ಪೆರಾಜೆ ಶಾಸ್ತಾವು ಕ್ಷೇತ್ರದಲ್ಲಿ ಸೋನಾ ಶನಿವಾರದ ಪ್ರಯುಕ್ತ ವಿಶೇಷ ಶನಿ ಪೂಜೆ

0

 

 

ಪೆರಾಜೆಯ ಶ್ರೀ ಶಾಸ್ತ್ರವು ದೇವಸ್ಥಾನದಲ್ಲಿ ಸೋಣ ಶನಿವಾರದ ಪ್ರಯುಕ್ತ ವಿಶೇಷ ಶನಿ ಪೂಜೆ ಆ.20ರಂದು ನಡೆಯಿತು.

ಆ.20 ರಂದು ಬೆಳಗ್ಗೆ ಹಾಗೂ‌ ಮಧ್ಯಾಹ್ನ ಶನಿ ಪೂಜೆ ನಡೆಯಿತು. ಸೋಣ ಶನಿವಾರದ ಪ್ರಯುಕ್ತ ವಿಶೇಷ ಪೂಜೆಯೂ ನಡೆಯಿತು.

 

ನೂರಾರು ಭಕ್ತರು‌ ಆಗಮಿಸಿ ದೇವರ ಪ್ರಸಾದ ಸ್ವೀಕರಿಸಿದರು. ದೇವಸ್ಥಾನದ ಆಡಳಿತ ಮೊಕ್ತೇಸರರು, ವಿವಿಧ ಉಪ ಸಮಿತಿಯ ಪದಾಧಿಕಾರಿಗಳು ಊರವರು ಇದ್ದರು.

ಆಗಸ್ಟ್ ತಿಂಗಳ 27 ಹಾಗೂ ಸೆಪ್ಟೆಂಬರ್ ತಿಂಗಳ 3, 10 ಹಾಗೂ 17 ನೇ ತಾರೀಕಿನಂದು ಕೂಡಾ ಸೋಣ ಶನಿವಾರ ಕಾರ್ಯಕ್ರಮ ಮತ್ತು ವಿಶೇಷ ಶನಿಪೂಜೆಗಳು ಜರುಗುವುದು.

ಶನಿಪೂಜೆ ವಾರದ ಎಲ್ಲ ದಿನಗಳಲ್ಲಿ ನಡೆಯಲಿದ್ದು ಪೂಜೆ ಮಾಡಿಸುವ ಭಕ್ತರು ಬೆಳಗ್ಗೆ 7 ಗಂಟೆಗೆ ಹಾಗೂ ಮಧ್ಯಾಹ್ನ ಪೂಜೆ ಮಾಡಿಸುವವರು 11 ಗಂಟೆಗೆ ಮುಂಚಿತವಾಗಿ ದೇವಳದಲ್ಲಿ ಹಾಜರಿರಬೇಕು. ಸೋಣ ಶನಿವಾರದಂದು ಭಕ್ತರ ಅನುಕೂಲಕ್ಕಾಗಿ ಬೆಳಗ್ಗಿನ ಉಪಹಾರದ ವ್ಯವಸ್ಥೆ ಯೂ ಇದೆ. ಈ ಪುಣ್ಯ ಕಾರ್ಯದಲ್ಲಿ ಊರ ಹಾಗೂ ಪರವೂರ ಭಕ್ತರು ಭಾಗವಹಿಸಬೇಕೆಂದು ದೇವಳದ ಆಡಳಿತ ಮೊಕ್ತೇಸರರಾದ ಜಿತೇಂದ್ರ ನಿಡ್ಯಮಲೆಯವರು ತಿಳಿಸಿದ್ದಾರೆ.