ಆ.31- ಸೆ.4: ಸಿದ್ದಿವಿನಾಯಕ ಸೇವಾ ಸಮಿತಿ, ಸಾರ್ವಜನಿಕ ದೇವತಾರಾಧನಾ ಸಮಿತಿಯ ವತಿಯಿಂದ 54 ನೇ ವರ್ಷದ ಗಣೇಶೋತ್ಸವ

0

 

ಸುಳ್ಯ ಶ್ರೀ ಸಿದ್ಧಿವಿನಾಯಕ ಸೇವಾಸಮಿತಿ ,ಸಾರ್ವಜನಿಕ ಶ್ರೀ ದೇವತಾರಾಧನಾ ಸಮಿತಿ ಆಶ್ರಯದಲ್ಲಿ ಶ್ರೀ ಚೆನ್ನಕೇಶವ ದೇವಸ್ಥಾನದ ಮುಂಭಾಗದಲ್ಲಿ ನಡೆಯಲಿರುವ 54 ನೇ ವರ್ಷದ
ಸಾರ್ವಜನಿಕ ಗಣೇಶೋತ್ಸವವು ಆ.31 ರಿಂದ ಸೆ.04 ರ ತನಕ ಸಮಾಜ ಸಂಘಟನೆ ಮತ್ತು ಧರ್ಮ ಜಾಗೃತಿ ಗಾಗಿ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿರುವುದು.
ಆ.31 ರಂದು ಬೆಳಗ್ಗೆ ಗಣಪತಿ ಹೋಮ, ಉತ್ಸವದ ಉದ್ಘಾಟನೆ, ಬಳಿಕ ಪುಟಾಣಿ ಮಕ್ಕಳಿಗೆ ಸ್ಪರ್ಧೆಗಳು ನಡೆಯಲಿದೆ.
ಅಪರಾಹ್ನ ಭಜನಾ ಕಾರ್ಯಕ್ರಮ, ಸಂಜೆ ಸಭಾ ಕಾರ್ಯಕ್ರಮ, ರಾತ್ರಿ ಗಂಟೆ 7.00 ರಿಂದ ವಿವೇಕಾನಂದ ವಿದ್ಯಾ ಸಂಸ್ಥೆಯ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ,
ಸೆ.1 ರಂದು ಅಪರಾಹ್ನ ಭಜನಾ ಕಾರ್ಯಕ್ರಮ, ಪುತ್ತೂರು ಶಾರದಾ ಕಲಾ ಕೇಂದ್ರದ ವಿದ್ಯಾರ್ಥಿ ಬಳಗದಿಂದ ನೃತ್ಯ ವೈವಿಧ್ಯ ಮತ್ತು ನೃತ್ಯ ರೂಪಕ, ಸೆ.2 ರಂದು ಅಪರಾಹ್ನ ಭಜನೆ, ಸಂಜೆ ಪೂರ್ಣಿಮಾ ಮಡಪ್ಪಾಡಿಯವರಿಂದ ದಾಸರ ಕೀರ್ತನೆಗಳು, ಕಾಸರಗೋಡು ಶ್ರದ್ಧಾ ಭಟ್ ನಾಯರ್ ಪಳ್ಳ ರಿಂದ ಹರಿಕಥೆ, ಸೆ.3 ರಂದು ಅಪರಾಹ್ನ ಭಜನೆ, ಸಂಜೆ ಕಶೆಕೋಡಿ ಸೂರ್ಯನಾರಾಯಣ ಭಟ್ ರವರಿಂದ ಧಾರ್ಮಿಕ ಉಪನ್ಯಾಸ, ರಾತ್ರಿ – ತುಳು ನಾಟಕ, ಸೆ.4 ರಂದು ಬೆಳಗ್ಗೆ 108 ತೆಂಗಿನಕಾಯಿ ಗಣಪತಿ ಹವನ, ಪ್ರಸಾದ ವಿತರಣೆ, ಸಾರ್ವಜನಿಕ ಅನ್ನ ಸಂತರ್ಪಣೆ, ಮಧ್ಯಾಹ್ನ ಗಂಟೆ 3.00 ರಿಂದ ವಿಸರ್ಜನಾ ಶೋಭಾಯಾತ್ರೆಯು ಸುಳ್ಯ ದ ಪ್ರಮುಖ ಬೀದಿಗಳಲ್ಲಿ ಸಾಗಿ ಪಯಸ್ವಿನಿ ನದಿಯಲ್ಲಿ ಜಲಸ್ಥಂಭನವಾಗಲಿರುವುದು.
ಆ.28 ರಂದು ಗಣೇಶೋತ್ಸವದ ಅಂಗವಾಗಿ ಮಕ್ಕಳಿಗೆ ಮತ್ತು ಸಾರ್ವಜನಿಕ ಮಾತೆಯರಿಗೆ ವಿವಿಧ ಆಟೋಟ ಸ್ಪರ್ಧೆಗಳು ನಡೆಯಲಿರುವುದು ಎಂದು ಸಮಿತಿಯ ಅಧ್ಯಕ್ಷ ಸೋಮನಾಥ .ಕೆ ರವರು ತಿಳಿಸಿರುತ್ತಾರೆ.