ಪಂಜ ಲಯನ್ಸ್ ಕ್ಲಬ್ ಪದಗ್ರಹಣ ಸಮಾರಂಭ

0

ಪುರುಷೋತ್ತಮ ದಂಬೆಕೋಡಿಯವರ ತಂಡ ಅಧಿಕಾರ ಸ್ವೀಕಾರ

ಪಂಜ ಲಯನ್ಸ್ ಕ್ಲಬ್ ಇದರ ನೂತನ ಅಧ್ಯಕ್ಷ ಪುರುಷೋತ್ತಮ ದಂಬೆಕೋಡಿ ಮತ್ತು ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವು ಆ.20.ರಂದು ಪಡ್ಪಿನಂಗಡಿ ‌ನಡ್ಕ ಶಿವಗೌರಿ ಕಲಾಮಂದಿರದಲ್ಲಿ ಜರುಗಿತು.ಪದಗ್ರಹಣ ಅಧಿಕಾರಿ ಮತ್ತು ಮುಖ್ಯ ಅತಿಥಿಯಾಗಿ ಜಿಲ್ಲಾ ಉಪ ರಾಜ್ಯಪಾಲ ಮೆಲ್ವಿನ್ ಡಿ.ಸೋಜರವರು ಮಾತನಾಡಿ “ಪಂಜ ಲಯನ್ಸ್ ಕ್ಲಬ್ ಜಿಲ್ಲೆಯಲ್ಲಿ ಅತ್ಯುತ್ತಮ ಕ್ಲಬ್ ಆಗಿ ಬೆಳೆದಿದೆ. ಲಯನ್ಸ್ ಮೇಲೆ ಇಟ್ಟಿರುವ ಗೌರವದಿಂದ ಮಾತ್ರ ಇದು ಸಾಧ್ಯವಾಗಿದೆ.ಇಲ್ಲಿಯ ಕ್ಲಬ್ ನಲ್ಲಿ ವಿಶೇಷವಾಗಿ ಒಗ್ಗಟ್ಟಿದೆ.ಮುಂದೆ ಇನ್ನಷ್ಟು ಎತ್ತರಕ್ಕೆ ಬೆಳೆಯಲಿ.” ಎಂದು ಶುಭ ಹಾರೈಸಿದರು.ಲಯನ್ಸ್ ಕ್ಲಬ್ ಅಧ್ಯಕ್ಷ ಸಂತೋಷ್ ಜಾಕೆ ಸಭಾಧ್ಯಕ್ಷತೆ ವಹಿಸಿದ್ದರು . ಪದಗ್ರಹಣ ಬಳಿಕ ನೂತನ
ಅಧ್ಯಕ್ಷ ಪುರುಷೋತ್ತಮ ದಂಬೆಕೋಡಿ ಸಭಾಧ್ಯಕ್ಷತೆ ವಹಿಸಿದ್ದರು.

ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನ ನಿರ್ದೇಶಕ ಶಶಿ ಕುಮಾರ್ ರೈ ಬಾಲ್ಯೊಟ್ಟು ಮುಖ್ಯ ಅತಿಥಿಯಾಗಿ ಶುಭ ಹಾರೈಸಿದರು.ಪ್ರಾಂತೀಯ ಅಧ್ಯಕ್ಷೆ ಸಂಧ್ಯಾ ಸಚಿತ್ ರೈ, ವಲಯಾಧ್ಯಕ್ಷ ಡಾ.ಸಿದ್ದಲಿಂಗ, ಜಿಲ್ಲಾ ಉಪ ರಾಜ್ಯಪಾಲ ಮೆಲ್ವೀನ್ ಡಿ.ಸೋಜರವರ ಪತ್ನಿ ಸ್ಮಿತಾ ಡಿ.ಸೋಜ,ಪಂಜ ಲಯನ್ಸ್ ಕ್ಲಬ್ ನಿಕಟ ಪೂರ್ವಾಧ್ಯಕ್ಷ ಕುಮಾರಸ್ವಾಮಿ ಕಿನ್ನಿಕುಮ್ರಿ ,ಕಾರ್ಯದರ್ಶಿ ರಾಜೇಶ್ ರೈ , ನೂತನ ಕಾರ್ಯದರ್ಶಿ ನಾಗೇಶ್ ಕಿನ್ನಿಕುಮ್ರಿ, ಕೋಶಾಧ್ಯಕ್ಷ ಕರುಣಾಕರ ಎಣ್ಣೆಮಜಲು
ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಇದೇ ವೇಳೆ ಜಿಲ್ಲಾ ಉಪ ರಾಜ್ಯಪಾಲ ಮೆಲ್ವಿನ್ ಡಿ.ಸೋಜ ಮತ್ತು ಸ್ಮಿತಾ ಡಿ.ಸೋಜ ದಂಪತಿಗಳನ್ನು ಸನ್ಮಾನಿಸಲಾಯಿತು.ಈ ಸಂದರ್ಭದಲ್ಲಿ ಜಾಕೆ ಮಾಧವ ಗೌಡ ಮತ್ತು ಅವರ ಪತ್ನಿ ಶ್ರೀಮತಿ ಲೀಲಾ ಮಾಧವ ಜಾಕೆ ಉಪಸ್ಥಿತರಿದ್ದರು.


ಗೌರವ-ಸನ್ಮಾನ :
ಪಂಜ ಲಯನ್ಸ್ ಕ್ಲಬ್ ಕಟ್ಟಡಕ್ಕೆ ಸ್ಥಳದಾನ ಮಾಡಿದ ಚಿದಾನಂದ ಬಿಳಿಮಲೆ ಮತ್ತು ಶ್ರೀಮತಿ ಯಶೋಧ ಚಿದಾನಂದ ಬಿಳಿಮಲೆ, ಏನೆಕಲ್ಲಿನಲ್ಲಿ ರಿಕ್ಷಾ ನಿಲ್ದಾಣ ನಿರ್ಮಿಸಿ ಕೊಟ್ಟ ತುಕಾರಾಂ ಏನೆಕಲ್ಲು, ಸಭಾಭವನ ಒದಗಿಸಿ ಕೊಟ್ಟ ‌ಸುರೇಶ್ ಕುಮಾರ್ ನಡ್ಕ, ಕಾರ್ಯಕ್ರಮಕ್ಕೆ ಸಹಕರಿಸಿದ ಅನುರಾಜ ಕಕ್ಯಾನ ರವರನ್ನು ಗೌರವಿಸಲಾಯಿತು.ಸೇವಾ ಚಟುವಟಿಕೆಯಾಗಿ ರಮೇಶ್ ಅಳ್ಪೆ ರವರ ಚಿಕಿತ್ಸೆಗೆ ರೂ.5000 ನೀಡಲಾಯಿತು.


ಕೆಂಪೇಗೌಡ ಪ್ರಶಸ್ತಿ ಪುರಸ್ಕೃತ ಜಾಕೆ ಮಾಧವ ಗೌಡ, ರಂಗಭೂಮಿ ಪ್ರಶಸ್ತಿ ಪುರಸ್ಕೃತ ತುಕಾರಾಂ ಏನೆಕಲ್ಲು, ಶಿಕ್ಷಣ ಕ್ಷೇತ್ರದ ಚುನಾವಣೆ ಸ್ಪರ್ಧಿಸಿದ
ಪುರಂದರ ಪನ್ಯಾಡಿ ಯವರನ್ನು ಗೌರವಿಸಲಾಯಿತು.ಜಿಲ್ಲಾ ಸಂಪುಟಕ್ಕೆ ಆಯ್ಕೆ ಗೊಂಡ ಸದಸ್ಯರನ್ನು ಗೌರವಿಸಲಾಯಿತು.

ವಿದ್ಯಾರ್ಥಿಗಳಿಗೆ ಗೌರವ :
ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ವಿಜ್ಞಾನ ವಿಭಾಗದಲ್ಲಿ ವಿಶಿಷ್ಟ ಶ್ರೇಣಿ ಪಡೆದ ತನ್ಮಯ್ ಕೆ. ಕಿನ್ನಿಕುಮ್ರಿ, ಎಸ್.ಎಸ್ ಎಲ್.ಸಿ ಪರೀಕ್ಷೆಯಲ್ಲಿ ವಿಶಿಷ್ಟ ಶ್ರೇಣಿ ಪಡೆದ ಆರ್ಯ ಬಾಬ್ಲುಬೆಟ್ಟು, ಸೃಷ್ಠಿ ದಂಬೆಕೋಡಿ ಯವರನ್ನು ಗೌರವಿಸಲಾಯಿತು.


ಕಾರ್ಯಕ್ರಮದಲ್ಲಿ ವಾಸುದೇವ ಮೇಲ್ಪಾಡಿ ವೇದಿಕೆಗೆ ಆಹ್ವಾನಿಸಿದರು.ದಿಲೀಪ್ ಬಾಬ್ಲುಬೆಟ್ಟು ಪ್ರಾರ್ಥಿಸಿದರು. ಮೋಹನ ಗೌಡ ಧ್ವಜ ವಂದನೆ ಮಾಡಿದರು.ಕರುಣಾಕರ ಎಣ್ಣೆಮಜಲು ಲಯನ್ಸ್ ನೀತಿ ಸಂಹಿತೆ ಓದಿದರು. ಪುರುಷೋತ್ತಮ ದಂಬೆಕೋಡಿಯವರ ಪತ್ನಿ ಶ್ರೀಮತಿ ವಿದ್ಯಾ ದಂಬೆಕೋಡಿ ದೀಪ ಪ್ರಜ್ವಲನೆ ಗೊಳಿಸಿದರು. ಬಾಲಕೃಷ್ಣ ಕುದ್ವ ನೂತನ ಸದಸ್ಯರ ಪರಿಚಯಿಸಿದರು. ಪುರಂದರ ಪನ್ಯಾಡಿ ಪದಾಧಿಕಾರಿಗಳನ್ನು ಪರಿಚಯಿಸಿದರು. ಅತಿಥಿಗಳನ್ನು , ಸನ್ಮಾನಿತರನ್ನು ಸೀತಾರಾಮ ಕುದ್ವ. ಕುಮಾರ ಸ್ವಾಮಿ ಕಿನ್ನಿಕುಮ್ರಿ, ಶಶಿಧರ ಪಳಂಗಾಯ ಪರಿಚಯಿಸಿದರು.ನಾಗೇಶ್ ಕಿನ್ನಿಕುಮ್ರಿ ವಂದಿಸಿದರು.