ಸಂಪಾಜೆ :  ಸ್ವಚ್ಛತಾ ಕಾರ್ಯಕ್ರಮ

0

 

ಸಂಪಾಜೆ ಗ್ರಾಮದ ಕಡೆಪಾಲ ಶ್ರೀ ವಿಷ್ಣು ಗೆಳೆಯರ ಬಳಗ ಹಾಗೂ ಲಕ್ಷ್ಮಿ ಸ್ತ್ರೀ ಶಕ್ತಿ ಸಂಘಟನೆ ನೇತೃತ್ವ ಹಾಗೂ ಗ್ರಾಮ ಪಂಚಾಯತ್ ಸಹಭಾಗಿತ್ವದಲ್ಲಿ 75 ನೇ ಸ್ವಾತಂತ್ರೋತ್ಸವದ ಅಂಗವಾಗಿ ಸ್ವಚ್ಛತಾ ಕಾರ್ಯಕ್ರಮ ಕಡೆಪಾಲದಿಂದ ಕಲ್ಲುಗುಂಡಿ ಪೇಟೆ ತನಕ ನಡೆಯಿತು.

ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಜಿ. ಕೆ. ಹಮೀದ್ ಗೂನಡ್ಕ, ಸದಸ್ಯರಾದ ಎಸ್. ಕೆ. ಹನೀಫ್ ಸಂಪಾಜೆ ಕಾರ್ಮಿಕ ಘಟಕದ ಶ್ರೀಧರ್, ಗ್ರಾಮ ಪಂಚಾಯತ್ ಸ್ವಚ್ಛತಾ ನಿರ್ವಾಹಕ ಗುರುವಪ್ಪ, ಭೋಜಪ್ಪ, ಅಂಗನವಾಡಿ ಕಾರ್ಯಕರ್ತೆ ಪುಷ್ಪ ಸಂಘಟನೆಯ ಸರ್ವ ಸದಸ್ಯರು ಹಾಜರಿದ್ದರು.