ಕೆವಿಜಿ ಇಂಟರ್ನ್ಯಾಷನಲ್ ಪಬ್ಲಿಕ್ ಸ್ಕೂಲ್ ನಲ್ಲಿ ಶ್ರೀಕೃಷ್ಣ ಜನ್ಮಾಷ್ಠಮಿ

0

 

 

ಸುಳ್ಯದ ಕೆವಿಜಿ ಇಂಟರ್ನ್ಯಾಷನಲ್ ಪಬ್ಲಿಕ್ ಸ್ಕೂಲ್ ನಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಶಿಶುವಿಹಾರದ ಮಕ್ಕಳಿಗೆ ಮುದ್ದುರಾಧ, ಮುದ್ದುಕೃಷ್ಣ ವೇಷ ಸ್ಪರ್ಧೆಯನ್ನು ಅ.20 ರಂದು ಆಯೋಜಿಸಲಾಯಿತು. ಕೆವಿಜಿ ಐಪಿಎಸ್ ನ ಪ್ರಾಂಶುಪಾಲ ಅರುಣ್ ಕುಮಾರ್, ಉಪ ಪ್ರಾಂಶುಪಾಲೆ ಶಿಲ್ಪಾ ಬಿದ್ದಪ್ಪ, ಪೋಷಕರು ಹಾಗೂ ಮಕ್ಕಳಿಂದ ದೀಪ ಬೆಳಗಿಸಿ, ಶಿಕ್ಷಕಿ ಹೇಮ ವೈಲಾಯ ಇವರ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಲಾಯಿತು. ಕಾರ್ಯಕ್ರಮಕ್ಕೆ ಶಾಲಾ ಆಡಳಿತ ಮಂಡಳಿಯ ಸಂಚಾಲಕ ಡಾ. ರೇಣುಕಾಪ್ರಸಾದ್ ಕೆ.ವಿ ಹಾಗೂ ಮುಖ್ಯಕಾರ್ಯನಿರ್ವಾಹಣಾಧಿಕಾರಿ ಡಾ. ಉಜ್ವಲ್ ಯು. ಜೆ ಶುಭ ಹಾರೈಸಿದರು. ಕೆವಿಜಿ ತಾಂತ್ರಿಕಾ ಮಹಾವಿದ್ಯಾಲಯದ ಉಪನ್ಯಾಸಕಿ ಡಾ. ಸ್ಮಿತಾ ಉಜ್ವಲ್, ಕೆವಿಜಿ ಡೆಂಟಲ್ ಕಾಲೇಜಿನ ಉಪನ್ಯಾಸಕಿ ಡಾ. ಸುಪ್ರಿಯ ಮತ್ತು ಕೆವಿಜಿ ಅಮರಜ್ಯೋತಿ ಪಿ.ಯು. ಕಾಲೇಜಿನ ಉಪನ್ಯಾಸಕಿ ಕವಿತಾ ಹಾಗೂ ಕೆವಿಜಿ ಪಾಲಿಟೆಕ್ನಿಕ್ ನ ಉಪನ್ಯಾಸಕ ಬಾಲಸುಬ್ರಮಣ್ಯ ಇವರುಗಳು ತೀರ್ಪುಗಾರರಾಗಿ ಕಾರ್ಯನಿರ್ವಹಿಸಿದರು.
ಈ ಸಂದರ್ಭದಲ್ಲಿ ಮುದ್ದು ರಾಧಾ ಮತ್ತು ಕೃಷ್ಣ ವೇಷ ಹಾಕಿದ ಪುಟಾಣಿಗಳು ಎಲ್ಲರ ಮನ ಸೆಳೆದರು. ಪೋಷಕರು ಭಾಗವಹಿಸಿ ಕಾರ್ಯಕ್ರಮಕ್ಕೆ ಮೆರುಗು ನೀಡಿದರು. ಭಾಗವಹಿಸಿದ ಎಲ್ಲಾ ಪುಟಾಣಿಗಳಿಗೆ ಸಮಾಧಾನಕರ ಬಹುಮಾನವನ್ನು ಕೊಟ್ಟು ಗೌರವಿಸಲಾಯಿತು. ಉತ್ತಮ ಪ್ರದರ್ಶನ ನೀಡಿದ ಮಕ್ಕಳಿಗೆ ಪ್ರಥಮ ದ್ವಿತೀಯ ಹಾಗೂ ತೃತೀಯ ಬಹುಮಾನವನ್ನು ನೀಡಲಾಯಿತು. ಪ್ರೀ ಕೆ. ಜಿ ಯ
ನೀರಜ್ ಕೃಷ್ಣ ಪ್ರಥಮ, ಹವೀಶ್ ದ್ವಿತೀಯ, ಇಶನ್ ತೃತಿಯ ಎಲ್ ಕೆ ಜಿ (ಎ ಮತ್ತು ಬಿ ವಿಭಾಗ)ಯಲ್ಲಿ ಸಾಯ ಮತ್ತು ದಿಶಾನ್ವಿ.ಬಿ ಪ್ರಥಮ, ತನ್ವಿ ಕಿಶೋರ್ ಮತ್ತು ಹನಿಕ ದ್ವಿತೀಯ, ಶಿಹಾನ್ ಗೌಡ ಮತ್ತು ಮನಿಷ್ಕ ತೃತೀಯ.
ಯುಕೆ ಜಿ ( ಎ ಮತ್ತು ಬಿ ವಿಭಾಗ ) ದಿಯಾನ್ ಸಚಿನ್ ಮತ್ತುಆಕಾಂಕ್ಷಾ ಪ್ರಥಮ, ತ್ರಯಾಕ್ಷ ಮತ್ತು ಗಾನ್ಯ ದ್ವಿತೀಯ, ಹಂಸಿನಿ ಮತ್ತು ಆಲ್ಫ್ರೆಡ್ ರಯನ್ ತೃತೀಯ ಬಹುಮಾನವನ್ನು ಪಡೆದುಕೊಂಡರು.

ಈ ಕಾರ್ಯಕ್ರಮದ ಬಳಿಕ ಮನೋರಂಜನೆಗಾಗಿ ಎಲ್ಲಾ ವಿದ್ಯಾರ್ಥಿಗಳಿಗೆ ಹಾಗೂ ಶಿಕ್ಷಕ ಶಿಕ್ಷಕೇತರ ವರ್ಗದವರಿಗೆ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಮೊಸರುಕುಡಿಕೆ ಒಡೆಯುವ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ಪೂರ್ವ ಪ್ರಾಥಮಿಕ ವಿಭಾಗದ ಶಿಕ್ಷಕಿ ಹರ್ಷಿತಾ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕಿ ಸರೋಜಿನಿ ವಂದನಾರ್ಪಣೆ ಮಾಡುವುದರ ಮೂಲಕ ಕಾರ್ಯಕ್ರಮವು ಮುಕ್ತಾಯಗೊಂಡಿತು.