ರೋಟರಿ ಕ್ಲಬ್ ವತಿಯಿಂದ ರಕ್ಷಾಬಂಧನ ಕಾರ್ಯಕ್ರಮ

0

 

ಬದುಕಿನಲ್ಲಿ ಪ್ರತಿಯೊಬ್ಬ ವ್ಯಕ್ತಿಯು ಸಹೋದರತೆ ಮತ್ತು ಸಹಬಾಳ್ವೆಯಿಂದ ನಡೆಯುವ ಅನಿವಾರ್ಯತೆ ನಮ್ಮ ಸಮಾಜದಲ್ಲಿ ಇದೆ ಸಹೋದರತ್ವವನ್ನು ಸಾರುವ ರಕ್ಷಾಬಂಧನ ಕಾರ್ಯಕ್ರಮವು ಪ್ರತಿಯೊಬ್ಬನ ಜೀವನದಲ್ಲಿ ಹೊಸ ದಿಕ್ಕನ್ನು ಮೂಡಿಸಲಿ ಎಂದು ಬ್ರಹ್ಮಕುಮಾರಿ ಈಶ್ವರಿಯ ವಿಶ್ವವಿದ್ಯಾಲಯ ಧಾರವಾಡ ಘಟಕದ ಸಂಚಾಲಕರಾದ ಬಿಕೆ ಜಯಂತಿ ಇವರು ರಕ್ಷಾಬಂಧನ ಕಾರ್ಯಕ್ರಮದಡಿಯಲ್ಲಿ ರೊಟರಿ ಸದಸ್ಯರನ್ನು ಉದ್ದೇಶಿಸಿ ಮಾತನಾಡಿದರು.

ರೋಟರಿ ಕ್ಲಬ್ ಸುಳ್ಯ ಇದರ ವತಿಯಿಂದ ನಡೆದ ರಕ್ಷಾಬಂಧನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಸಭಾಧ್ಯಕ್ಷತೆಯನ್ನು ರೊಟೆರಿಯನ್ ಚಂದ್ರಶೇಖರ್ ಪೆರಾಲ್ ವಹಿಸಿದ್ದರು .

ವೇದಿಕೆಯಲ್ಲಿ ರೋಟರಿ ಪೂರ್ವ ಅಧ್ಯಕ್ಷರಾದ ರೋಟೆರಿಯನ್ ಪ್ರಭಾಕರ್ ನಾಯರ್ ಮತ್ತು ನಿಯೋಜಿತ ಅಧ್ಯಕ್ಷರಾದ ರೊಟೆರಿಯನ್ ಆನಂದ ಖಂಡಿಗ ಇವರು ಉಪಸ್ಥಿತರಿದ್ದರು.

 

ಎಲ್ಲಾ ರೋಟರಿ ಸದಸ್ಯರಿಗೆ ರಾಖಿ ಕಟ್ಟಿ ಸಹೋದರತೆಯ ಸಂಕೇತವನ್ನು ಬ್ರಹ್ಮಕುಮಾರಿ ಈಶ್ವರಿಯ ವಿಶ್ವವಿದ್ಯಾಲಯದ ಸದಸ್ಯರು ಸಾರಿದರು. ಕಾರ್ಯಕ್ರಮದಲ್ಲಿ ರೊ ಬಾಪು ಸಾಹೆಬ್ ಪ್ರಾರ್ಥಿಸಿದರು ಕಾರ್ಯದರ್ಶಿ ರೊ. ಮಧುರಾ ಎಮ್ ಆರ್ ವಂದಿಸಿದರು.