗೆ ಕಲ್ಲು ಎಸೆದ ಕಾಂಗ್ರೆಸ್ಸಿನವರಿಂದ ಸಂಸ್ಕೃತಿಯ ಪಾಠ ಹಾಸ್ಯಾಸ್ಪವಾಗಿದೆ

0

 

ಮೊಟ್ಟೆ ಎಸೆತಕ್ಕೆ ಜನಾಕ್ರೋಶವೇ ಕಾರಣ : ಬಿಜೆಪಿ ಯುವ ಮೋರ್ಚಾ

ಮೊಟ್ಟೆ ಮತ್ತು ಕಲ್ಲು ಹೊಡೆಯುವುದು ಬಿಜೆಪಿಯ ಸಂಸ್ಕೃತಿ ಎಂದು ಹೇಳಿಕೆ ನೀಡಿದ ಇನ್ ಟಕ್ ಕಾಂಗ್ರೆಸ್ ನ ಅಧ್ಯಕ್ಷರಿಗೆ 2017 ರಲ್ಲಿ ಮಂಗಳೂರಿನ ಆದಾಯ ತೆರಿಗೆ ಕಚೇರಿ ಗೆ ಯುವ ಕಾಂಗ್ರೆಸ್ ನ ಪುಂಡರು ಕಲ್ಲು ಎಸೆದದ್ದು ಮರೆತು ಹೋಗಿದೆಯೇ ಎಂದು ಸುಳ್ಯ ಬಿಜೆಪಿ ಯುವ ಮೋರ್ಚಾ ಪ್ರಶ್ನಿಸಿದೆ.

ಆಗಸ್ಟ್ 19ಕ್ಕೆ ಕಾಂಗ್ರೆಸ್ ನ ಶಿವರಾಜ ತಂಗಡಗಿ ಯವರು ಸ್ವತಃ ಮೊಟ್ಟೆ ಎಸೆದರೆ ಕಾಂಗ್ರೆಸ್ ನವರು ಕಲ್ಲು ಎಸೆಯುತ್ತಾರೆ ಅಂತ ಸಾರ್ವಜನಿಕವಾಗಿ ಹೇಳಿಕೆ ನೀಡಿದ್ದಾರಲ್ಲವೇ. ಇತ್ತೀಚೆಗಷ್ಟೆ ಪಂಜಾಬ್ ನಲ್ಲಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಭದ್ರತೆ ನೀಡದೆ ಅವರ ಪ್ರಾಣಕ್ಕೆ ಸಂಚಕಾರ ಬರುವ ರೀತಿಯಲ್ಲಿ ಅಲ್ಲಿನ ಕಾಂಗ್ರೆಸ್ ಸರಕಾರ ವರ್ತಿಸುವುದು ದೇಶದ ಜನ ಇನ್ನೂ ಮರೆತಿಲ್ಲ.
ಕಾಂಗ್ರೆಸ್ ಸಂಸ್ಕೃತಿಯ ಬೇರುಗಳಲ್ಲಿ ಪುಂಡಾಟಿಕೆ ಮತ್ತು ಅರಾಜಕತೆ ತುಂಬಿರುವುದು ಸ್ಪಷ್ಟವಾಗಿ ಕಾಣುತ್ತದೆ.
ಕೊಡವರ ಭಾವನೆಗೆ ಬೆಲೆ ಕೊಡದ ಸಿದ್ಧರಾಮಯ್ಯರಿಗೆ ಜನಾಕ್ರೋಶ ದ ಬಿಸಿ ತಟ್ಟಿದೆ. ಕೊಡವರು ಅತ್ಯಂತ ಸ್ವಾಭಿಮಾನಿ ಜನಗಳು. ಒಂದು ಸಮುದಾಯವನ್ನು ಓಲೈಸುವ ಭರದಲ್ಲಿ ಸಿದ್ದರಾಮಯ್ಯನವರು ಕೊಡವರ ಸ್ವಾಭಿಮಾನಕ್ಕೆ ಧಕ್ಕೆ ಮಾಡಿದ್ದಾರೆ.
ಮಾಜಿ ಮುಖ್ಯಮಂತ್ರಿಗಳು ಹಾಗೂ ಹಾಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ನವರು ಅಂಥಾ ಘನತೆವೆತ್ತ ಸ್ಥಾನದಲ್ಲಿದ್ದರೂ ಒಂದೇ ಸಮುದಾಯದ ವಕ್ತಾರನಂತೆ ವರ್ತಿಸುತ್ತಿರುವುದು ಕೊಡಗಿನ ಬಹುಸಂಖ್ಯಾತ ಮೂಲನಿವಸಿಗಳ ಮನಸಿಗೆ ನೋವಾಗಿದೆ.ಆ ನೋವಿನ ಪರಿಣಾಮವೇ ಮೊಟ್ಟೆ ಎಸೆತ. ಇದನ್ನು ಅರ್ಥ ಮಾಡುವಷ್ಟು ಬುದ್ದಿವಂತಿಕೆ ಸಿದ್ಧರಾಮಯ್ಯ ಅವರಿಗೆ ಇದೆ ಅಂತ ಭಾವಿಸುತ್ತೇವೆ.

ಕಾಂಗ್ರೆಸ್ ಪಕ್ಷವು ಬಿಜೆಪಿಯನ್ನು ಬಯ್ಯುವುದು ಬಿಟ್ಟು ಮೊದಲು ತನ್ನನ್ನು ತಾನು ತಿದ್ದಿಕೊಳ್ಳಲಿ ಎಂದು ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ರು ಹಾಗೂ ಪ್ರಧಾನ ಕಾರ್ಯದರ್ಶಿ ಯವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.