ಸುಳ್ಯ ನಗರದ ಪಾರ್ಕಿಂಗ್ ವ್ಯವಸ್ಥೆಗೆ ಪೊಲೀಸ್ ಇಲಾಖೆಗೆ ಸಹಕರಿಸುತ್ತಿರುವ ಸುಳ್ಯ ನಗರದ ವರ್ತಕರು

0

 

  ನೋ ಪಾರ್ಕಿಂಗ್ ಬೋರ್ಡುಗಳನ್ನು ಅಳವಡಿಸಿ ಸಂಚಾರ ವ್ಯವಸ್ಥೆಗೆ ಸಹಕಾರ

ಸುಳ್ಯ ನಗರದ ಮುಖ್ಯ ರಸ್ತೆ ಮಾಣಿ ಮೈಸೂರು ಹೆದ್ದಾರಿಗೆ ಹೊಂದಿಕೊಂಡಿದ್ದು ದಿನನಿತ್ಯ ಟ್ರಾಫಿಕ್ ಸಮಸ್ಯೆ ಕಂಡುಬರುವ ಪ್ರದೇಶವಾಗಿದೆ.
ಇದರಿಂದ ಸಾರ್ವಜನಿಕರಿಗೆ ಅನುಕೂಲವಾಗುವಂತೆ ಸುಳ್ಯ ಪೊಲೀಸ್ ಇಲಾಖೆ ವತಿಯಿಂದ ದಿನ ಬಿಟ್ಟು ದಿನ ರಸ್ತೆಯ ಒಂದೊಂದು ಭಾಗದಲ್ಲಿ ವಾಹನ ನಿಲುಗಡೆಗೆ ಅವಕಾಶವನ್ನು ನೀಡಲಾಗಿತ್ತು.
ಆದರೆ ಹೊರ ಜಿಲ್ಲೆ ಮತ್ತು ಊರುಗಳಿಂದ ಬರುವವರು ಹೆದ್ದಾರಿಯಲ್ಲಿ ಎಲ್ಲೆಂದರೆ ಎಲ್ಲಿ ವಾಹನಗಳನ್ನು ನಿಲ್ಲಿಸಿ ಇದರಿಂದ ಟ್ರಾಫಿಕ್ ಸಮಸ್ಯೆ ಉಂಟಾಗುತ್ತಿತ್ತು.
ಈ ಸಮಸ್ಯೆಯನ್ನು ತಪ್ಪಿಸಲು ಇದೀಗ ಸ್ಥಳೀಯ ವರ್ತಕರು ಪೊಲೀಸ್ ಇಲಾಖೆಯೊಂದಿಗೆ ಕೈಜೋಡಿಸಿದ್ದು ತಮ್ಮ ತಮ್ಮ ಅಂಗಡಿ ಮುಂಗಟುಗಳ ಮುಂಭಾಗದಲ್ಲಿ ಪಾರ್ಕಿಂಗ್ ಇಲ್ಲದೆ ಇರುವ ದಿನ ನೋ ಪಾರ್ಕಿಂಗ್ ಬೋರ್ಡ್ ಗಳನ್ನು ಅಳವಡಿಸಿ ಸಹಕರಿಸುತ್ತಿದ್ದಾರೆ.
ವರ್ತಕರ ಈ ಸಹಕಾರಕ್ಕೆ ಸುಳ್ಯ ಪೊಲೀಸ್ ಠಾಣಾ ಉಪನಿರೀಕ್ಷಕ ದಿಲೀಪ್ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ. ಇದೇ ರೀತಿ ಎಲ್ಲಾ ವರ್ತಕರು ಸಹಕಾರ ನೀಡುವಂತೆ ಅವರು ಕೇಳಿಕೊಂಡಿದ್ದಾರೆ.